________________
೯೦ ಯವನ ಯಾಮಿನೀ ವಿನೋದ, ಎಂಬ ಪಿನಲ್ಲಿಟ್ಟುಕೊಂಡಿದ್ದು ಎಚ್ಚರಿಕೆಯಿಂದಿದ್ದರೆ ಸುಖವುಂಟಾಗುವುದೆಂದು ಹೇಳಿ ಭೂಮಿಯನ್ನು ಕಾಲಿನಿಂದೊದೆಯಲು, ಅಲ್ಲಿ ಒಂದು ಬಿಲವಾಯಿತು, ಭೂತವು ಒಳಗೆ ಹೋದಕೂಡಲೇ ಬಿಲವು ಮುಚ್ಚಿ ಹೋಯಿತು. ಬಳಿಕ ಬೆಸ್ತನು, ಎರಡನೆಯಸಾರಿ ಬಲೆಯನ್ನು ಹಾಕದೆ ಭೂತವು ಹೇಳಿದಂತ ನಡೆದುಕೊಂಡು ತನಗೆ ಸಿಕ್ಕಿದ ಮೀನುಗಳಲ್ಲಿ ತೃಪ್ತಿಯನ್ನು ಹೊಂದಿ ತನ್ನ ಮನೆಗೆಬಂದು ನಾನಾವಿಧವಾದ ಯಾಚನೆಗಳಿಂದ ಭೂತವು ಹೇಳಿದರೂ ತುಗಳನ್ನು ನೆನೆದುಕೊಂಡು ಆ ಮೀನುಗಳನ್ನು ಸುಲಾನರಬಳಿಗೆ ತೆಗೆ ದುಕೊಂಡು ಹೋಗಬೇಕೆಂದು, ಹೊರಟನು. ಅನ್ಮರಿ ಬೆಳಗಾದುದ ರಿಂದ ಸಹರಜಾದಿಯು ಕಥೆಯನ್ನು ನಿಲ್ಲಿಸಿದಳು, ದಿನರಜಾದಿಯು ಅಕಾ ! ನೀನು ಹಿಂದೆಕೇಳಿದ ಕಥೆಗಳಿಗಿಂತ ಲೂ, ಈ ಕಥೆಯು, ಅತ್ಯಂತ ರಮಣೀಯವಾಗಿರುವುದು. ಇನ್ನು ವಿನೋ ದಕರಗಳಾದ ಕಥೆಗಳನ್ನು ಕೇಳೆಂದು ಬೇಡಲು, ತಂಗೀ ! ಸುಲ್ತಾನರದಯ ಯು ನನಗುಂಟಾದರೆ ನಾಳಿನರಾತ್ರಿ ಇದಕ್ಕಿಂತಲೂ ಅತ್ಯುತ್ತಮವಾದ ಕಥೆ ಯನ್ನು ಹೇಳುವೆನೆಂದು ನುಡಿಯಲು, ಸುಲ್ತಾನನು ನಾಳೆಯ ಕಥಾಸ್ ರಸ್ಯವನ್ನು ನೋಡಬೇಕೆಂದು ಸುಲ್ತಾನಿಯನ್ನು ನಾಳೆಯವರೆಗೂ ಕೊಲ್ಲ ಕೂಡದೆಂದು ಆಜ್ಞಾಪಿಸಿದನು. ೧೯ ನೆಯ ರಾತ್ರಿ ಕಥೆ. ದಿನರಜಾದಿಯು ಎಂದಿನಂತೆ ಬೆಳಗಿನ ಜಾವಕ್ಕೆ ಎದ್ದು ಸುಲ್ಲಾ ನಿಯನ್ನು ಎಚ್ಚರಗೊಳಿಸಿ ಅಕ್ಕಾ ! ನಿನಗೆ ನಿದ್ದೆ ಬಾರದೆಯಿದ್ದರೆ ಬೆಸ್ತರವನಿಗೆ ಮುಂದೆ ಸಂಭವಿಸಿದ ಕಥೆಯನ್ನು ಹೇಳು. ಬೇಗನೆ ಬೆಳ ಗಾಗಿ ಹೋಗುವುದೆಂದು ಹೇಳಲು ಸಹರಜಾದಿಯು ಹಾಗೆಯೇ ಆಗಲೆಂದು ಸುಲ್ತಾನರಿಂದ ಅಪ್ಪಣೆಯನ್ನು ಪಡೆದು, ಕಥೆಯನ್ನು ಹೇಳಲಾರಂಭಿಸಿದ ಳು, ಸುಲ್ತಾನರೇ ! ಚಿಸ್ತರವನ್ನು ಹಿಡಿದುತಂದ ಆ ನಾಲ್ಕು ಮೀನುಗಳ ನ್ನು ಸುಲ್ತಾನರುನೋಡಿ ಎಷ್ಟೊಂದು ಆಶ್ಚರ್ಯವನ್ನು ಹೊಂದಿದರೊ ಅದನ್ನು ತಾವೇ ಯೋಚಿಸಬಹುದು. ಅವರು ಆ ಮೀನುಗಳನ್ನು ಬಹಳ ಹೊತ್ತಿನವರೆಗೂ ಚೆನ್ನಾಗಿ ನೋಡಿ ಹೆಚ್ಚಾದ ಆಶ್ಚರ್ಯವನ್ನು ಹೊಂ3 ತನ್ನ ಪ್ರಧಾನಮಂತ್ರಿ ಯನ್ನು ಕುರಿತು, ಈ ಮೀನುಗಳು ನಿಮ್ಮ ಸುತ್ತಿ