ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

K೧೬ ಯವನೆ ಯಾಮಿನೀ ವಿನೋದ ಎಂಬ, ಕೊಲ್ಕುವುದಕ್ಕೆ ಹೋಗಲು ಕಾರಣವೇನೆಂದು ಕೇಳಲು, ಆಲಿವುಡ್, ಅಯಾ ! &ಾವು ಖಂಡಿತವಾಗಿಯೂ ನನ್ನನ್ನು ಬಹುಸಂಕಟಭರಿತ ನಾದ ನಿರಪರಾಧಿಯೆಂದು ತಿಳಿದುಕೊಳ್ಳಬೇಕಂದ, ನನ್ನಂತಹ ನಿರ್ಭಾ ಗ್ಯನಾದವನು ಈ ಲೋಕದಲ್ಲಿಯ ಇಲ್ಲವೆಂದು, ನಾನು ಖಂಡಿತವಾಗಿ ಹೇಳುವೆನು ಎಂದನು. ಬಳಿಕ ರಾವುತರನ್ನೊಬ್ಬನು, ಸ್ವಾಮಿ ! ಮನೆಮಾರುಗಳನ್ನು ಸೂರಮಾಡಿ, ಜನರನ್ನು ಸೂರೆಮಾಡುವ ಈ ಜಾಗತನ ಮಾತುಗಳನ್ನು ಕಳವಿಕಾ ! ನನ್ನ ಮಾತಿನ ನಂಬಿಕೆ ಇಲ್ಲವಾದರೆ ಈತನ ಬೆನ್ನನ್ನು ಪರೀಕ್ಷಿಸಿ ನೋಡಿರಿ, ಎಂದು ಬಟ್ಟೆಯನ್ನು ತೆಗೆದು ನ್ಯಾಯಾಧಿಪತಿಗೆ ತೂರಿಸಲು, ಆತನು ಯಾವಮಾತನ್ನು ಆಡದೆ ಕೊರಡೆಯಿಂದ ಒಂದು ನೂರು ಏಟುಗಳನ್ನು ಹಾಕಿ, ಒಂಟೆಯಮೀಲೆ ಕುಳ್ಳಿರಿಸಿ, ಈತನು ಮನ ಯನ್ನು ಸೂರೆಮಾಡುವ ಮನುಷ್ಯನೆದು, ಒಬ್ಬ ಮನುಷ್ಯನು ಹೇಳುತ್ತ ಮುಂದೆ ಹೋಗುತ್ತಿರಲು, ಪಟ್ಟಣದಿಂದ ಹೊರಕೊರಡಿಸಿ ಪುನಹ ಎಂದಿಗೂ ಊರಿಗೆ ಬಾರದಂತ ಮಾಡಿಸಿದನು. ನಾನು ಈ ವರ್ತಮಾನವನ್ನು ಕೇಳಿ, ಆತನ ಎರಡನೆಸಾರಿ ದುರವಸ್ಥೆ ಹೊಂದಿದುಕಾಗಿ, ವ್ಯಸನಪಟ್ಟು ಆತನನ್ನು ಅತಿರಹಸ್ಯವಾಗಿ, ನನ್ನ ಬಳಿಗೆ ಕರೆದುಕೊಂಡುಬಂದು, ನನ್ನ ಕೈಲಾದ ಸಹಾಯವನ್ನು ಮಾಡಿದೆನು ಎಂದುಹೇಳಲು, ಕರೀಬರು ಮೊದ ಅನಂತ ಹುಸಿನಗೆಯನ್ನು ಬೀರದೆ, ಳನ ರಾಗಿರವುದನ್ನು ಕಂಡು, ನನ್ನ ಅಣ್ಯನಾದ ಅಲ್ಕವುಜನು ತೊಂದರೆಯನ್ನನುಭವಿಸಿದುದಕ್ಕಾಗಿ, ಹೀಗಿರುವ ರೆಂದು ತಿಳಿದು, ಅವರು ನನಗೆ ಬಹುಮಾನಮಾಡುವಂತ, ಆಜ್ಞಾಪಿಸುವು ದಕ್ಕೆ ಮೊದಲೆ, ಸಾವಿರಾ ! ತಾವು ದಯಮಾಡಿ ನನ್ನ ಉಳಿದ ತಮ್ಮಂದಿರ ಕಥೆಯನ್ನು ಕೇಳಿ, ಆ ಚರಿತ್ರ ಗಳನ್ನೆಲ್ಯಾ, ಬರೆಸಿ ಒಂದು ಪುಸ್ತಕಶಾಲೆ ಯಲ್ಲಿಡಬಹುದು. ಈಗ ನನ್ನ ಐದನೆಯ ಅಣ್ಣನಾದ ಅಲನಾಸ್ಕರನೆಂಬ ವನ ಕಥೆಯನ್ನು ಹೇಳುವನೆಂದು, ಪ್ರಾರಂಭಿಸಿದನೆಂದು ಹೇಳಿ ಬೆಳಗಾದ ಕಡಿಳ ಕಥೆಯನ್ನು ನಿಲ್ಲಿಸಿ, ಮರಳಿ ಮರುದಿನ ಬೆಳಗಿನ ಜಾವದಲ್ಲಿ, ನುಡಿಯಲು ಆರಂಭಿಸಿದಳು.