-40- ಆ.11 ಹೊಟ್ಟೆ ಮತ್ತು ಎದೆಯಲ್ಲಿರುವ ಮರ್ಮಗಳು ಯಾವವೆಂದರೆ:-1. ಗುದ*, 2. ವಸ್ತಿಕ್, 3. ನಾಭಿ*, 4, ಹೃದಯ*, 5. ಸ್ತನಮೂಲಗಳೆರಡು (ಮೊಲೆಯ ಕೆಳಗಡೆ ಇತ್ತಟ್ಟು ಎರಡು ಅಂಗುಲದಲ್ಲಿ), 6, ಸನರೋಹಿತಗಳೆರಡು (ಮೊಲೆಯ ತೊಟ್ಟಿಗೆ ಮೇಲೆ ಇತ್ತಟ್ಟು ಎರಡು ಅಂಗುಲದಲ್ಲಿ), 7, ಅಪಲಾಪಗಳೆರಡು (ಹೆಗಲ ಕೆಳಗೆ ಪಕ್ಕದ ಮೇಲ್ಬಾಗದ ಇತ್ತಟ್ಟು), 8. ಅಪಸ್ತಂಭಗಳೆರಡು (ಎದೆಯ ಇತ್ತಟ್ಟು ವಾತವಾಹಿಯಾದ ನಾಡಿಗಳೆರಡು) (Bronchi). ಹೀಗೆ 12 ಮರ್ಮಗಳು, ಷರಾ ವಿವರಣದ ಮೂಲವನ್ನು ಬಿಟ್ಟದೆ (*ಮೊದಲು ವರ್ಣಿಸಿಯದೆ )
100.ಬೆನ್ನಿನ ಮರ್ಮಗಳು: ಪೃಷ್ಠ ಮರ್ಮಾಣಿ ತು ಕಟೀಕತರುಣ ಕುಕುಂದರ ನಿತಂಬ ಪಾರ್ಶ್ವ ಸಂಧಿ ಬೃಹತ್‌ಂಸಫಲಕಾನ್ಯಂಸೌ ಚೇತಿ |(ಸು. 337 )
ಬೆನ್ನಿನ ಮರ್ಮಗಳು 1. ಕಟೀಕತರುಣಗಳೆರಡು (ಬೆನ್ನ ಕೋಲೆಲುಬಿನ ಇತ್ತಟ್ಟು ಸೊಂಟದ ಬೆನ್ನಿನ ಮರ್ಮಗಳು). 2. ಕುಕುಂದರಗಳೆರಡು (ಬೆನ್ನ ಕೋಲೆಲುಬಿನ ಇತ್ತಟ್ಟು ಸ್ವಲ್ಪ ಗುಂಡಿಯಾಗಿರುವ ಪ್ರತಿ ತೊಡೆಗೆ ಹಿಂಬದಿ ಭಾಗಗಳು). 3. ನಿತಂಬಗಳೆರಡು (ಪಕ್ಕಗಳ ನಡು ಸ್ಥಳಕ್ಕೆ ಕಟ್ಟಲ್ಪಟ್ಟಿರುವಂಧ ಮತ್ತು ಸೊಂಟದ ಅಡ್ಡೆಲುಬುಗಳೆರಡರ ಮೇಲ್ಗಡೆ ಆಶಯಕ್ಕೆ ಮುಚ್ಚಳಗಳಾಗಿರುವವು). 4. ಪಾರ್ಶ್ವಸಂಧಿಗಳೆರಡು (ತೊಡೆಯ ಹಿಂದಿನ ಪಾರ್ಶ್ವದ ಮಧ್ಯಕ್ಕೆ ಮೇಲೂ ಅಡ್ಡವೂ ಇರುವಂಥಾದ್ದು ಮತ್ತು ಪಾರ್ಶ್ವಗಳ ನಡುವಿಗೆ ಕಟ್ಟಿರುವಂಥಾದ್ದು). 