ಈ ಪುಟವನ್ನು ಪರಿಶೀಲಿಸಲಾಗಿದೆ



 ಆ II.          - 42 -
        
    ಈ ಮರ್ಮಗಳಲ್ಲಿ ಐದು ರೂಪಾಂತರಗಳಿವೆ, ಹ್ಯಾಗಂದರೆ: (1) ಸದ್ಯದಲ್ಲಿ ಪ್ರಾಣ ತೆಗೆಯುವಂಧವು. (2) ಕಾಲಾಂತರದಲ್ಲಿ ಪ್ರಾಣ ತೆಗೆಯುವಂಧವು, (3) ತಗಲಿದ ಶಲ್ಯ

ವನ್ನು (ಬಾಣ, ಮೊಳೆ ಇತ್ಯಾದಿ) ತೆಗೆದುಬಿಟ್ಟ ಕೂಡಲೇ ಕೊಲ್ಲುವಂಧವು. (4) ಅಂಗ ವೈರೂಪ್ಯವನ್ನುಂಟುಮಾಡುವಂಧವು. (5) ರೋಗವನ್ನುಂಟುಮಾಡುವಂಥವು. ಹೀಗಿರು ವಂಧವುಗಳಲ್ಲಿ ಸದ್ಯಃ ಕೊಲ್ಲುವಂಧವು 19, ಕಾಲಾಂತರದಿಂದ ಕೊಲ್ಲುವವು 33, ಶಲ್ಯ ತೆಗೆ ದೊಡನೆ ಕೊಲ್ಲು ವಂಧವು 3, ಅಂಗವೈರೂಪ್ಯ ಮಾಡುವಂಧವು 44, ರೋಗ ಉಂಟುಮಾಡು ವವು 8 ಆಗಿರುತ್ತವೆ.


104. ಸದ್ಯ‌ಃ ಪ್ರಾಣ  ಶೃಂಗಾಟಕಾನ್ಯಧಿಪತಿಃ ಶಂಖೌ ಕಂರಶಿರೋ ಗುದಂ |

ಹರ ಮರ್ಮ ಹೃದಯಂ ವಸ್ತಿನಾಭೀ ಚ ಘ್ನಂತಿ ಸದ್ಯೋ ಹತಾನಿ ತು ||ಗಳು.

                                (ಸು. 338.) 


(4) ಶೃಂಗಾಟಕ, (1) ಅಧಿಪತಿ, (2) ಶಂಖ, (8) ಮಾತೃಕೆ, (1) ಗುದ, (1) ಹೃದಯ, (1) ವಸ್ತಿ, (1) ನಾಭಿ, ಈ (19) ಮರ್ಮಗಳು ಗಾಯಪಟ್ಟರೆ ಸದ್ಯದಲ್ಲಿ ಮರಣವು ಸಂಭವಿಸುತ್ತದೆ.

ಶಿರಸಿ ಅಭಿಹತೇ ಮನ್ಯಾಸ್ತಂಭಾರ್ದಿತ- ಚಕ್ಷುರ್ವಿಭ್ರಮ- ಮೋಹವೇಷ್ಟನ ಚೇಷ್ಟಾನಾಶ - ಕಾಸ- ಶ್ವಾಸ - ಹನುಗ್ರಹ - ಗೆ ಮೂಕಗದ್ಗದತ್ವಾಕ್ಷಿನಿಮಾಲನ ಗಂಡಸ್ಯಂದನ-ಜೃಂಭಣ-ಲಾಲಾಸ್ರಾವ-ಸ್ವರಹಾನಿ-ವದನಜಿಹ್ಮತ್ವಾದೀನಿ ||

                                 (ಚ 904.) 
  ತಲೆಗೆ ಪೆಟ್ಟು ತಗಲಿದರೆ, ಮನ್ಯಾಸ್ತಂಭ (ಕೊರಳಿನ ಹಿಂಭಾಗ ಹಿಡಕೊಳ್ಳುವದು), ಅರ್ದಿತ (ಮುಖಾರ್ಧದ ವಾತ), ಕಣ್ಣು ತಿರುಗಿಸುವಿಕೆ, ಕಣ್ಣು ಕತ್ತಲೆ, ಅಂಗಚಲನನಾಶ, ಕೆಮ್ಮು, ಉಬ್ಬಸ, ದವಡೆಹಿಡಕೊಳ್ಳುವಿಕೆ, ಮೂಕತನ, ಗದ್ದದ ಮಾತು, ಕಣ್ಣು ಮುಚ್ಚಿ ಹೋಗುವದು, ಗಂಡಸ್ಥಳದಲ್ಲಿ ನೀರಿಳಿಯುವದು, ಬಾಯಿ ಕಳೆಯುವದು (ಆಕಳಿಕೆ), ಜೊಲ್ಲು ಸುರಿಯುವದು, ಸ್ವರ ನಿಂತುಹೋಗುವದು, ಮುಖ ಮತ್ತು ನಾಲಿಗೆ ಓರೆಯಾಗುವದು, ಇತ್ಯಾದಿ ಲಕ್ಷಣಗಳು ಉಂಟಾಗುವವು. 

105.ವಕ್ಷೋಮರ್ಮಾಣಿ ಸೀಮಂತ- ತಲ- ಕ್ಷಿಪ್ರೇಂದ್ರವಸ್ತ್ರಯಃ | ಕಟೀಕತರುಣೇ ಸಂಧೀ ಪಾರ್ಶ್ವಜೌ ಬೃಹತೀ ಚ ಯಾ || ಕಾಲಾಂತರ ಪ್ರಾಣಹರ ನಿತಂಬಾವಿತಿ ಚೈತಾನಿ ಕಾಲಾಂತರಹರಾಣಿ ತು | (ಸು. 338.)

ಎದೆಯ ಮರ್ಮಗಳು (8), ಸೀಮಂತ (5), ತಲ (4), ಕ್ಷಿಪ್ರ (4), ಇಂದ್ರವಸ್ತಿ (4), ಕಟೀಕತರುಣ (2), ಪಾರ್ಶ್ವಸಂಧಿ (2), ಬೃಹತೀ (2), ನಿತಂಬ (2), ಎಂಬ ಮರ್ಮಗಳು (33) ಕಾಲಾಂತರದಿಂದ ಮರಣವನ್ನು ಪ್ರಾಪಿಸುವವು.

ಪರಾ ಎದೆಯ ಮರ್ಮಗಳು 99ನೇ ಸಂಖ್ಯೆಯ 5, 6, 7 ಮತ್ತು 8 106. ವಿಶಲ್ಯಘ್ನ ಉತ್ಕ್ಷೇಷೌ ಸ್ಥಪನೀ ಚೈವ ವಿಶಲ್ಯಘ್ನಾನಿ ನಿರ್ದಿಶೇತ್ | (ಸು. 338.)