________________
8೭೦ ಯವನ ಯಾಮಿನೀ ವಿನೋದ ವಿಂಬ, ಐಶ್ವಯುಕ್ತನಾಗಿದ್ದರೂ, ಆಡಂಬರವಾಗಿರುವುದಕ್ಕಿಂತಲ, ನೆಮ್ಮದಿ ಯಾಗಿಯೂ, ಗೌರವಸ್ಥನಾಗಿಯೂ, ಇರುವುದೇಮೇಲೆಂದು, ಗೊಬೈ ದಿಂದ ವಾಸಮಾಡುತ್ತಿದ್ದನು. ಆತನಿಗೆ ನಾನೊಬ್ಬನೇ ಮಗನು, ಆತನ ಸತ್ತುಹೋದಮೇಲೆ, ವಿದ್ಯಾವಂತನಾಗಿಯೂ, ಅಧಿಕವಾದ ಐಶ್ನವನ್ನು ಅನುಭವಿಸುವುದಕ್ಕೆ ಯೋಗ್ಯನಾಗಿದ್ದನು, ಆದುದರಿಂದ ನಾನು ಧನವನ್ನು ವ್ಯರ್ಥಮಾಡದೆ ಜನರು ಮೆಚ್ಚುವಂತೆ ಉಪಯೋಗಿಸುತ್ತ, Aವ್ಯಾ ಮೂಹವನ್ನು ತೊರೆದು, ಅವರಸಂಗಡ ಸಂಭಾಷಣಾದಿಗಳನ್ನೂ ಸಹಾ ಕೊರೆದು, ಎಚ್ಚರಿಕೆಯಿಂದ ಇರುತಿದ್ದನು. ಹೀಗಿರುವಲ್ಲಿ ನಾನು ಒಂದಾ ನೂಂದುದಿನ, ದಾರಿಯಲ್ಲಿ ಹೋಗುತ್ತಿರುವಾಗ, ಅನೇಕಜನರು ಗುಂಪು ಕೂಡಿದುದರಿಂದ, ಅವರನ್ನು ಸಂದಿಸಬಾರದೆಂದು ಬೇರೆ ಮಾರ್ಗದಲ್ಲಿ ತಿರುಗಿ ಒಂದಾನೊಂದು ಮನೆಯಬಾಗಿಲಲ್ಲಿ ನಿಂತುಕೊಂಡನು, ಕಿಟಕಿಯಲ್ಲಿ ಆಮನೆಯ ಒಳಭಾಗವು ಮನೋಹರವಾದ, ಹೂಗಿಡದಿಂದ ಕೂಡಿದ್ದ ಒಂದು ಕುಂಡವಿದ್ದುದನ್ನು ನೋಡಿದೆನು, ಅದನ್ನು ನೋಡಿದ ಕೂಡಲೆ, ಬಾಗಿಲನ್ನು ತೆರೆದುಕೊಂಡು ಒಬ್ಬಾನೊಬ್ಬ ಮೋಹಿನಿಯು ಹೊರಗೆಬಂದು, ಹೂವಿನ ಕುಂಡದಲ್ಲಿದ್ದ ನೀರನ್ನು ತೆಗೆದು ನನ್ನನ್ನು ದೃಷ್ಟಿಸಿನೋಡಲು, ನಾನು ಆಕೆಯನ್ನು ನೋಡಿ, ಮೊದಲು ಸ್ಮಿ ವಿಷಯದಲ್ಲಿ ಎಷ್ಟು ವೈರಾಗ್ಯ ಯುಕ್ತನಾಗಿದ್ದನೋ, ಆಗ ಅದಕ್ಕಿಂತಲೂ ಅಧಿಕವಾದ ವ್ಯಾಮೋಹ ವನ್ನು ಹೊಂದಿದನು. ಇಷ್ಮೆಲ್ಲವೂ ಆದಬಳಿಕ ಆಕ ನನ್ನನ್ನು ಮದನಬಾಣಗಳಪಟ್ಟಿಗ ಗುರಿಮಾಡಿ, ಬಾಗಿಲನ್ನು ಹಾಕಿಕೊಂಡು ಹೊರಟುಹೋದಳು. ಬಳಿಕ ನಾನು ಮೋಹಾವೇಶದಿಂದ ಮರ್ಛಾಕಾಂತನಾಗಿರುವಲ್ಲಿ, ಬೀದಿಯಲ್ಲಿ ಒಬ್ಬಾನೊಬ್ಬ ಖಾಜಿಯು ಕುದುರೆಯನ್ನೇರಿ, ನಾದುಮಂದಿ ಪರಿ ವಾರದವರೊಡನೆ, ನಾನು ಕುಳುತಿದ್ದ ಮನೆಯಬಳಿಗೆ ಬರಲು, ಆತನೇ ಆ ಹುಡುಗಿಯ ತಂದೆಯಂಬುದನ್ನು ನಾನು ತಿಳಿದುಕೊಂಡೆನು. ಬಳಿಕ ನಾನು ಮೊಹನಿದೆ ಯನ್ನು ಅನುಭವಿಸುತ್ತ, ಮನೆಗೆಬಂದು ತಾವವನ್ನು ಸೈರಿಸಲಾರದೆ, ಹಾಸಿಗೆಯಲ್ಲಿ ಮಲಗಿ ಹೊರಳಾಡುತ್ತಿರಲು, ಮನೆಯವ ರಲ್ಲ, ನನ್ನ ದುರವಸೆಯನ್ನು ನೋಡಿ, ' ವ್ಯಸನಾಕಾಂತರಾದರು.