ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- 49. ಆ 11 ಆಹಾರವನ್ನು ಪರಿಣಾಮಹೊಂದಿಸುವ (ಪಾಕ ಮಾಡಿ ಸಾರ್ಧಕ ಮಾಡುವ) ಭಾವಗಳು ಇವು ಆಗಿರುತ್ತವೆ. ಯಾವವೆಂದರೆ ಉಷ್ಕತೆ (ಬಿಸಿ), ವಾಯು, ದ್ರವತ್ವ, ಸ್ನೇಹ, ಕಾಲ, ಸಂಯೋಗ (ಕೂಡುವಿಕೆ) ಎಂಬವು. ಉಷ್ಮತೆಯು ಬೇಯಿಸುತ್ತದೆ, ವಾಯುವು ಪ್ರತ್ಯೇಕಿಸುತ್ತದೆ, ದ್ರವತ್ವವು ಸಡಿಲಿಸುತ್ತದೆ, ಸ್ನೇಹವು ಮೃದು ಮಾಡುತ್ತದೆ ಕಾಲವು ಪೂರ್ಣ ಗೊಳಿಸುತ್ತದೆ, ಭಾವಗಳ ಸಂಯೋಗದಿಂದ ಪರಿಣಾಮಧಾತುವು (ದೇಹಧಾತುಗಳಿಗೆ) ಸಾಮ್ಯ ವಾಗಿ ಫಲಿಸುತ್ತದೆ. ಪರಿಣಾಮತಸ್ತ್ವಾಹಾರಸ್ಯ ಗುಣಾಃ ಶರೀರಗುಣಭಾವಮಾಪದ್ಯಂತೇ | (ಚ. 347.) ಆ ಪರಿಣಾಮದ ದೆಸೆಯಿಂದ ಆಹಾರದ ಗುಣಗಳು ಶರೀರದ ಗುಣಭಾವವನ್ನು ಹೊಂದು ತ್ತವೆ

ಷರಾ ಚರಕಸಂಹಿತೆಯ 'ಗ್ರಹಣೀ ಚಿಕಿತ್ಸೆ ತಮ' ಅಧ್ಯಾಯದಲ್ಲಿ ಆಹಾರಪಾಕ ಕ್ರಮವು ಸವಿಸ್ತಾರ ಹೇಳಲ್ಪಟ್ಟಿದೆ (ಚ 655-59 ) ಶರೀರಧಾತವಸ್ತ್ವೇವಂ ದ್ವಿವಿಧಾಃ ಸಂಗ್ರಹೇಣ ಮಲಭೂತಾಃ ಪ್ರಸಾದ ಭೂತಾಶ್ವ | ತತ್ರ ಮಲಭೂತಾಸ್ತೇ ಶರೀರಸ್ಯ ಯೇ ಬಾಧಕರಾಃ ಸುೄಃ| (ಚ. 347.) ಹೀಗೆ ಶರೀರಧಾತುಗಳು ಒಟ್ಟಾರೆ ಎರಡು ವಿಧ ಮಲರೂಪವಾದವು ಮತ್ತು ಪ್ರಸಾದರೂಪವಾದವು ಅವುಗಳೊಳಗೆ ದೇಹಕ್ಕೆ ಬಾಧಕ ಉಂಟುಮಾಡತಕ್ಕವು ಮಲರೂಪ ವಾದವು. ಪ್ರಕುಪಿತಾಶ್ಚ ವಾತ-ಪಿತ್ತ-ಶ್ಲೇಷ್ಮಾಣೋ ಯೇ ಚಾನೄೇಪಿ ಕೇಚಿತ್‌ ಶರೀರೇ ತಿಷ್ಠಂತಿ ಭಾವಾಃ ಶರೀರಸೄೋಪಘಾತಾಯೋಪಪದೄ0ತೇ ಸರ್ವಾ೦ ಸ್ತಾನ್ ಮಲಾನ್ ಸಂಪ್ರಚಕ್ಷ್ಮಹೇ / ಇತರಾಂಸ್ತು ಪ್ರಸಾದೇ ಗುರ್ವಾ ದೀಂಶ್ಚ ದ್ರವ್ಯಾನ್ತಾ-ನ್ ಗುಣಭೇದೇನ ರಸಾದೀಂಶ್ಚ ಶುಕ್ರಾನ್ತಾನ್ ದ್ರವ್ಯಭೇದೇನ | (ಚ. 347.) ಕೋಪ ಹೊಂದಿದ ವಾತ ಪಿತ್ತ ಶ್ಲೇಷ್ಮಗಳು ಮತ್ತು ಶರೀರದಲ್ಲಿ ನಿಲ್ಲುವ ಬೇರೆ ಕೆಲವು ಭಾವಗಳು ಸಹ ಯಾವವು ಶರೀರಕ್ಕೆ ಕೆಡಕು ಮಾಡತಕ್ಕವುಗಳಾಗುತ್ತವೋ ಅವುಗಳ ನ್ನೆಲ್ಲಾ ಮಲಗಳೆಂತ ಹೇಳುತ್ತೇವೆ. ಇತರ ಪ್ರಸಾದರೂಪವಾದ ಭಾವಗಳನ್ನು ಗುಣಭೇದ ದಿಂದ ಗುರು ಎಂಬಲ್ಲಿಂದ ದ್ರವ ಎಂಬ ವರೆಗಿನ ವಿಶೇಷಣಗಳಿಂದಲೂ, ದ್ರವ್ಯಭೇದದಿಂದ, ರಸ ಹಿಡಿದು ಶುಕ್ರ ಎಂಬ ವರೆಗಿನ ವಿಶೇಷಣಗಳಿಂದಲೂ, ಸೂಚಿಸುತ್ತೇವೆ. ಪ್ರಕೃತಿಭೂತಾನಾಂ ತು ಖಲು ವಾತಾದೀನಾಂ ಫಲಮಾರೋಗ್ಯಂ 1 (ಚ. 347.) ಸ್ವಸ್ಥಸ್ಥಿತಿಯಲ್ಲಿರುವ ವಾತಾದಿಗಳ ಫಲವು ಆರೋಗ್ಯವಾಗಿರುತ್ತದೆ. ಅಂದರೆ ವಾತ ಪಿತ್ತಶ್ಲೇಷ್ಮಗಳು ತಮ್ಮ ನಿಜಸ್ಥಿತಿಯಲ್ಲಿದ್ದರೆ ಆರೋಗ್ಯವುಂಟಾಗುತ್ತದೆ.