________________
8سو8 ಯವನ ಯಾಮಿನೀ ವಿನೋದ ಎಂಬ, ಕೋಪ ಬಂದರೂ, ನಾನು ಅದನ್ನು ಮರೆಮಾಚಿ ಹುಸಿನಗೆಯನ್ನು ಬೀರುತ್ತಾ, ಅಯಾ ! ನನಗೆ ಕೆಲಸವಿಲ್ಲದಿದ್ದರೆ, ನಾನು ನಿನ್ನ ಮನೆಗೆ ಬರುತ್ತಿದ್ದನು. ಈದಿನ ನನಗೆ ತುಂಬ ಆವಶ್ಯಕವಾದ ಕಾರವಿರುವುದು, ಈದಿನದಮಟ್ಟಿಗೆ ನನ್ನ ಇಷ್ಟಾನುಸಾರವಾಗಿ ಮಾಡಬೇಕಾಗಿರುವುದು, ಆದುದರಿಂದ ಬೇಗ ಕರಮಾಡಿ ನಿನ್ನಷ್ಟಕ್ಕೆ ನೀನು ಹೊರಟುಹೋಗು. ಒಂದುವೇಳೆ ನಿನ್ನ ಸ್ನೇಹಿತರು ಬಂದು ಕಾದುಕೊಂಡಿರಬಹುದೆಂದು ಹೇಳಿ ದನು. ಆದರೂ ಆತನು ಸುಮ್ಮನಾಗದೆ, ಅಯಾ ! ನಾನು ಹೇಳಿದಮಾತು ಗಳನ್ನು ಕೇಳಿ, ನನ್ನ ಸ್ನೇಹಿತರು ಬಹು ಒಳೆಯವರು. ನೀವು ಒಂದು ಸಾರಿ ನನ್ನ ಮನೆಗೆ ಬಂದು ನಮ್ಮ ಸಮರದಲ್ಲಿ ಕಲೆತುದುದೇ ಆದರೆ, ಬಳಿಕ ನಿಮ್ಮ ಸ್ನೇಹಿತರೆಲ್ಲರನ್ನೂ ಮರತೇಬಿಡುವಿರಿ. ಆದುದರಿಂದ ನೀವು ನಮ್ಮ ಸ್ನೇಹವನ್ನೆಂದಿಗೂ ಬಿಡಲಾರದೆ ಆನಂದಸಂತೋಷದಲ್ಲಿ ಮುಳುಗಿರುವಿರಿ ಎಂದು ಹೇಳಲು, ನಾನು ಈ ವಿಷಯವನ್ನು ಕುರಿತು, ನೀನು ಮಾತನಾಡ ಬೇಡ, ನಾನು ನಿನ್ನ ಮನೆಗೆ ಬರುವುದಿಲ್ಲವೆಂದು ಹೇಳಿದನು. ಹೀಗ ವಿನಯದಿಂದಲೂ, ಕೋಪದಿಂದಲೂ, ಆತನನ್ನು ಎಷ್ಟು ವಿಧವಾಗಿ ಕೇಳಿಕೊಂಡರೂ, ಪ್ರಯೋಜನ ವಿಲವಾಯಿತು. ಆದರೆ ನಾಯಿಂದನು, ನನ್ನನ್ನು ನೋಡಿ, ಸ್ವಾಮಿ! ನೀವು ನನ್ನ ಮನೆಗೆ ಬಾರದೆ ಹೋದರೆ, ನಾನಾದರೂ ನಿಮ್ಮ ಸಂಗಡ ಬರಬೇಕು. ನೀವು ಇನಾಮು ಕೊಟ್ಟಿರುವ ಈ ಪದಾರ್ಥಗಳನ್ನು ತೆಗೆದುಕೊಂಡುಹೋಗಿ ನನ್ನ ಮನೆಗೆ ತಲಪಿಸಿಬರುವನು. ಒಂದುವೇಳೆ ನನ್ನ ಸ್ನೇಹಿತರು ಬಂದರೆ ಸುಖವಾಗಿ ಭುಂಜಿಸುತ್ತಿರಲಿ, ನಿಮ್ಮನ್ನು ಒಂಟಿಯಾಗಿ ಕಳುಹಿಸುವುದು ನಮಗೆ ಮರಾದೆಯಲ್ಲ, ಅಂತಹ ಕಾರ್ಯವನ್ನು ನಾನು ಮಾಡತಕ್ಕವನೂ ಅಲ್ಲ, ದಯಮಾಡಿ ನನ್ನ ವಿಜ್ಞಾಪನೆಯನ್ನು ನಡೆಸಿಕೊಡಬೇಕೆಂದು ಬೇಡಿ ಕೊಂಡನು. ನಾನು ಆತನನ್ನು ನೋಡಿ, ಅಯಾ! ಸದ್ಯ ನಿನ್ನ ಪುಣ್ಯಕ್ಕೆ ನನ್ನನ್ನು ಇಮ್ಮಕ್ಕೆ ಆದರೂ ಬಿಟ್ಟುಬಿಡು, ನಿನ್ನ ಈ ಹಾಳು ಹರಟೆ ಗಳನ್ನು ಸಾಕುವಾಡಿ, ನಿನ್ನ ಮನೆಗೆ ಹೋಗಿ ಸ್ನೇಹಿತರಸಂಗಡ ಮಾತನಾಡಿ ಅವರಸಂಗಡ ಊಟ ಉಪಚಾರಾದಿಗಳನ್ನು ಮಾಡುತ್ತಾ, ಆನಂದದಿಂದಿರು. ನಾನು ನನ್ನ ಸ್ನೇಹಿತರಮನೆಗೆ ಹೋಗುವಾಗ, ಒಬ್ಬನೇ ಹೋಗಬೇಕು,