ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೫೩೧

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

1೬ ಯವನ ಯಾಮಿನೀ ವಿನೋದ ಎಂಬ, ಒಂದಾನೊಂದು ಕೊಠಡಿಯಲ್ಲಿ ಆಕೆ ಕುಳುತಿರುವುದನ್ನು ನೋಡಿ, ಒಳ ಹೋಗಲು, ಆಕ ದಿಗ್ಗನೆ ಎದ್ದು ದಂಡದ ಹಾವವಂಗೆಯು, ಅಯಾ ! ನನ್ನ ಪ್ರಾಣವನ್ನು ಉಳುಕಂದು ಬೇಡಿಕೊಳ್ಳಲು ಆಹಾ ! ನನ್ನ ಮುದ್ದಿನ ಮುದಯ ! ನೀನು ಈಗ ನಾನು ಹಗತೀರಿಸಿಕೊಂಡ, ದುರ್ಮಾರ್ಗರ, ಸಹವಾಸಕ್ಕೆ ಹೇಗೆ ಸಿಕ್ಕಿದೆ. ಇದು ನಿನಗೆ ಯೋಗ್ಯವೇ ! ಎನಲು, ಆಹಾ ! ಒಬ್ಯಾನೋ ಘನವಂತನಾದ ವರ್ತಕನಿಗೆ ಹೆಂಡತಿಯಾಗಿದ್ದ ನನ್ನನ್ನು ಈ ಪಾತಳಾದ ಮುದುಕಿಯು ತನ್ನ ಮನೆಯಲ್ಲಿ ನಡೆಯುವ ಮದುವೆಗೆ ದಯಮಾಡಬೇಕೆಂದು, ಬಹು ನವತೆಯುಳ್ಳವಳಾಗಿ, ಬೇಡಿಕೊಳ್ಳಲು, ನಾನು ಅದರಂತ ಐದುಸಾವಿರ ಮೊಹರಿಗಳನ್ನು ತೆಗೆದುಕೊಂಡು, ಉತ್ತಮ ವಾದ ವಸ್ತ್ರಗಳನ್ನು ಧರಿಸಿಕೊಂಡುಬರಲು, ನನ್ನನ್ನು ಇಲ್ಲಿ ಸೆರೆಹಾಕಿ ಗುಲಾಮನಿಗೆ ನನ್ನನ್ನು ಸ್ವಾಧೀನವಾಗಿದ್ದಳು. ನಾನು ಮರುಸಂವತ್ಸರಗಳಿಂದಲೂ ಮಹಾ ದುಃಖವನ್ನು ಅನು ಭವಿಸುತ್ತ ಈ ನೀಚನಾದ ಗುಲಾಮನಿಗೆ ವಶಳಾಗಿದ್ದನು. ಈದಿನ ಆತನು ಅಡಗಿಹೋದುದರಿಂದ ನನಿಗೆ ಸಂತೋಷವಾಯಿತು. ಆತನು ಸಂಪಾದಿಸಿದ ಹಣವು ಅಧಿಕವಾಗಿರುವುದು, ಅದನ್ನು ನೀನು ತಗೆದುಕೊಂಡು ಹೋಗ ಬಹುದೆಂದು, ಧನಕೋಶವನ್ನು ತೋರಿಸಿದಳು. ನನ್ನ ಅಣ್ಣನು ಇದನ್ನು ನೋಡಿ, ಆ ಪಡುತ್ತಿರುವಾಗ, ಆ ಧರಸುನಿ ಈಃ ಧನವನ್ನು ನೀವು ತೆಗೆದುಕೊಂಡು ಹೋಗುವುದಕ್ಕಾಗಿ, ಆಳುಗಳನ್ನು ಕರೆದುಕೊಂಡು ಬನ್ನಿ. ರಂದು ನುಡಿಯಲು, ನನ್ನ ಅಣ್ಣನು ಹೊರಗೆಬಂದು, ಆಳುಗಳನ್ನು ಕರೆದು ಕೊಂಡುಹೋಗಿ ನೋಡುವಲ್ಲಿ, ಮನೆಯಲ್ಲಿ ಧನವಾಗಲಿ, ಆ ಧರೆಸಾನಿ ಯಾಗಲಿ, ಇರಲಿಲ್ಲ. ಅಷ್ಟು ಜಾಗ ತೆಯಾಗಿ ಬಹು ಎಚ್ಚರಿಕೆಯಿಂದ, ಅವಳು ಮಾಯವಾದಳು. ಆದರೂ ನನ್ನ ಅಣ್ಣನು ಅಲ್ಲಿರುವ ಐದು ಸಹಸ ) ಮೊಹರಿಗಳ ಬೆಲೆ ಬಾಳುವ ಸಾಮಾನುಗಳನ್ನು ತಗೆದುಕೊಂಡು ಮನಗೆಬಂದು ಸುಖವಾಗಿ ನಿದಿ ಸಿದನು. ಆ ಮನದ ನೆರೆಹೊರೆಯವರು, ಇದನ್ನೆಲ್ಲಾ ನೋಡಿ ನಾಯಾಧೀಶನಲ್ಲಿ ದೂರಿಕಳಲು, ನ್ಯಾಯಾಧೀಶನು ನನ್ನ ಅಣ್ಣನನ್ನು ಹಿಡಿದುತರುವಂತೆ, ತನ್ನ ಬಂಟರನನ್ನು ಕಳುಹಿಸಿ ದನು. ಅವರು ಬೆಳಗ್ಗೆ ಆತನು ಏಳುವವೇಳೆಗೆ ಸರಿಯಾಗಿ ಬಂದು,