ಈ ಪುಟವನ್ನು ಪರಿಶೀಲಿಸಲಾಗಿಲ್ಲ.



   ||                            -14-
 

  25.     ತ ಏತೇ ಸಂಧಯೋಷ್ಟ ವಿಧಾಃ | ಕೋರೋದೂಖಲ ಸಾಮುದ್ಗ ಪ್ರತರ 
          ತುನ್ನಸೇವನೀ ವಾಯಸತುಂಡ ಮಂಡಲ ಶಂಖಾವರ್ತಾಃ | ತೇಷಾ 
          ಮಂಗುಲಿ ಮಣಿಬಂಧ ಗುಲ್ಛ ಜಾನು ಕೂರ್ಪರೇಷು ಕೋರಾಃ
          ಸಂಧಯಃ | ಕಕ್ಷಾ ವಂಕ್ಷಣ ದಶನೇಷೂದೂಖಲಾಃ | ಅಂಸ ಪೀರ ಗುದ 
          ಭಗ ನಿತಂಬೇಷು ಸಾಮುದ್ಗಾ 8 | ಗ್ರೀವಾ ಪೃಷ್ಠ ವಂಶಯೊಃ ಪ್ರತರಾಃ |

ಸಂಧಿಗಳು ಆಕಾರದಲ್ಲಿ ಅಷ್ಠ ವಿಧ

          ಶಿರಃ ಕಟೀ ಕಪಾಲೇಷು ತುನ್ನಸೇವನೀ | ಹನ್ವೋ ರುಭಯತಸ್ತು
          ವಾಯಸತುಂಡಾಃ| ಕಂರ ಹೃದಯ ನೇತ್ರ ಕ್ಲೋಮ ನಾಡೀಷು ಮಂಡಲಾಃ| 
          ಶ್ರೋತ್ರ ಶೃಂಗಾಟಕೇಷು ಶಂಖಾವರ್ತಾಃ | ತೇಷಾಂ
          ನಾಮಭಿರೇವಾಕೃತಯಃ ಪ್ರಾಯೇಣ ವ್ಯಾಖ್ಯಾತಾಃ | (ಸು 332-33)
   ಆ ಸಂದುಗಳು ಎಂಟು ವಿಧ. 1 ಕೋರಾಕಾರ (ಮೊಗ್ಗೆಯ ಆಕಾರ, ಮೊನೆ 
   ಯುಳ್ಳದ್ದು), 2 ಉದೂಖಲಾಕಾರ (ಒರಳಿನಂತೆ), 3. ಸಾಮುದ್ಗಾಕಾರ 
   (ಸಂಪುಷ್ಟದಂತೆ), 4 ಪ್ರತರಾಕಾರ (ಡೋಣಿ ಬದಲಿಗೆ ಉಪಯೋಗಿಸುವ 
   ಚಟ್ಟೆಮರನ ತುಂಡಿನಾಕಾರ), 5. ತುನ್ನ ಸೇವನೀ (ಭಾಗ ಕೂಡಿಸಿದ ಹೊಲಿಗೆ) 
   ಆಕಾರ, 6 ವಾಯಸ ತುಂಡ (ಕಾಗೆ ಮೋತಿಯ)ದ ಆಕಾರ, 7. ಮಂಡಲಾಕಾರ 
   (ಉರುಟಾಗಿಯೂ ಚಟ್ಟೆಯಾಗಿಯೂ ಇರುವದು), 8. ಶಂಖಾ ವರ್ತಾಕಾರ (ಶಂಖದ 
   ಸುಳಿಯ ಆಕಾರ). ಅವುಗಳಲ್ಲಿ ಬೆರಳು, ಕೈಯ ಮಣಿಗಂಟು, ಕಾಲಿನ ಮಣಿಗಂಟು, 
   ಮೊಣಕಾಲಗಂಟು, ಮೊಳಕೈಗಂಟು, ಇವುಗಳಲ್ಲಿರುವ ಸಂದುಗಳು ಕೋರಾಕಾರ, 
   ಕಂಕುಳ ಸಂದು, ತೊಡೆಸಂದು, ಮತ್ತು ಹಲ್ಲುಗಳಲ್ಲಿ ಒರಳಾಕಾರ, ಹೆಗಲ ಪೀರ, 
