ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೬v°8 ಯವನ ಯಾಮಿನೀ ವಿನೋದ ಎಂಬ, ಈಗ ಬಂದಿರುವ ವೈದ್ಯನು ಮಂತ್ರ ತಂತ್ರಗಳನ್ನಾಗಲೀ, ಧೂಪದೀಪ ಗಳನ್ನಾಗಲೀ, ಅಥವಾ ಮತ್ತಾವ ವಿಧವಾದ ತೊಂದರೆಗಳನ್ನೇ ಆಗಲೀ, ತೆಗೆದುಕೊಳ್ಳದೆ ರಾಜಪುತ್ರಿ ಗೆ ತನ್ನ ದರ್ಶನವನ್ನು ಕೊಟ್ಟಮಾತ್ರದಿಂ ದಲೇ, ಆಕ ಸಸ್ಯಚಿತಳಾದಳೆಂದು ನುಡಿಯಲು ರಾಜನು ಬಹಳವಾಗಿ ಆನಂದಿಸಿ ಕೊನೆಗಾಣದ ಸಂತೋಷಸಾಗರದಲ್ಲಿ ಮುಳುಗಿ ತೇಲುತ್ತಾ, ಅಲ್ಲಿಂದ ಹೊರಟು ಕೂಡಲೇ ತನ್ನ ಮಗಳ ಅಂತಃಪುರವನ್ನು ಸೇರಿ ಮೊದಲು ತನ್ನ ಮಗಳನ್ನೂ, ನಂತರ ರಾಜಪುತ್ರ ನನೂ, ಆಲಿಂಗಿಸಿಕೊಂಡು ಆತ ನನ್ನು ಕುರಿತು, ಅಯಾ ! ನೀನಾರು ? ಎಲ್ಲಿಂದ ಬದೆ ? ನಿನ್ನ ದೇಶವಾ ವುದು ? ನನ್ನ ಮಗಳ ರೋಗವನ್ನು ನಿವಾರಣೆ ಮಾಡಿದವನಿಗೆ ಆಕೆಯನ್ನು ಖಂಡಿತವಾಗಿಯೂ ವಿವಾಹ ಮಾಡಿಕೊಡುವನು. ಆಲ್ಲದ ಅವಳಕಡ ಬಹುಕಾಲದಿಂದ ನಿನ್ನ ಸಮಾಗಮವನ್ನು ಬಯಸಿ, ವಿವಾಹ ಮಾಡಿಕೊಳ್ಳ ಬೇಕೆಂಬವಳಾಗಿಯೇ ಈ ತೊಂದರೆಗಳನ್ನು ಅನುಭವಿಸಿದಳೆಂದು ನುಡಿದನು. ಬಳಿಕ ರಾಜಪುತ್ರನು ಬದುವಿನಯದಿಂದಾತನನ್ನು ನೋಡಿ ತನ್ನ ಸಮಾಚಾರವನ್ನು ಹೇಳತೊಡಗಿ, ಅಯಾ ! ನಾನು ನಿಜವಾಗಿ ಮೊದಲು ಬಂದಂತಹ ವೈದರು ಜೋತಿಷ್ಯರುಗಳತೆ ಇರುವ ಮಾನವನಲ್ಲ, ಆದರೆ ಲೋಕದ ಖ್ಯಾತಿಯಾದ ರಾಜ್ಯವನ್ನಗಲಿ ನಿನೊಡನೆ ಸಂಬಂಧ ವನ್ನು ಬೆಳಿಸಬೇಕೆಂದು ಬಂದಿರುವ ರಾಜಪುತ್ರನೇ ನಾನು. ನನ್ನ ತಂದೆ ಯೂ, ತಾಯಿಯ, ಖಳಿದಾಸ' ಹೆಸರಿನ ದೀವಗಳಿಗೆ ರಾಜರಾಣಿಯರಾಗಿ ವಾಸ ಮಾಡುತ್ತಿರುವರು. ನನ್ನ ಹೆಸರು ಕಮರಲುಜಮಾನನು, ನನ್ನ ತಂದೆಯ ಹೆಸರು ಸಹಜವಾನ ಎಂದು ಹೇಳಿ, ರಾಜಪುತಿಗೂ ತನಗೂ ಉಂಟಾದ ಸಮಾಗಮವನ್ನು ತಾವು ತಾವು ಮೋಹದಿಂದುಂಗುರಗಳನ್ನು ಬದಲಾಯಿ ಸಿಕೊಂಡ ಸಿಂಗತಿಯನ್ನು ವಿವರವಾಗಿ ಹೇಳಿದನು. ಆ ಮಾತುಗಳನ್ನು ಕೇಳಿ ಬಹಳವಾಗಿ ಸಂತೋಷಚಿತ್ರನಾದ ದೊರಯು ಆಶ್ಚರ್ಯಕರವಾದ ಈ ಸಂಗತಿಯನ್ನು ಉತ್ತನಾಕ್ಷರಗಳಿಂದ ಬರೆಸಿ, ತನ್ನ ಪುಸ್ತಕಶಾಲೆ ಯಲ್ಲಿರಿಸಿ, ಆದಿನವೇ ವಿವಾಹಕ ಮವನ್ನು ಬಹು ವಿಜೃಂಭಣೆಯಿಂದ ಜರ *ಸಿ, ನಾನಾವಿಧವಾದ ಸಂತೋಷಕಾರ್ಯಗಳನ್ನು ನೆರವೇರಿಸಿ, ದೇಶಾಧಿ ವತಿಗಳಿಗೆಲ್ಲ ಕಾಗದವನ್ನು ಬರೆಸಿ, ಅವರಿಗೆ ಟಿತನವನ್ನು ಮಾಡಿಸುವುದಕ್ಕೆ