________________
ಅರೇಬಿರ್ಯ ನೈಟ್ ಕಥೆಗಳು, 4v4 ಕರದು ಅತ್ಯವಶ್ಯಕವಾದ ಕೆಲವುಮಾತುಗಳನ್ನು ಆಡಬೇಕಾಗಿರುವುದರಿಂದ ನಾನು ಬಂದಿರುವೆನೆಂದು ಹೇಳಿರನಲು, ಚಾರಕರು ಓಡಿಹೋಗಿ ಮತ್ತೆ ಹಿಂದಿ ರುಗಿಬಂದು ರತ್ನ ಪತಿವ್ಯಾಪಾರಗಾರನನ್ನು ಕರೆದುಕೊಡು, ರಾಜಕುಮಾ ರನಬಳಿಗೆ ಹೋದರು. ಅಗ ಆತನು ಸೋಫಾದಮೇಲೆ ಮಲಗಿಕೊಂಡಿ ದನು. ಆತನು ವರ್ತಕನನ್ನು ಕಂಡಕೂಡಲೆ ಬಹು ಮರ್ಯಾದೆಯಿಂದ ಬರಮಾಡಿಕೊಂಡು, ತನಗೆ ಹಿತಕರವಾದ ವರ್ತಮಾನವೇನಾದರೂ ತಿಳಯು ಬರುವುದೋ ಏನೋ ಎಂದಂದುಕೊಂಡು ಸುಮ್ಮನಿರಲು, ವರ್ತಕನು ರಾಜ ಪುತ್ರ ನೇ ! ನಿನ್ನ ಸಂಗಡ ಬಹಳವಾಗಿ ಪರಿಚಯಮಾಡಿಕೊಳ್ಳುವ ಯೋಗ್ಯ ತಯು ನನಗಿಲ್ಲವಾದರೂ, ನಿಮಗೆ ಇಷ್ಮವಾದ ಒಂದಾನೊಂದು ವಾಕ್ಯ ವನ್ನು ಹೇಳಲು, ಮತ್ತು ನಿಮ್ಮ ಹಿತವನ್ನು ಕೋರಿ, ನಿಮಗೆ ಸುಖ ವನ್ನು ಉಂಟುಮಾಡಲು, ನಾನು ನಿಮ್ಮ ಬಳಿಗೆ ಬಂದು ಬಹು ಧೈಯ್ಯದಿಂದ ಮಾತನಾಡುತ್ತಿರುವುದನ್ನು ತಾವು ಕ್ಷಮಿಸಬೇಕೆಂಬದಾಗಿ ಗಾ ರ್ಥಿಸುವೆ ನಂದನು. ಹೀಗೆ ರಾಜಕುಮಾರನ ಪರಿಚಯವನ್ನು ಹೊಂದಿ, ರತ್ನಪಡಿ ವ್ಯಾಪಾರಿಯು ರಾಜಕುಮಾರನೇ! ಇರ್ಬತಿಹರನ ಗುಣವೂ, ನನ್ನ ನಡ ತೆಯು ಸ್ವಲ್ಪವಾದರೂ ವ್ಯತ್ಯಾಸವನ್ನು ಹೊಂದದಿದ್ದುದರಿಂದ, ನಮ್ಮ ಬರಿಗೂ ಪರಸ್ಪರ ವ್ಯಾಪಾರಮುಖದಿಂದ ಸ್ನೇಹ ಉಂಟಾಯಿತು. ಆ ಸ್ನೇಹವು ಬಹುಕಾಲದಿಂದಲೂ ನಡೆದುಕೊಂಡುಬಂದು, ಬಹು ಬಲವಾರು ದರಿಂದ ನಾವು ಅನನ್ಯವಾಗಿ ಯೋಚಿಸದೆ ಎಂತಹ ರಹಸ್ಯ ಕಾರ್ಯ ನನ್ನಾದರೂ ಮಾಡುತ್ತಿರಲಿಲ್ಲ. ನಿನಗೂ ಆತನಿಗೂ ಉಂಟಾದ ಸ್ನೇಹವೂ, ಆತನು ನಿನಗೆ ಉಪಕರಿಸುವುದಕ್ಕಾಗಿ, ತನ್ನ ಶಕ್ತಿಯನ್ನೆಲ್ಲಾ ವೆಚ್ ಮಾಡಿದಧಸಹಾ ನನಗೆ ಆತನಿಂದಲೇ ತಿಳಿಯಬಂದಿತು. ಈದಿನ ನಾನು ಹೋಗಿ ನೋಡುವಲ್ಲಿ ಆತನ ಅಂಗಡಿಯು ಮುಚ್ಚಿ ತು, ನೆರೆಯ ಅಂಗಡಿಯವರನ್ನು ಕುರಿತು ಇದಕ್ಕೆ ಕಾರಣವೇನೆಂದು ಕೇಳಲು, ಅಯ್ಯಾ ! ಇರ್ಬತಿಹರನು ಮೂರುದಿನಗಳ ಮುಂಚೆ, ತನಗೆ ಏನೋ ಕೆಲಸವಿರುವುದರಿಂದ, ಬಾಲಸೂರಿಗೆ ಹೋಗಿಬರುವೆನೆಂದು ಹೇಳಿ, ನಮ್ಮಿಂದ ಅಪ್ಪಣೆಯನ್ನು ತೆಗೆದುಕೊಂಡು ಹೊರಟುಹೋದನು ಎಂದು ಹೇಳಿದನು. ಆತನ ಕ್ಷೇಮವನ್ನು ಬಹು ವಿಶ್ವಾಸದಿಂದ ಕರಂತಿದ್ದ