ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೫೨೨

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರೇಬಿರ್ಯ ನೈಟ್ಸ್ ಕಥೆಗಳು, ೧೭೫ ನೆಯ ರಾತ್ರಿ ಕಥೆ. ರಕನ ಐದನೆಯ ಅಣನ ಕಥೆ. ವಹರಜಾದಿಯು ಸುಲ್ತಾನರನ್ನು ಕುರಿತು, ಇಂತಂದಳು :ನನ್ನ ಐದನೆಯ ಅಣ್ಣನಾದ ಅಲನಾಸ್ಕರನು, ತನ್ನ ತಂದೆ ಬದುಕಿರುವ ವರಿಗೂ ಯಾವ ಕೆಲಸವನ್ನೂ ಮಾಡದೆ, ಬಹು ಸೋಮಾರಿಯಾಗಿದ್ದು ಕೊಂಡು, ತಾನು ಹಗಲು ಭಿಕಮಾಡಿ ತಂದ, ಅನ್ನವನ್ನು ತಿಂದು ರಾತಿ ) ಕಾಲವನ್ನು ಕಳೆಯುತ್ತ ಇದ್ದನು. ನನ್ನ ತಂದೆಯು ಸಾಯುವಕಾಲದಲ್ಲಿ ವ್ಯವನಾದ ಆತನಿಗೆ ಏಳುನೂರು ರೂಪಾಯಿಗಳ ಆಸ್ತಿ ಇದ್ದಿತು. ನಾವು ಗಳು ಅದನ್ನು ಸಮನಾಗಿ ಹಂಚಿಕೊಳ್ಳಲು, ಪ್ರತಿಯೊಬ್ಬರಿಗೂ ಒಂದು ನೂರು ರೂಪಾಯಿಗಳು ಬಂದವು. ಆದರೆ ಅಲನಾಸ್ಕರನು ತನ್ನ ಜೀವ ಮಾನದಿಂದಿಗೂ, ಅಷ್ಟೊಂದು ಹಣವನ್ನು ಕಾಣದುದರಿಂದ, ಅದನ್ನು ಯಾವರೀತಿಯಲ್ಲಿ ಅಭಿವೃದ್ಧಿಪಡಿಸಬೇಕೆಂಬ ಮಾರ್ಗವು ತಿಳಿಯದ, ಆ ಹಣ ವನ್ನು ಕೊಟ್ಟು ಸಿಂಗಣಿಸಾಮಾನುಗಳನ್ನು ಕೊಂಡುಕೊಂಡು, ಒಂದು ಅಂಗಡಿಯ ಇಟ್ಟುಕೊಂಡು, ವ್ಯಾಪಾರ ಮಾಡುವುದಕ್ಕಾಗಿ ಕುಳಿತು ಗಿರಾಕಿಗಳು ಬರುವವರಿಗೂ, ತನ್ನ ನೆರೆಯ ಅಂಗಡಿಯವನಾದ, ದರ್ಜಿ ಯವನು ಕೇಳುತ್ತಿರುವಂತೆ, ನಾನು ಒಂದುನೂರು ರೂಪಾಯಿಗಳಿಗೆ ತಂದಿರುವ ಇದನ್ನು ಮಾರಿದರೆ ಬಂಡವಾಳವು ದ್ವಿಗುಣ ವಾಗುವುದು, ನಂತರ ಅದನ್ನ ಮೂಲಧನವಾಗಿ ಮಾಡಿಕೊಂಡು ನಾಲ್ಕುನೂರು ರೂಾ ಯಿಗಳನ್ನು ಮಾಡುವೆನು, ಹೀಗೆ ನಾಲ್ಕು ಸಾವಿರ ರೂಪಾಯಿಗಳಾಗುವವರಿಗೂ, ವ್ಯಾಪಾರ ಮಾಡಿ, ನಂತರ ಅದನ್ನು ದ್ವಿಗುಣಿಸುವುದರಿಂದ, ನಿಜವಾಗಿ ಎಂಟುಸಾವಿರ ರೂಪಾಯಿಗಳಾಗುವುವು. ಬಳಿಕ ಹಿಂಗಣಿ ವ್ಯಾಪಾರವನ್ನು ಸಾಕುವಾಡಿ, ರತ್ನಪಡಿ ವಾಪಾರವನ್ನು ಮಾಡತೊಡಗಿ, ಬಹಳವಾದ ಆಸ್ತಿಯನ್ನು ಸಂಪಾದಿಸಿ, ವಿಸ್ತಾರವಾಗಿಯೂ, ವಿನೋದಕರವಾದ ಒಂದು ಮನೆಯನ್ನು ಕೊಂಡುಕೊಂಡು ನಂತರ ಬಹು ರೂಪವತಿಯಾಗಿರುವ ಗಾನವಿದ್ಯಾವಿ ಲಳಾದ ಒಬಾನೊಬ್ಬ ಯುವತಿಯನ್ನು ಮದುವೆ ಮಾಡಿಕೊಂಡು, ದವ್ಯಾರ್ಜನೆಯನ್ನು ಬಿಡದೆ, ಇನ್ನೂ ಅಧಿಕವಾಗಿ ಮಾಡುತ್ತ ಲಕ್ಷಾಂತರ