ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅ 11

         -30–

ಕೆಳಗೆ ಹೋಗುವ ಧಮನಿಗಳ ಕಲಸ ಪಾನರಸಂ ವಿಪಕ್ವಮೌಷ್ಣ್ಯಾದ್ವಿವೇಚಯಂತ್ಯೋಭಿವಹಂತ್ಯಃ ಶರೀರಂ ತರ್ಪಯತ್ಯರ್ಪಯಂತಿ ಚೋರ್ಧ್ವಗತಾನಾಂ ತಿರಗತಾನಾಂ ರಸ ಸ್ಥಾನಂ ಚಾಭಿಪೂರಯಂತಿ ಮೂತ್ರಪುರೀಷಸ್ತೇದಾಂಶ್ಚ ವಿವೇಚಯಂ ತ್ಯಾಮಕ್ವಾಶಯಾಂತರೇ ಚ ತ್ರಿಧಾ ಜಾಯಂತೇ ತಾಸ್ತ್ರಿಂಶತ್ | ತಾಸಾಂ ತು ವಾತಪಿತ್ತ ಕಫಶೋಣಿತರಸಾನ್ ದ್ವೇ ದ್ವೇ ವಹತಸ್ತಾ ದಶ ದ್ವೇ ಅನ್ನವಾಹಿನ್ಯಾವಂತ್ರಾಶ್ರಿತೇ ತೋಯವಹೇ ದ್ವೇ ಮೂತ್ರ ವಸ್ತಿಮಭಿಪ್ರಪನ್ನೇ ಮೂತ್ರವಹೇ ದ್ವೇ ಶುಕ್ರವಹೇ ದ್ವೇ ಶುಕ್ರಪ್ರಾದು ರ್ಭಾವಾಯ ದ್ವೇ ವಿಸರ್ಗಾಯ ತೇ ಏವ ರಕ್ತಮಭಿವಹತೋ ನಾರೀಣಾ ಮಾರ್ತವಸಂಜ್ಞಂ | ದ್ವೇ ವರ್ಚೋನಿರಸನ್ಯೌ ಸ್ಧೂಲಾಂತ್ರಪ್ರತಿ ಬದ್ಧೇ | ಅಷ್ಟಾವನ್ಯಾಸ್ತಿರ್ಯಗ್ಗಾನಾಂ ಧಮನೀನಾಂ ಸ್ವೇದಮರ್ಪ ಯಂತಿ | ತಾಸ್ತ್ವೇತಾಸ್ತ್ರಿಂಶತ್ ಸವಿಭಾಗಾ ವ್ಯಾಖ್ಯಾತಾ ಏತಾಭಿರ ಧೋ ನಾಭೇಃ ಪಕ್ವಾಶಯಕಟೀಮೂತ್ರಪುರೀಷಗುದವಸ್ತಿಮೇಢ್ರ ಸಕ್ಥೀನಿ ಧಾರ್ಯಂತೇ ಯಾಪ್ಯಂತೇ ಚ | (ಸು. 356.)

