ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರೇಬಿರ್ಯ ನೈಟ್ಸ್ ಕಥೆಗಳು, ೬೬ ತಿಳಿದವರಾಗಿಯೂ, ಇರುವುದರಿಂದ ಉಪಾಯವಾಗಿ ತನ್ನ ಕಾರವನ್ನು ಸಾಧಿಸಬಹುದೆಂದಹಿಸಿ, ಆ ಕಾವಲುಗಾರರ ಮುಖ್ಯನಾದವನನ್ನು ಕುರಿತು ಅಯಾ ! ನಾನು ಈ ಕುಮಾರಿಗೆ ಹಾಲನ್ನು ಕೊಟ್ಟು ಸಾಕಿ ದವಳು. ಇವಳಂತ ನನಗೆ ಮತ್ತೊಬ್ಬ ಮಗಳೂ ಉಂಟು. ಆಕೆಗೂ ಈ ರಾಜಪುತಿ ತುಂಬಾ ಪ್ರೇಮ ಉಂಟಾಗಿತ್ತು. ಆದರೆ ನನ್ನ ಮಗಳು ಮದುವೆಯಾಗಿ ಗಂಡನ ಮನೆಯಲ್ಲಿ ಬಾಳುತ್ತಿರುವುದರಿಂದ ಈಗ ರಾಜ ಪುತ್ರಿಯನ್ನು ನೋಡುವ ಉದ್ದಿಶ್ಯದಿಂದಲೇ ಈ ಊರಿಗೆ ಬಂದಿರುವಳು. ನೀನು ದಯಮಾಡಿ ಯಾರಿಗೂ ತಿಳಿಯದಂತೆ ಆಕೆಯನ್ನು ಒಳಗೆ ಬಿಡಬೇ ಕಂದು ಕೇಳಲು, ಆತನು ಅಮಾ ! ನೀನು ಬಹಳವಾಗಿ ಹೇಳತಕ್ಕ ಆಗ ಇವೇನೂ ಇಲ್ಲ. ಮುಖ್ಯವಾಗಿ ರಾಜಪುತ್ರನಿಗೆ ಸಂತೋಷವನ್ನುಂಟು ಮಾಡುವ ಕೆಲಸವೆಂದು ನನಗೆ ತಿಳಿದುಬಂದರೆ ನಾನು ನಿಸ್ಸಂದೇಹವಾಗಿ ನಾಳೆ ಅರ್ಧರಾತ್ರಿಯಲ್ಲಿ ಬಾಗಿಲು ತೆರೆಯುವೆನೆಂದು ಹೇಳಿದನು. ಬಳಿಕ ದಾದಿಯು ರಾತ್ರಿಯಾಗುತ್ತಲೇ ತನ್ನ ಮನೆಗೆ ಹೋಗಿ, ಮಗನಿಗೆ ಬಹು ಚಮತ್ಕಾರವಾಗಿ ಹಣವೇಷವನ್ನು ಹಾಕಿ ಸಂಗಡ ಕರೆ ದುಕೊಂಡುಬರಲು ಬಾಗಿಲಲ್ಕಿರುವ ಓಲೇಕಾರನು ಆಕೆಯ ಮಗಳೆಂದು ನಂಬಿ ಅಂತಃಪುರಕ್ಕೆ ಹೋಗಲಿಸಿದನು. ನಂತರ ದಾದಿಯು ಮುಂದಾಗಿ ಹೋಗಿ ರಾಜಪುತ್ರಿಯನ್ನು ಕುರಿತು, ಅಮಾ ! ಈಗ ನನ್ನೊಡನೆ ಹಣ್ಣು ವೇಷದಿಂದ ನಿನ್ನಂತಃಫುರವನ್ನು ಸೇರಿದವಕಿಯು ನಿಜವಾಗಿಯೂ, ಹಂಗಸಲ್ಲ. ಮತ್ತೆನೆಂದರೆ :- ನಿನ್ನೊಡನೆ ಬಾಲದಿಂದ ಬೆಳೆದವನಾ ನನ್ನಮಗನು ಬಹುದಿನಗಳಿಂದಲೂ ನಿನ್ನನ್ನು ಅಗಲಿದ್ದುದರಿಂದ ಪ್ರತ 'ನಾಗಿ ನಿನ್ನನ್ನು ನೋಡಿ ನಿಮ್ಮ ಕೈಗಳನ್ನು ಮುತ್ತಿಟ್ಟುಕೊಳ್ಳಬೇ? ಬಂದಿರುವನಾದುದರಿಂದ ನೀನು ಅದಕ್ಕೆ ತಕ್ಕ ಹಾಗೆ ಗೌರವದಿಂದ ಆ ಪುರಸ್ಕರಿಸುವೆಯೆಂದು ನಾನು ನಂಬಿರುವೆನೆಂದು ಹೇಳಲು ರಾಜಃ ದಾದಿಯನ್ನು ಕುರಿತು, ಏನು ನನ್ನ ಅಣ್ಣನಾದ ಮರಜವಾನನ ಆಹಾ ! ಇಷ್ಟುದಿನಗಳೂ ನನ್ನನ್ನು ಬಿಟ್ಟು ಎಲ್ಲಿ ಹೋಗಿದ ಅಣ್ಣನನ್ನು ತಂಗಿಯು ಮುಸುಕಿಲ್ಲದೆ ನೋಡುವುದು ನಾ ವುದರಿಂದ ಈ ಮುಸುಕನ್ನು ತೆಗೆಯಂದುಹೇಳಿ, ಆತನನ