________________
8y ಅರೇಬಿರ್ಯ ನೈಟ್ಸ್ ಕಥೆಗಳು, ಅದು ರಹಸ್ಯವಾದ ಕಾರ್ಯ, ಅಲ್ಲದೆ ನೀನು ಬರತಕ್ಕ ಸಲವೂ ಅಲ್ಲ. ಆದುದರಿಂದ ನಾನು ವಿನಹ ಮತ್ತಾರೂ ಅಲ್ಲಿಗೆ ಹೋಗಕೂಡದೆಂದನು, ಆಗ ಆತನು, ನಿಮ್ಮ ಸ್ನೇಹಿತರ ಮನೆಯಲ್ಲಿ ಔತನವಾದರೆ, ನಿಮ್ಮ ಸಂಗಡ ನಾನು ಬರುವುದಕ್ಕೆನಾದರೂ ಅಡ್ಡಿಯುಂಟಿ ? ಏಕೆ, ನನ್ನಂತಹ ಪರಿಹಾಸಕನು ನಿಮ್ಮ ಸಂಗಡ ಕುಳಿತುಕೊಂಡು ಮಾತನಾಡುತ್ತಿದ್ದರೆ, ನಿಮ್ಮಗಳಿಗೆ ಮಹ ದಾನಂದ ಉಂಟಾಗುವದಲ್ಲಾ! ನೀನು ಏನು ಮಾಡಿದರೂ, ನಾನು ಬಿಡ ತಕ್ಕವನಲ್ಲ, ನಿಮ್ಮ ಸಂಗಡ ಬರುವುದಕ್ಕೆ ಸಿದ್ಧನಾಗಿರುವನು ಎಂದನು. ಈ ನಿರ್ಭಾಗ್ಯನ ಮಾತುಗಳನ್ನು ಕೇಳಿ, ನನ್ನ ವ್ಯಥೆಯು ಅಧಿಕವಾಯಿತು, ಅರಿ ಮಧ್ಯಾಹ್ನ ಕಾಲದ ಜನಕ್ಕಾಗಿ ಮುನೀತಿಗೆ ಸರ್ವರೂ ಬರು ವಂತೆ ಕೂಗಿ ಹೇಳುವ ಮಂತ್ರ ಮಾಲೆಯು ನನ್ನ ಕಿವಿಗೆ ಬಿದ್ದಿತು. ಇನ್ನು ಈತನಸಂಗಡ ಮಾತನಾಡಿ ಹೊತ್ತು ಕಳವುದು ಸರಿಯಲ್ಲವೆಂದು ತಿಳಿದು, ಸುಮ್ಮನಾದೆನು, ನಂತರ ಕೋರವಾದಮೇಲೆ ನಾನು ನನ್ನ ಆಳುಗಳನ್ನು ಕರೆದುಕೊಂಡು, ಈ ಪದಾರ್ಥಗಳನ್ನು ನಿನ್ನ ಮನೆಗೆ ಸೇರಿಸಿ ಪುನಹ ಬೇಗ ಬಾ ! ನಿನಗೊಸ್ಕರವಾಗಿ ನಾನು ಕಾದುಕೊಂಡಿರುವನು, ಎಂದು ಹೇಳಲು, ಆತನು ಹೊರಟನು. ಬಳಿಕ ನಾನು ಬಟ್ಟೆಗಳನ್ನು ಹಾಕಿಕೊಂಡು, ಹೊಗಡುವುದಕ್ಕೆ ಸಿದ್ಧನಾದಕೂಡಲೆ, ಜವಾಂತ್ಯದಲ್ಲಿ ಧ್ಯಾನಿಸುವ ಮೂಲ ಮಂಘ ಧನಿಯನ್ನು ಕೇಳಿ, ಸಡಗರದಿಂದ ಹೊರಡಲಾರಂಭಿಸಿದನು. ಆದರೆ ಈ ನಿರ್ಭಾಗ್ಯನಾದ ಮೃತ್ಯುವು ನನ್ನ ಚಾರಕರಿಗೆ ತನ್ನ ಮನೆಯನ್ನು ತೋರಿಸಿ, ತಾನು ನನ್ನ ಹಿಂದೆ ಬರುವುದಕ್ಕಾಗಿ, ಬೀದಿಯಲ್ಲಿ ಕಾದುಕೊಂಡಿದ್ದನು. ನಾನು ಖಾಜಿಯ ಮನೆಯಬಳಿಗೆ ಬಂದು, ಹಿಂತಿರುಗಿ ನೋಡಿದಾಗ ಈ ದುಮ್ಮನು ಹಿಂದೆ ಬರುತ್ತಿರುವುದನ್ನು ಕಂಡು, ಭಯ ಪಟ್ಟನು. ನಾನು ಬರುವ ಹೊತ್ತಿಗೆ ಸರಿಯಾಗಿ, ಖಾಜಿಮನೆಯ ಬಾಗಿಲು ತರದು ಇದ್ದಿತು. ಮುದುಕಿಯು ಕಾದುಕೊಂಡಿದ್ದು, ನನ್ನನ್ನು ಆ ಕನ್ಯಾ ಮಣಿಯ ಅಂತಃಪುರಕ್ಕೆ ಕರೆದುಕೊಂಡು ಹೋದಳು. ನಾವು ಸ್ವಲ್ಪ ಹೊತ್ತು ವಿನೋದವಾಗಿ ಮಾತನಾಡುತ್ತಿರುವಲ್ಲಿ ಬೀದಿಯಲ್ಲಿ ಶಬ್ದವಾಯಿತು, ಆಗ ಕಿಟಕಿಯಲ್ಲಿ ನೋಡುವಾಗ, ಖಾಜಿಯು ಧ್ಯಾನವನ್ನು ತೀರಿಸಿಕೊಂಡು ಮನೆಗೆ ಬರುವುದಕ್ಕಾಗಿ ಬರುತ್ತಿದ್ದನು. ಹೊರಗಡೆ ಬೀದಿಯಲ್ಲಿ ಕೌರಕನ