ಕೆಳಗೆ ಹೋಗುವ ಧಮನಿಗಳು ವಾತ, ಮೂತ್ರ, ಪುರೀಷ, ಶುಕ್ರ, ಶೋಣಿತ ಮುಂತಾದವುಗಳನ್ನು ಕೆಳಗೆ ಸಾಗಿಸುತ್ತವೆ. ಅವು ಪಿತ್ತಾಶಯಕ್ಕೆ ಹೋಗಿ, ಅಲ್ಲಿ ಉಷ್ಣತೆಯಿಂದ ಪಕ್ವವಾದ ಅನ್ನಪಾನಗಳ ರಸವನ್ನು ಪ್ರತ್ಯೇಕಿಸಿ ಮುಂದೆ ಸಾಗಿಸುತ್ತಾ, ಶರೀರಕ್ಕೆ ಅರ್ಪಿಸಿ ತೃಪ್ತಿಗೊಳಿಸುತ್ತವೆ. ಮತ್ತು ಮೇಲಕ್ಕೂ ಅಡ್ಡಕ್ಕೂ ಹೋದ ಧಮನಿಗಳ ರಸ ಸ್ಥಾನವನ್ನು ಭರ್ತಿ ಮಾಡುತ್ತವೆ. ಮೂತ್ರ, ಪುರೀಷ, ಬೆವರು, ಇವುಗಳನ್ನು ಪ್ರತ್ಯೇಕಿಸುತ್ತವೆ. ಆಮ ಮತ್ತು ಪಕ್ವಾಶಯದ ಮಧ್ಯದಲ್ಲಿ ಅವು ಮೂರುಮೂರಾಗಿ ಒಡೆದು 30 ಶಾಖೆಗಳಾಗುತ್ತವೆ. ಅವುಗಳಲ್ಲಿ ಎರಡೆರಡು ವಾತ, ಪಿತ್ತ, ಕಫ, ರಕ್ತ, ರಸಗಳನ್ನು ಸಾಗಿಸುವಂಧವು, ಒಟ್ಟು ಹತ್ತು, ಎರಡು ಕರುಳಿನಲ್ಲಿದ್ದು ಅನ್ನವನ್ನು ಸಾಗಿಸುವಂಧವು, ಎರಡು ನೀರನ್ನು ಸಾಗಿಸುವಂಧವು, ಎರಡು ಮೂತ್ರಾಶಯವನ್ನು ಹೊಕ್ಕು ಮೂತ್ರವನ್ನು ಸಾಗಿಸುವಂಧವು; ಎರಡು ಶುಕ್ರವನ್ನು ಹೊರಡಿಸುವಂಧವು; ಎರಡು ಶುಕ್ರವನ್ನು ಹೊರಗೆ ಬಿಡುವಂಧವು; ಇವೇ ಹೆಂಗಸರಲ್ಲಿ ಆರ್ತವ ಎಂಬ ರಕ್ತವನ್ನು ಹೊತ್ತು ಸಾಗಿಸುವವು, ದೊಡ್ಡ ಕರುಳಿಗೆ ಕಟ್ಟಲ್ಪಟ್ಟ ಎರಡು ಪುರೀಷವನ್ನು ಹೊರಪಡಿಸುತ್ತವೆ, ಉಳಿದ ಎಂಟು ಅಡ್ಡಹೋದ ಧಮನಿಗಳು ಬೆವರನ್ನು ಅರ್ಪಿಸುತ್ತವೆ. ಹೀಗೆ ಅವು 30 ಮತ್ತು ಅವುಗಳ ಭೇದಗಳು ವಿವರಿಸಲ್ಪಟ್ಟದ್ದಾಯಿತು. ಇವುಗಳಿಂದ ನಾಭಿಯ ಕೆಳಗೆ 

ಪಕ್ವಾಶಯ, ಸೊಂಟ, ಮೂತ್ರ, ಪುರೀಷ, ಗುದ, ಮೂತ್ರಾಶಯ, ಮೇಢ್ರ, ಮತ್ತು ಕಾಲುಗಳು ಆಧರಿಸಲ್ಪಟ್ಟು ನಡಿಸಲ್ಪಡುತ್ತವೆ. ಅಂದರೆ ಅವುಗಳ ಸ್ಥಿತಿಗತಿ ನಡಿಸಲ್ಪಡುತ್ತದೆ.

73. ತಿರ್ಯಗ್ಗತಾನಾಂ ತು ಚತಸೃಣಾಂ ಧಮನೀನಾಮೇಕೈಕಾ ಶತಧಾ ಸಹಸ್ರಧಾ ಚೋತ್ತರೋತ್ತರಂ ವಿಭಜ್ಯಂತೇ | ತಾಸ್ತ್ವಾಸಂಖ್ಯಾ ಸ್ತಾಭಿ ರಿದಂ ಶರೀರಂ ಗವಾಕ್ಷಿತಂ ವಿಬದ್ಧಮಾತತಂ ಚ | ತಾಸಾಂ ಮುಖಾನಿ