ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರೇಬಿರ್ಯ ಸೈಟ್ಸ್ ಕಥೆಗಳು. ಆತನನ್ನು - ಡಿದುಕೊಂಡರು. ನನ್ನ ಅಣ್ಣನು ಹಣವನ್ನು ಕೊಡುತ್ತೇನೆ ನನ್ನನ್ನು ಬಿಟ್ಟುಬಿಡಿ ಎಂದು ಹೇಳಿದರೂ ಕೇಳದೆ ಆತನನ್ನು ಹಿಡಿದು ಕೊಂಡು ಹೋಗುತ್ತಿರುವಾಗ, ನನ್ನ ಅಣ್ಣನ ಸ್ನೇಹಿತರು, ಅವರನ್ನು ಬಹಳವಿಧವಾಗಿ ಬೇಡಿಕೊಂಡರೂ, ಸಾರ್ಥಕವಾಗಲಿಲ್ಲ. ಅವರು ನನ್ನ ಅಗ ಏನನ್ನು ನ್ಯಾಯಾಧಿಪತಿಯಬಳಿಗೆ ಕರೆದುಕೊಂಡುಹೋಗಿ ನಿರಿಸಿ ದರು. ಇಂತಂದು ಹ೪, ಸಹರಜಾದಿಯು ಬೆಳಗಾದಕೂಡಲೆ ಕಥೆಯನ್ನು ನಿಲ್ಲಿಸಿ, ಮರುದಿನ ಬೆಳಗಿನ ಜಾವದಲ್ಲಿ ಹೇಳಲಾರಂಭಿಸಿದಳು. ೧೬೯ ನೆಯ ರಾತ್ರಿ | ಕಥೆ. ವಹರಜಾದಿಯು ಸುಲ್ತಾನರನ್ನು ಕುರಿತು, ಹೀಗೆಂದು ನುಡಿಯ ಲಾರಂಭಿಸಿದಳು. ನ್ಯಾಯಾಧಿಪತಿಯು ನನ್ನ ಅಣ್ಣನನ್ನು ನೋಡಿ, ಅಯ್ಯಾ! ನೀನು ನಿನ್ನೆ ರಾತ್ರಿ ಮನೆಗೆ ತೆಗೆದುಕೊಂಡುಹೋದ ಸಾಮಾನು ಗಳರಿಯವು ? ನಿನಗೆ ಹೇಗೆ ಬಂದವೆಂದು ಕೇಳಲು, ಅನಾಸ್ಕರನು ಸಾ ! ನಾನು ಖಂಡಿತವಾಗಿಯೂ, ನಡೆದ ಸಂಗತಿಯನ್ನು ನಿಜವಾಗಿ ತಮ್ಮ ಸನ್ನಿಧಿಯಲ್ಲಿ ಮರಮಾಜದ ಹೇಳುವನು. ಕಾವು ನನ್ನನ್ನು ಮನ್ನಿಸು ವಂಡ ಆಜ್ ಮಾಡಬೇಕೆಂದು ಬೇಡಿಕೊಳಲು, ನ್ಯಾಯಾಧಿಪತಿಯು, ಅದಕ್ಕೆ ಸಮ್ಮತಿಸಿದುದರಿಂದ, ಅಲನಾಸ್ಕರನು ಆ ಮುದುಕಿ ತನ್ನ ಮನೆಗೆ ಬಂದು, ಜಪವನ್ನು ಮಾಡಿ ಹರಸಿದುದು ಮೊದಲೆಂಡು, ತಾನು ಗುಲಾವು ರನ್ನು ಕೊಂದಬಳಕ ಧೋರೆಕಾನಿಯ ಧನರಾಶಿಯ ಮಾಯವಾದುದನ್ನು ವಿಸ್ತಾರವಾಗಿ ತಪ್ಪದಂತೆ ನಿಜವಾಗಿ ಹೇಳಲು, ನಾಯಾಧೀಶನು ಸ್ವಲ್ಪ ಹೊತ್ತು ಸುಮ್ಮನಿರುವುದನುನೋಡಿ, ಅಯಾ ! ನಾನು ಹಾಳುಮಾಡಿ ಕಂಡ ಐದುಸಾವಿರ ವಹರಿಗಳನ್ನೂ, ನನಗೆ ಸಂದಾಯವಾಗಲಿಲ್ಲವಾದು ದರಿಂದ, ತಾವು ಅದನ್ನು ಬರಮಾಡಿಕೊಡಬೇಕೆಂದು ಬೇಡಿದನು. ನಯಾಧಿ ಪತಿಯು ಆತನಿಗೆ ಉತ್ತರವನ್ನು ಹೇಳದೆ ತನ್ನ ಬಂಟರಿಂದ ಆ ಸಾಮಾನು ಗಳನ್ನು ತರಿಸಿ, ರಾಜನ ಉಗ್ರಾಣದಲ್ಲಿ ಹಾಕಿಸಿದನಂತರ ನನ್ನ ಅಣ್ಣನನ್ನು ತನ್ನಪಟ್ಟಣದಿಂದ ಹೊರಹೊರಡಿಸಿದನು. ಅಲ್ಲದೆ ಪುನಹ ಇಲ್ಲಿಗೆ ಬರ ಕೂಡದೆಂದುಆಜ್ಞೆ ಮಾಡಿದನು. ಬಳಿಕ ಅಲನಾಸ್ಕರನು ಪ್ರತ್ಯುತ್ತರವನ್ನು