5. ಬೃಹತಿಗಳೆರಡು (ಬೆನ್ನ ಕೋಲಿಗೆ ಇತ್ತಟ್ಟು ಸ್ತನದ ಬುಡಕ್ಕೆ ನೆಟ್ಟಗಿರುವವು). 6.ಅಂಸಫಲಕಗಳೆರಡು (ಬೆನ್ನ ಕೋಲಿಗೆ ಇತ್ತಟ್ಟು ಬೆನ್ನಿನಲ್ಲಿ ಕುತ್ತಿಗೆಯ ತ್ರಿಕಕ್ಕೆ ಕಟ್ಟಿರುವಂಧಾದ್ದು). 7. ಅಂಸಗಳೆರಡು (ತೋಳತಲೆಗೂ ಕೊರಳಿಗೂ ಮಧ್ಯ ಅಂಸಫೀರವನ್ನೂ ತೋಳತಲೆಯನ್ನೂ ಜೋಡಿಸುವಂಧಾದ್ದು). ಹೀಗೆ 14. ಷರಾ ವಿವರಗಳ ಮಲವನ್ನು ಬಿಟ್ಟಿದೆ.
101.ಕುತ್ತಿಗೆಯ ಮೇಲಿನ ಭಾಗದ ಮರ್ಮಗಳು:
ಜತ್ರೂರ್ಧ್ವಂ ಮರ್ಮಾಣಿ ಚತಸ್ರೋ ಧಮನ್ಯೋಫ್ಟೌ ಮಾತೃಕಾ ದ್ವೇ ಕೃಕಾಟಿಕೇ ದ್ವೇ ವಿಧುರೇ ದ್ವೌ ಫಣೌ ದ್ವಾಮಪಾಂಗೌ ದ್ವಾವಾ
ವರ್ತೌ ದ್ವಾವುತ್ಕ್ಷೇಪೌ ದ್ವೌ ಶಂಖಾವೇಕಾ ಸ್ಥಪನೀ ಪಂಚ ಸೀಮಂತಾಶ್ಚ ತ್ವಾರಿ ಶೃಂಗಾಟಕಾನ್ಯೇರ್ಕೋಧಿಪತಿರಿತಿ | (ಸು. 337.)
ಹೆಗಲಿಗೆ ಮೇಲಿನ ಮರ್ಮಗಳು. (1) ಧಮನಿಗಳು 4. (ಕುತ್ತಿಗೆ ನಾಳದ ಇತ್ತಟ್ಟು 1 ನೀಲ, 1 ಮನ್ಯಾ, ಹೀಗೆ ನೀಲ 2, ಮನ್ಯಾ 2); (2) ಮಾತೃಕೆಗಳು 8. (ಕೊರಳಿಗೆ ಇತ್ತಟ್ಟು ನಾಲ್ಕರಂತೆ ಇರುವ ೨ ಸಿರಾನಾಳಗಳು); (3) ಕೊರಳು ಮತ್ತು ಶಿರಸ್ಸು ಕೂಡುವ ಸಂದಿನಲ್ಲಿ ಕೃಕಾ ಟಿಕಾ ಎಂಬವು 2; (4) (ಕಿವಿಯ ಹಿಂದಕಡೆಯ ಕೆಳಗೆ ಇರುವ) ವಿಧುರಾ ಎಂಬವು 2; (5) (ಮೂಗಿನ ಮಾರ್ಗದ ಇತ್ತಟ್ಟು ಬಾಯಿಯ ಒಳಗೆ ಕಟ್ಟಿರುವ) ಫಣ ಎಂಬವು 2; (6) ಅಪಾಂಗಗಳೆರಡು (ಹುಬ್ಬುಗಳ ಬಾಲಗಳ ಕೆಳಗೆ ಮತ್ತು ಕಣ್ಣುಗಳ ಹೊರಗೆ ಇರುವವು).