ಈ ಪುಟವನ್ನು ಪರಿಶೀಲಿಸಲಾಗಿದೆ

ಅ. 1] -25-


                        ಆಕಾಶಾದಶ್ರುಮಾರ್ಗಾಶ್ಚ ಜಾಯಂತೇ ನೇತ್ರಬುದ್ಬುದೇ | 
                      (ದೃಷ್ಟಿಂ ಚಾತ್ರ ತಧಾ ವಕ್ಷ್ಯೇ ಯಧಾ ಬ್ರೂಯಾದ್ವಿಶಾರದಃ || ) 
                          ನೇತ್ರಾಯಾಮತ್ರಿಭಾಗಂ ತು ಕೃಷ್ಣ ಮಂಡಲಮುಚ್ಯತೇ |  
                       ಕೃಷ್ಣಾ ತ್ಸಪ್ತಮಮಿಚ್ಛಂತಿ ದೃಷ್ಟಿಂ ದೃಷ್ಟಿವಿಶಾರದಾಃ || 
                    ಮಂಡಲಾನಿ ಚ ಸಂಧೀಂಶ್ಚ ಪಟಲಾನಿ ಚ ಲೋಚನೇ | 
                   ಯಧಾಕ್ರಮಂ ವಿಜಾನೀಯಾತ್ ಪಂಚ ಷಟ್ ಚ ಷಡೇವ ಚ || 
                       ಪಕ್ಷ್ಮವರ್ತ್ಮಶ್ವೇತಕೃಷ್ಣ ದೃವೀನಾಂ ಮಂಡಲಾನಿ ತು | 
              ಆನುವೂರ್ವಂ ತು ತೇ ಮಧ್ಯಾಶ್ಚತ್ವಾರೋ೮೦ತ್ಯಾ ಯಧೋತ್ರರಂ ||
                           ಪಕ್ಷ್ಮವರ್ತ್ಮಗತಃ  ಸಂಧಿರ್ವತ್ಮ್ರಶುಕ್ಲಗತೋಪರಃ |
                                    ಶುಕ್ಲಕೃಷ್ಣಗತಸ್ತ್ವನ್ಯಃ ಕೃಷ್ಣ ದೃಷ್ಟಿಗತೋಪರಃ ||
                                    ತತಃ ಕನೀಕಗತಃ ಷಷ್ಟಶ್ಚಾಪಾಂಗಗಃ ಸ್ಮೃತಃ |
                         ದ್ವೇ ವರ್ತ್ಮಪಟಲೇ ವಿದ್ಯಾಚ್ಚತ್ವಾರನ್ಯಾನಿ ಚಾಕ್ಷಿಣಿ || 
                        ಜಾಯಂತೇ ತಿಮಿರಂ ಯೇಷು ವ್ಯಾಧಿಃ ಪರಮದಾರುಣಃ | 
                 ತೇಜೋ ಜಲಾಶ್ರಿತಂ ಬಾಹ್ಯಂ ತೇಷ್ಟನ್ಯತ್ ಪಿಶತಾಶ್ರಿತಂ || 
                        ಮೇದಸ್ತತೀಯಂ ಪಟಲಮಾಶ್ರಿತಂ ತೃಸ್ಟಿಚಾಪರಂ | 
                  ಪಂಚಮಾಂಶ ಸಮಂ ದೃಷ್ಟೇಸ್ತೇಷಾಂ ಬಾಹುಲ್ಯಮಿಪ್ಯತೇ ||  
                          ಸಿರಾಣಾಂ ಕಂಡರಾಣಾಂ ಚ ಮೇದಸಃ ಕಾಲಕಸ್ಯ ಚ | 
                  ಗುಣಾಃ ಕಾಲಾತ್ಪರಃ ಶ್ಲೇಷ್ಮಾ ಬಂಧನೇಕೋಃ ಸಿರಾಯುತಃ || 
                            ಸಿರಾನುಸಾರಿಭಿರ್ದೋವೈರ್ವಿಗುಣೈರೂರ್ಧ್ವಮಾಗತೈಃ | 
                ಜಾಯಂತೇ ನೇತ್ರಭಾಗೇಷು ರೋಗಾಃ ಪರಮದಾರುಣಾಃ | (ಸು. 658-59.)
