ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆ 11

            -- 31 --

ರೋಮಕೂಪಪ್ರತಿದ್ಧಾನಿ | ಯೈಃ ಸ್ವೇದಮಭಿವಹಂತಿ ರಸಂ ಚಾಪಿ ಸಂತರ್ಪಯಂತ್ಯಂತರ್ಬಹಿಶ್ಚ ತೈರೇವ ಚಾಭ್ಯಂಗಪರಿಷೇಕಾವ ಅಡ್ಡ ಹೋಗುವ ಧಮನಿಗಳ ಕೆಲಸ ಗಾಹಾಲೇಪನವೀರ್ಯಾಣ್ಯಂತಃಶರೀರಮಭಿಪ್ರತಿಪದ್ಯಂತೇ ತ್ವಚಿ ವಿ ಪಕ್ವಾನಿ ತೈರೇವ ಸ್ಪರ್ಶಸುಖಮಸುಖಂ ವಾ ಗೃಹ್ಣಾತಿ | ತಾಸ್ತ್ವೇ ತಾಶ್ವತಸ್ರೋ ಧಮನ್ಯಃ ಸರ್ವಾಂಗಗತಾಃ ಸವಿಭಾಗಾ ವ್ಯಾಖ್ಯಾತಾಃ | (ಸು. 356-57.) ಅಡ್ಡ ಹೋಗುವ ನಾಲ್ಕು ಧಮನಿಗಳು ಮುಂದೆ ಹೋದ ಹಾಗೆ ಒಂದೊಂದರಲ್ಲಿ ನೂರೋ, ಸಹಸ್ರವೋ, ಶಾಖೆಗಳಾಗಿ ವಿಭಾಗವಾಗುತ್ತವೆ. ಅವು ಇಂತಿಷ್ಟೆಂದು ಗಣನೆ ಮಾಡಲಿಕ್ಕೆ ಶಕ್ಯವಲ್ಲ. ಅವು ಈ ಶರೀರಕ್ಕೆ ಗವಾಕ್ಷಿ ಕಂಡಿಗಳ ಹಾಗೆ ನಿಂತು ಶರೀರವನ್ನು ಕಟ್ಟಿಯೂ ಹಾಸಿಯೂ ಇಡುತ್ತವೆ. ಅವುಗಳ ಮುಖಗಳು ರೋಮಕೂಪಗಳಿಗೆ ಎದುರಾಗಿ ಸ್ಥಾಪಿಸಲ್ಪಟ್ಟವೆ. ಆ ಮುಖಗಳಿಂದ ಬೆವರನ್ನು ಹೊರಡಿಸುತ್ತವೆ. ಮತ್ತು ರಸ ಧಾತುವನ್ನು ಚರ್ಮಕ್ಕೆ ಒಳಗೂ ಹೊರಗೂ ಒದಗಿಸಿಕೊಡುತ್ತವೆ. ಆ ಮುಖಗಳಿಂದಲೇ ಅಭ್ಯಂಗ, ಅಭಿಷೇಕ (ನೀರನ್ನು ಮೇಲಿಂದ ಸುರಿಸಿ ಸ್ನಾನ), ಅವಗಾಹ (ಮುಳುಗಿ ಸ್ನಾನ), ಲೇಪನ, ಇವುಗಳು ಚರ್ಮದಲ್ಲಿ ಉಂಟಾಗುವ ಪಾಕದ ವೀರ್ಯವನ್ನು ಶರೀರದೊಳಗೆ ವ್ಯಾಪಿಸು ವಂತೆ ಮಾಡುವವು. ಅವುಗಳಿಂದಲೇ ಮನುಷ್ಯನು ಸ್ಪರ್ಶದ ಸುಖಾಸುಖಗಳನ್ನು ಪಡೆ ಯುತ್ತಾನೆ. ಹೀಗೆ ಸರ್ವಾಂಗವ್ಯಾಪಿನಿಗಳಾದ ಆ ನಾಲ್ಕು ಧಮನಿಗಳನ್ನು ಮತ್ತು ಅವು ಗಳ ಭೇದಗಳನ್ನು ವಿವರಿಸಿದ್ದಾಯಿತು. 74. ಧಮನಿಗಳ ಯಧಾ ಸ್ವಭಾವತಃ ಖಾನಿ ಮೃಣಾಲೇಷು ಬಿಸೇಷು ಚ | ರಚನೆ ಧಮನೀನಾಂ ತಧಾ ಖಾನಿ ರಸೋಯೈರುಪಚೀಯತೇ || (ಸು. 357.) ಸ್ವಾಭಾವಿಕವಾಗಿ ತಾವರೆದಂಟುಗಳೊಳಗೂ, ನೈದಿಲೆದಂಟುಗಳೊಳಗೂ ಹ್ಯಾಗೆ ಖಾಲಿ ಎಡೆಗಳು ಇರುತ್ತವೋ ಹಾಗೆಯೇ ಧಮನೀನಾಡಿಗಳಲ್ಲಿ ಖಾಲಿ ಎಡೆಗಳಿದ್ದು, ಅವುಗಳಿಂದ ರಸಧಾತುವು ಕೂಡಿಸಲ್ಪಡುತ್ತದೆ. 75. ಧಮನ್ಯೋ ರಸವಾಹಿನ್ಯೋ ಧಮಂತಿ ಪವನಂ ತನೌ | (ಶಾ. 16.) ರಸವನ್ನು ಹರಿಸುವ ಧಮನೀನಾಡಿಗಳು ಶರೀರದಲ್ಲಿ ಗಾಳಿಯನ್ನು ತಿದಿಯಿಂದ ತುಂಬಿ ಸಿದ ಹಾಗೆ ತುಂಬಿಸುತ್ತವೆ. 76. ತಾನಿ ತು ಪ್ರಾಣಾನ್ನೋದಕ-ರಸ-ರಕ್ತ-ಮಾಂಸ-ಮೇದೋ-ಮೂತ್ರ- ಪುರೀಷ-ಶುಕ್ರಾರ್ತವವಹಾನಿ ಯೇಷ್ವಧಿಕಾರ ಏಕೇಷಾಂ ಬಹೂನಿ | ಏತೇಷಾಂ ವಿಶೇಷಾ ಬಹವಃ | ತತ್ರ ಪ್ರಾಣವಹೇ ದ್ವೇ ತಯೋರ್ಮೂ ಲಂ ಹೃದಯಂ ರಸವಾಹಿನ್ಯಶ್ಚ ದಮನ್ಯಃ | ತತ್ರ ವಿದ್ಧಸ್ಯ ಕ್ರೋಶ ನ-ವಿನಮನ-ಮೋಹನ-ಭ್ರಮಣ-ವೇಪನಾನಿ ಮರಣಂ ವಾ ಭವತಿ |, ಅನ್ನವಹೇ ದ್ವೇ ತಯೋರ್ಮೂಲಮಾಮಾಶಯೋsನ್ನವಾಹಿನ್ಯಶ್ಚ