________________
೬೬y ಯವನ ಯಾಮಿನೀ ವಿನೋದ ಎಂಬ, ಯಾಗಿ ಆನಂದಿಸುತ್ತ ಉತ್ತಮವಾದ ಕೀರ್ತಿಯನ್ನು ಸಂಪಾದಿಸಿಕೊಂಡಿ ದನು, ಆತನು ಈತರದಿಂದ ನಾನಾದೇಶಗಳನ್ನು ಸುತ್ತಿಕೊಂಡು ಆಯಾ ಸಹೊಂದಿ ಸ್ವದೇಶಕ್ಕೆ ಬರಬೇಕೆಂದು ಹೊರಟು ಚೀನಾರಾಜ್ಯಕ್ಕೆ ಬಂದು ಊರಬಾಗಿಲಲ್ಲಿ ನೇತಾಡುತ್ತಿರುವ ನೂರೆಂಟು ತಲೆಗಳನ್ನು ನೋಡಿ, ಅವು ಗಳು ಆತೆರದಿಂದ ನೇತಾಡುವುದಕ್ಕೆ ಕಾರಣವೇನೆಂದು ವಿಚಾರಿಸಿ, ಮುಖ್ಯ ವಾಗಿ ತನ್ನ ತಾಯಿಯಲ್ಲಿ ಹಾಲುಕುಡಿದು ತನ್ನ ಸಂಗಡ ಬೆಳದವಳಾದ ರಾಜ ಪುತಿ ಯ ಕ್ಷೇಮವನ್ನು ಬಯಸಿ, ಅದನ್ನು ವಿಚಾರಿಸಬೇಕೆಂದು ಬಹಳ ವಾಗಿ ಕುತೂಹಲಯಕನಾಗಿ ತನ್ನ ತಾಯಿಯನ್ನು ಕುರಿತು, ಕೇಳಿದರೆ ಸರ್ವವೂ ವಿಶದವಾಗಿ ತಿಳಿಯಲಾಗುವುದೆಂದು ತಿಳಿದು, ತನ್ನ ಮನೆಗೆ ಬಂದು ತಾಯಿಯು ನನಗೆಬರುವವರೆಗೂ ಕಾದುಕೊಂಡಿದ್ದನೆಂದು ಹೇಳಿ, ಬೆಳ ಗಾದುದನ್ನು ಕಂಡು, ನಹರಜಾದಿಯು ಕಥೆಯನ್ನು ನಿಲ್ಲಿಸಿ, ಮರುದಿನ ಬೆಳಗಿನ ಜಾವದಲ್ಲಿ ಮರಳಿ ನುಡಿಯಲಾರಂಭಿಸಿದಳು. ೨೧ ನೆಯ ರಾತ್ರಿ ಕಥೆ. ಸುಲಾನರೇ ! ರಾಜಪುತಿ ಯ ದಾದಿಗೆ ಅರಮನೆಯಲ್ಲಿ ಬಹಳ ವಾದ ಕೆಲಸಕಾರ್ಯಗಳಿದ್ದರೂ ಅದನ್ನು ತೊರೆದು ಬಹುಕಾಲದಿಂದಲೂ ಅಗಲಿಹೋಗಿದ್ದ ತನ್ನ ಕುಮಾರನು, ಈಗತಾನೆ ಬಂದಿರುವನೆಂಬ ವರ್ತ ಮಾನವನ್ನು ಕೇಳಿ, ಬೇಗ ಬಂದು ಆತನನ್ನು ಆಲಿಂಗಿಸಿಕೊಂಡು, ರಾಜ ಪುತಿಯ ಸ್ಥಿತಿಯನ್ನೂ, ಅವಳ ತಂದೆ ಋು ಮಾಡಿದ ಕಾರವನ್ನೂ, ಆತನು ತನ್ನ ಮಗಳನ್ನು ಸ್ಪಷ್ಟಪಡಿಸುವುದಕ್ಕಾಗಿ ಮಾಡಿದ ಹಲವುಪಯ ತ್ರಗಳನ್ನು ವಿವರಿಸಿ ಹೇಳಿದುದನ್ನು ಕೇಳಿ, ಅಮಾ ! ಹೇಗಾದರೂ ಮಾಡಿ ರಾಜನಿಗರಿಯದಂತೆ ನನ್ನನ್ನು ರಾಜಪುತ್ರಿ ಯಬಳಿಗೆ ಕರೆದುಕೊಂಡು ಹೊ?ಗಲಾಟೆಯಾ ? ಎನಲು, ದಾದಿಯು ತನ್ನ ಮಗನನ್ನು ನೋಡಿ ಅಣ್ಣಾ ! ಈಗ ಈ ವಿಷಯದಲ್ಲಿ ಬಹಳ ತೊಂದರೆ ಇರುವುದರಿಂದ ನಾನು ಖಂಡಿತವಾದ ಉತ್ತರವನ್ನು ಹೇಳಲಾರೆನು. ನಾನು ಇನ್ನು ಹೊತ್ತಿಗೆ ಬಂದು, ನಿನ್ನ ಪ್ರಶ್ನೆಗೆ ತಕ್ಕ ಉತ್ತರವನ್ನು ಹೇಳುವೆನೆಂದು ನುಡಿದಳು. ನಂತರ ಆಕಯ ರಾಜಪುತ್ರಿಯ ಮೈಗಾವಲಿಗಾಗಿ ನಿಂತಿರುವ ಖಜಾ ಸರದಾರ ನನು ಕುರಿತು ಅವರು ಹೊಸಬರಾಗಿಯ ಚೀನಾದೇಶದ ಸಂಗತಿಯನ್ನು