 ಕಣ್ಣುಗುಳ್ಳೆಯು ತನ್ನ ಹೆಬ್ಬೆಟ್ಟಿನ ಹೊಟ್ಟೆ ಲೆಕ್ಕದಲ್ಲಿ 2 ಅಂಗುಲ ಉದ್ದ (ಒಳಗಿನ ಕಂತ)    
2  ಅಂಗುಲ ಸುತ್ತುವರಿ, ಪರಿಮಾಣವುಳ್ಳದ್ದಾಗಿಯೂ, ಶುದ್ದ ಉರುಟಾಗಿಯೂ ದನದ 
ಮೊಲೆಯ ಆಕಾರವಾಗಿಯೂ ಇರುತ್ತದೆ ಅದು ಪಂಚಭೂತಗಳ ಗುಣಗಳಿಂದ ಹುಟ್ಟಿದ್ದು. 
ಭೂಗುಣದಿಂದ ಮಾಂಸ, ತೇಜೋಗುಣದಿಂದ ರಕ್ತ, ವಾಯುಗುಣದಿಂದ ಕಪ್ಪು, ಜಲಗುಣ 
ದಿಂದ ಬಿಳೇದು, ಮತ್ತು ಆಕಾಶಗುಣದಿಂದ ಕಣ್ಣೀರಿನ ಮಾರ್ಗಗಳು, ಕಣ್ಣುಗುಳ್ಳೆಯಲ್ಲ 
ಉಂಟಾಗುತ್ತವೆ ಕಣ್ಣಿನ ಅಗಲದಲ್ಲಿ 3ನೇ 1 ಭಾಗವು ಕೃಷ್ಣಮಂಡಲ(ಕರೀ ಗುಡ್ಡೆ) ಎಂತ 
ಹೇಳಲ್ಪಡುತ್ತದೆ ಕೃಷ್ಣಮಂಡಲದ 7ನೇ 1 ಭಾಗವು ದೃಷ್ಟಿ (ಬೊಂಬೆ) ಇರಬೇಕಾಗಿ ಬಲ್ಲವರು 
ಹೇಳುತ್ತಾರೆ. ಕಣ್ಣಿನಲ್ಲಿ 5 ಮಂಡಲಗಳು, 6 ಸಂಧಿಗಳು, ಮತ್ತು 6 ಪಟಲಗಳು, ಇದ್ದಾವೆ. 
ಶೀಮ (ರೆಪ್ಪೆ ಕೂದಲು), ರೆಪ್ಪೆ, ಬಿಳೇ ಗುಡ್ಡೆ (ಬಿಳೇ ಆಲಿ) ಕಪು ಗುಡ್ಡೆ (ಕರೇ ಆಲಿ) ದೃಷ್ಟಿ 
ಇವು ಐದು ಮಂಡಲಗಳು. ಇವುಗಳಲ್ಲಿ ದೃಷ್ಟಿಮಂಡಲವು ಕರೇ ಆಲಿಯ ಮಧ್ಯ, ಕರೇ 
ಆಲಿಯು ಬಿಳೇ ಆಲಿಯ ಮಧ್ಯ, ಬಿಳೇ ಆಲಿಯು ರೆಪ್ಪೆಗಳ ಮಧ್ಯ, ರೆಪ್ಪೆಗಳು ಶೀಮೆಗೆ ಮಧ್ಯ 
ಇರುತ್ತವೆ. ಯಧೋತ್ತರವಾಗಿ ರೆಪ್ಪೆಯು ಶೀಮೆಗೆ, ಬಿಳೇ ಆಲಿಯು ರೆಪ್ಪೆಗೆ, ಕರೇ ಆಲಿಯು ಬಿಳೇ 
ಆಲಿಗೆ, ದೃಷ್ಟಿಯು ಕರೇ ಆಲಿಗೆ, ಅಂತ್ಯವಾಗಿರುತ್ತವೆ. ಶೀಮೆಗೂ ರೆಪ್ಪೆಗೂ 1,