ಈ ಪುಟವನ್ನು ಪರಿಶೀಲಿಸಲಾಗಿದೆ

ಆ 11 -24-

       ಮೂತ್ರಸ್ರೋತಃಧಾಚ್ಛುಕ್ರಂ ಪುರುಷಸ್ಯ ಪ್ರವರ್ತತೇ || 
       ಕೃತ್ಸ್ನದೇಹಾಶ್ರಿತಂ ಶುಕ್ರಂ ಪ್ರಸನ್ನಮನಸಪ್ತಧಾ |
 ಸ್ತ್ರೀಷು ವ್ಯಾಯಚ್ಛತಶ್ಚಾಪಿ ಹರ್ಷಾತ್ತತ್ ಸಂಪ್ರವರ್ತತೇ || (ಸು.320.) 

ಹಾಲಿನಲ್ಲಿ ತುಪ್ಪವು ಮತ್ತು ಕಬ್ಬಿನಲ್ಲಿ ಬೆಲ್ಲದ ರಸವು ಅಡಗಿರುವ ಹಾಗೆ, ಮನು ಷ್ಯರ ಇಡೀ ಶರೀರದಲ್ಲಿ ಶುಕ್ರಧಾತು ಇರುತ್ತದಾಗಿ ವೈದ್ಯನು ತಿಳಿಯತಕ್ಕದ್ದು. ಮೂತ್ರ ನಾಳದ ದ್ವಾರಕ್ಕೆ ಕೆಳಗೆ ಬಲಪಾರ್ಶ್ವದ ಎರಡು ಅಂಗುಲದಲ್ಲಿ ಮೂತ್ರದ ಮಾರ್ಗವಾಗಿಯೇ ಪುರುಷನ ಶುಕ್ರಧಾತುವು ಚಲಿಸುತ್ತದೆ. ಶುಕ್ರವು ಇಡೀ ಶರೀರವನ್ನು ವ್ಯಾಪಿಸಿಕೊಂಡಿರುವ ದಾದರೂ ಸಂತುಷ್ಟ ಮನಸ್ಸಿಂದ ಮನುಷ್ಯನು ಸ್ತ್ರೀಭೋಗ ಮಾಡುವಾಗ್ಗೆ ಹರ್ಷದ ಬಲ ದಿಂದ ಶುಕ್ರವು ಒಟ್ಟಾಗಿ ಹೊರಗೆ ಸ್ರವಿಸುತ್ತದೆ.

58. ಗೃಹೀತಗರ್ಭಾಣಾಮಾರ್ತವವಹಾನಾಂ ಸ್ರೋತಸಾಂ ವರ್ತ್ಯಾನ್ಯ

   ವರುಧ್ಯಂತೇ ಗರ್ಭೇಣ ತಸ್ಮಾದ್ಗಹೀತಗರ್ಭಾಣಾಮಾರ್ತವಂ ನ ಗರ್ಭಿಣಿಯ ದೃಶ್ಯತೇ | ತತಸ್ತದಧಃ ಪ್ರತಿಹತಮೂರ್ಧ್ವಮಾಗತಮಪರಂ ಚೋಪ ರಲ್ಲಿ ಆರ್ತವ ಚೀಯಮಾನಮಪರೇತ್ಯಭಿಧೀಯತೇ | ಶೇಷಂ ಚೋರ್ಧ್ವತರಮಾ ಗತಂ ಪಯೋಧರಾವಭಿಪ್ರತಿಪದ್ಯತೇ ತಸ್ಮಾದ್ಗ ರ್ಭಿಣ್ಯಃ ಪೀನೋ ನ್ನತಪಯೋಧರಾ ಭವಂತಿ | (ಸು, 320.) 
 ಗರ್ಭಿಣಿಯಾದ ಸ್ತ್ರೀಯರಲ್ಲಿ, ಶೋಣಿತ ಹರಿಯತಕ್ಕ ಸ್ರೋತಸ್ಸುಗಳು ಗರ್ಭದಿಂದ ತಡೆಯ ಲ್ಪಡುವ ದೆಸೆಯಿಂದ, ಶೋಣಿತವು ಕಾಣುವದಿಲ್ಲ (ಮುಟ್ಟಾಗುವದಿಲ್ಲ). ಆ ಶೋಣಿತವು ಕೆಳಗಿನ ಮಾರ್ಗ ಮುಚ್ಚಿಹೋದ್ದರಿಂದ ಮೇಲೆ ಹೋಗಿ, ಅಪರವಾಗಿ (ಅಂದರೆ ಬೇರೆ ದಿಕ್ಕಿ ನಲ್ಲಿ) ಕೂಡುವದರಿಂದ 'ಅಪರಾ' ಎಂಬ ಹೆಸರಿನ ಜರಾಯುವಾಗಿ ಪರಿಣಮಿಸುತ್ತದೆ. ಉಳಿದ ಶೋಣಿತವು ಇನ್ನೂ ಮೇಲಕ್ಕೆ ಹೋಗಿ, ಸ್ತನಗಳನ್ನು ಹೊಂದಿ, ರೂಪಾಂತರ ಹೊಂದುತ್ತದೆ. ಆದ್ದರಿಂದ ಗರ್ಭಿಣಿಯ ಸ್ತನಗಳು ಎತ್ತರ ಮತ್ತು ಅಗಲವಾಗುತ್ತವೆ.

59. ಸಿರಾಸ್ನಾಯು ಮೇದಸಃ ಸ್ನೇಹಮಾದಾಯ ಸಿರಾಸ್ಕಾಯುತ್ತ ಮಾಪ್ನುಯಾತ್ | ಗಳ ಭೇದ ಸಿರಾಣಾಂ ಚ ಮೃದುಃ ಪಾಕಃ ಸ್ನಾಯೂನಾಂ ಚ ತತಃ ಖರಃ ||

                                            (ಸು. 321.) 

ಸಿರಾನಾಳಗಳು ಮೇದಸ್ಸಿನ ಜಿಡ್ಡನ್ನು ಪಡೆದು ನರಗಳಾಗುತ್ತವೆ. ಸಿರೆಗಳು ಮೃದು ಪಾಕದಿಂದ ಮತ್ತು ನರಗಳು ಅದಕ್ಕೂ ಏರಾದ ಖರಪಾಕದಿಂದ ಆಗುತ್ತವೆ.

60. ವಿದ್ಯಾದ್ ದ್ವ್ಯಂಗುಲ ಬಾಹುಲ್ಯಂ ಸ್ವಾಂಗುಷ್ಠೋದರಸಮ್ಮಿತಂ |

ದ್ವ್ಯಂಗುಲಂ ಸರ್ವತಃ ಸಾರ್ಧಂ ಭಿಷಗ್ನಯನಬುದ್ಭುದಂ || 

ಕಣ್ಣಿನ ಸುವೃತ್ತಂ ಗೋಸ್ತನಾಕಾರಂ ಸರ್ವಭೂತಗುಣೋದ್ಭವಂ | ವರ್ಣನ ಪಲಂ ಧುವೋಗ್ನಿತೋರಕ್ತಂ ವಾತಾತ್ ಕೃಷ್ಣಂ ಸಿತಂ ಜಲಾತ್||