   ಗುದ, ಭಗ, ಅಂಡು, ಇವುಗಳಲ್ಲಿನ ಸಂದುಗಳು ಸಂಪುಟಾಕಾರ; ಕರುಳು ಮತ್ತು 
   ಬೆನ್ನೆಲುಬು ಇವುಗಳಲ್ಲಿರುವ ಸಂದುಗಳು ಪ್ರತರಾಕಾರ, ಶಿರಸ್ಸು ಮತ್ತು ಸೊಂಟದ 
   ಕಪಾಲಗಳು, ಇವುಗಳಲ್ಲಿನವು ತುನ್ನಸೇವನಿಯಾಕಾರ, ದವಡೆಗಳೆರಡರ ಇತ್ತಟ್ಟು 
   ಇರುವವುಗಳು ಕಾಗೆ ಮೋತಿಯಾಕಾರ, ಕುತ್ತಿಗೆ, ಹೃದಯ, ಕಣ್ಣು, ಮತ್ತು ಕ್ಲೋಮ 
   ಇವುಗಳ ನಾಳಗಳಲ್ಲಿರುವವು ಮಂಡಾಲಾಕಾರ; ಕಿವಿಗಳೊಳಗಿನವು 
   ಶಂಖಾವರ್ತಾಕಾರ.
       26   ನವಸ್ನಾಯುಶತಾನಿ | ತಾಸಾಂ ಶಾಖಾಸು ಷಟ್ರತಾನಿಃ ದ್ವೇಶತೇ ತ್ರಿಂಶಚ್ಚ
            ಕೋಷ್ಠೆ | ಗ್ರೀವಾಂ ಪ್ರತ್ಯೂರ್ಧ್ವಂ ಸಪ್ತತಿಃ | ಏಕೈಕಸ್ಯಾಂ ಪಾದಾಂ
            ಗುಲ್ಯಾಂ ಷಟ್ ನಿಚಿತಾಸ್ತಾಸ್ತ್ರಿಂಶತ್ | ತಾವತ್ಯ ಏವ 
            ತಲಕೂರ್ಚ ಗುಲ್ಫೇಷು | ತಾವತ್ಯ ಏವ ಜಂಘಾಯಾಂ | ದಶ ಜಾನುನೀ 
            ಚತ್ವಾರಿಂ  ಶದೂರೌ | ದಶವಬ್ಕಣೇ | ಶತಮಧ್ಯರ್ಧಮೇವಮೇಕಸ್ಮಿನ್ 
            ಸಕ್ದ್ನಿ ಭವಂತಿ | ಏತೇನೇತರ ಸಕ್ಥಿ ಬಾಹೂ ಚ ವ್ಯಾಖ್ಯಾತೌ| ಷಷ್ಟಿ 
            ಕಟ್ಯಾಂ |ಅಶೀತಿಃ ಪೃಷ್ಠೇ | ಪಾರ್ಶ್ವಯೋಃ ಷಷ್ಟಿಃ | ಉರಸಿ ತ್ರಿಂಶತ್ | 
            ಷಟ್ ತ್ರಿಂಶದ್ ಗ್ರೀವಾಯಾಂ |ಮೂರ್ಧಿ ಚತುಸ್ತ್ರಿಂಶತ್ | ಏವಂ

ನರಗಳು ನವಸ್ನಾ ಯುಶತಾನಿ ವ್ಯಾಖ್ಯಾತಾನಿ | (ಸು. 333.) (ಸ್ನಾಯುಗಳ) ಸಂಖ್ಯೆ ಮತ್ತು ಸ್ಥಾನ


     ಸ್ನಾಯು ಎಂಬ ನರಗಳು 900, ಇವುಗಳ ವಿವರ:-

ಕಾಖೆಗಳಲ್ಲಿ ................................................600 ಕೋದ್ಠ ಎಂಬ ಮುಂಡದಲ್ಲಿ...................................230