________________
ಅರೇಬಿಯನ್ ನೈಟ್ಸ್ ಕಥೆಗಳು, ಬರವಾಗಿವೆ ? ಇವುಗಳನ್ನು ಕುರಾಜನಿಗೆ ಬಹುಮನಮಗಿ ಕಳುಹಿ ಸಬೇಕಾಗಿರುವುದು. ಆತನು ಇದನ್ನು ನೋಡಿ ಪರಮಶ್ಚರ್ಯವನ್ನು ಹೊಂದುವನು, ಎಂದು ನುಡಿಯಲು, ಮಂತ್ರಿಯು ಅವುಗಳನ್ನು ತೆಗೆದು ಕೊಂಡುಹೋಗಿ ಅಡಿಗೆಯವನಕೈಗೆ ಕೊಟ್ಟು ಈಮೀನುಗಳನ್ನು ಚೆನ್ನಾ ಗಿ ಅ ಡಿ ಗ ಮೂಡೆಂದು ಹೇಳಿ ಸು ಾ ನ ರ ಬಳಿಗೆ ಬರಲು ಅವರು ಬೆಸ್ಕ ರವನಿಗೆ ತಮ್ಮ ದೇಶದಲ್ಲಿ ಛಲಾವಣೆಯಲ್ಲಿರುವ ನಾನೂರು ಭಂಗಾರದ ನಾಣ್ಯ ಗಳನ್ನು ಕೊಡುವಂತೆ ಹೇಳಲು ಆತನು ಹಾಗೆಯೇನೂಡಿದನು. ಬೆಸ್ತರ ವನು ಹುಟ್ಟಿದಾಗಿನಿಂದಲೂ, ಇನ್ನೊಂದು ಹಣವನ್ನು ಕಾಣದಿದ್ದುದರಿಂ ದ ಮೊದಲು ಸಂಶಯುಗ ಸನಾದರೂ, ಬಳಿಕ ಸಂತೋಷಚಿತ್ತನಾಗಿ ತನ್ನ ಸಂಸಾರಕ್ಕೆ ಬೇಕಾದ ಪದಾರ್ಥಗಳನ್ನು ಆಹಣದಿಂದ ಕೊಂಡುಕೊಂಡನು. ಹೀಗೆ ಹೇಳಿದ ಸಹರಜಾದಿಯನ್ನು ನೋಡಿ ಸುಲ್ತಾನರು ಆ ರಾಜನ ಅಡಿ ಗಯವನು ಮೀನುಗಳನ್ನೇನು ಮೂಡಿದನೋ ಅದನ್ನು ಹೇಳಬೇಕೆಂದು ಕೇಳೆಲು ಆತನಿಗೆ ಮಹತ್ತಾದಸಂಕಟವುಂಟಾಯಿತು. ಅವನು ಆ ಮೀನು ಗಳನ್ನು ಚೆನ್ನಾಗಿತೊಳದು, ಪಾತ್ರೆಯಲ್ಲಿ ಹಾಕಿ ಕುದಿಸುವುದಕ್ಕಾಗಿ ಒಲೆಯ ಮೇಲಿಡಲಾಗಿ ಒಂದುಪಕ್ಕವು ಚೆನ್ನಾಗಿ ಬೆಂದಿರುವುದೆಂದು ತಿಳಿಯದೆ ತಿರುವಿ ಹಾಕಿದನು. ಅವನು ಹಾಗೆ ತಿರುವಿ ಹಾಕಿದಕೂಡಲೇ, ಮಹಾದ್ಭುತವಾ ಯಿತು, ಆಹಾ ! ಆ ಅಡಿಗೆಯಮನೆಯಲ್ಲಿ ಗೋಡೆಯಿಂದೊಬ್ಬ ರೂಪವ ತಿಯಾದ ಹೆಂಗಸು ಹೊರಗೆಬಂದಳು, ಅವಳು ಈಜಿಪು ( ಐಗುಪ್ತ ) ರಾಜ್ಯದ ಸಿಯಂತೆ ಸುಂದರಳಾಗಿ ಸರ್ವಾಲಂಕಾರಗಳಿಂದೊಪ್ಪು ರುವುದನ್ನು ಅಡಿಗೆಮಡುತ್ತಿದ್ದ ಹೆಂಗಸುನೋಡಿಭುಮೆಯಿಂದನಿಶ್ಚಿತ ೪ಾಗಿ ನಿಂತುಕೊಂಡಳು, ಆ ಹೆಂಗಸು ಅಡಿಗೆಯವಾಯಬಳಿಗೆ ಬಂದು, ಕೈಯಿಂದ ಒಂದುಮೀನನ್ನು ಹೊಡೆದು, ಓ ಮೀನೇ ! ನೀನೇ ! ನಿನ್ನಕೆ ಲಸದಲ್ಲಿ ನೀನಿರುವೆಯಾ ? ಎಂದು ಕೇಳಿದಳು. ಅದಕ್ಕೆ ಅವಳಿಗೆ ಜವಾಬು ಬರದೇಹೋದುದರಿಂದ ಮತ್ತೆ ಮೊದಲಿನಂತೆಯೆ ಕೂಗಿದಳು. ಆ ಬಳಿಕ ಆ ನಾಲ್ಕು ಮೀನುಗಳು ಅವಳನ್ನು ಮುಖವೆತ್ತಿ ನೋಡಿ ಹೌದು ! ಹೌದು ನೀನು ಹೇಳಿದಂತೆ ನಾವು ನೋಡುತ್ತಿರುವೆವು. ನೀನು ನಿನ್ನ ಋಣವನ್ನು ತೀರಿಸಿಕೊಂಡರೆ ನಾವು ನಮ್ಮಗಳಋಣವನ್ನು ಕಳೆದುಕೊಳ್ಳುವೆವು. ನೀನು ಇಲ್ಲಿಂದ ಹೊರಟುಹೋಗುವುದಾದರೆ ನಾವು ಸುಖವನ್ನು