________________
(೬೩) ಅರೇಬಿರ್ಯ ನೈಟ್ಸ್ ಕಥೆಗಳು. ೪೯೭ ಅನಕೈಯಲ್ಲಿ ಕೆಲಸಮಾಡಿಸಿಕೊಂಡು, ಹಣವನ್ನು ಕೊಡದೆ ಗೋಳು ಹೊಯು ಕೊಂಡುದಲ್ಲದೆ, ಮತ್ತೊಂದು ವಿಧವಾಗಿ ಆತನಿಗೆ ತನ್ನ ಮೇಲೆ ಇರುವ ದೇಹವನ್ನು ಗಂಡನಿಗೆ ತಿಳಿಯಪಡಿಸಿ, ಶಿಕ್ಷೆಯನ್ನು ಮಾಡಿಸಿ ದಳು, ಹೇಗೆಂದರೆ : ಆ ಗಾಣದವನು ನನ್ನ ಅಣ್ಣನನ್ನು ಒಂದಾನೊಂದು ದಿನ ಊಟಕ್ಕೆ ಕರೆದು, ಅಸಹ್ಯವಾದ ಊಟವನ್ನಿಟ್ಟು ಅಯಾ ! ಈಗ ಬಹಳ ಹೊತ್ತಾದುದರಿಂದ ನೀನು ಮನೆಗೆ ಹೋಗಲಾರೆ, ಆದುದರಿಂದ ಮಲಗಿಕೊಂಡಿರು, ಎಂದು ಹೇಳಿ ಒಂದುಕಡೆ ಹಾಸಿಗೆಯನ್ನು ಹಾಕಿ ಕೊಟ್ಟು, ತಾನು ತನ್ನ ಹೆಂಡತಿಯ ಸುಖವಾಗಿ ಮಲಗಿದ್ದು, ಅರ್ಧ ರಾತ್ರಿಯಲ್ಲಿದ್ದು, ಅಯಾ ! ನೀನು ನಿದ್ದೆ ಹೋಗುತ್ತಿರುವೆಯಾ ? ಯಾ ! ನನ್ನ ಗಾಣದಕುದುರೆಗೆ, ಕ್: ಲು ನೋವಾಗಿರುವುದು, ನೀನು ದಯಮಾಡಿ ಸ್ವಲ್ಪ ಗಾಣವನ್ನು ತಿರುಗಿಸಿದರೆ, ನನಗೆ ತುಂಬ ಉಪಕಾರ ಇಾಗುವುದೆಂದು ಹೇಳಲು, ಆ ದರ್ಜೆಯವನು ತನ್ನ ಸುಗುಣವನ್ನು ತೋರ ಡಿಸಬೇಕೆಂದು, ಆಯಾ ! ಆ ಗುಣವನ್ನು ತಿರುಗಿಸುವ ವಿಧಾನವನ್ನು ನನಗೆ ಕೂರಿಸಿಕೊಡಿರೆಂದು ಹೇಳಿದನು, ಆಗ ಆತನು ಆ ಮನುಷ್ಯನನ್ನು ಕರೆದುಕೊಂಡು ಹೋಗಿ, ಗಾಣಕ್ಕೆ ಕಟ್ಟುವ ಕುದುರೆಯಂತೆ ಅವನನ್ನು , ಲಗಾಮುಗಳಿಂದ ಬಿಗಿದು, ಕೈಯಲ್ಲಿ ಕೊರತೆಯನ್ನು ಹಿಡಿದು, ಕುದುರೆಯನ್ನು ಹೊಡೆ ಯುವಂತೆ ಕೊಗಡೆಯಿಂದ ಹೊಡೆಯಲು, ಅಯಾ ! ಇದೇನು ಹೀಗ ಹೊಡೆಯುತ್ತೀಯಲ್ಲಾ ಎನಲು, ಓಜೋ ! ಅದು ನನ್ನ ಕುದುರೆಯನ್ನು ವಿಚ್ರಗೊಳಿಸುತ್ತಿದ್ದಂತೆ, ನಿನ್ನನ್ನು ಎಚ್ಚರಗೊಳಿಸುವೆನು, ನೀನು ಬೇಗಬೇಗ ನಡೆ ಇಲ್ಲವಾದರೆ ನನ್ನ ಗೌಣವು ಕೆಟ್ಟು ಹೋಗುವುದೆಂದುಹೇಳಿ, ಬಲವಾದ ಹನ್ನೆರಡು ದೆಖ್ಯೆಗಳನ್ನು ಹಾಕಿದನು. ಎರಿದು ಹೇಳಿ ಮಹರ ಜಾದಿಯು ಕಥೆಯನ್ನು ನಿಲ್ಲಿಸಿ, ವರ.ದಿನ ಬೆಳಗಿನ ಜಾವದಲ್ಲಿ ಪುನಹ ಹೇಳಲಾರಂಭಿಸಿದಳು, -: AY