, II ಬಗ್ಗೆ ಓಟ ಪ್ರಕಾರ
- 50 -
120. ಪಿತ್ತಂ ಪಂಚಾತ್ಮಕಂ ತತ್ರ ಪಕ್ವಾಮಾಶಯಮಧ್ಯಗಂ | ಪಂಚಭೂತಾತ್ಮಕತ್ವೇsಪಿ ಯತ್ತೈಜಸಗುಣೋದಯಾತ್ || ತ್ಯಕ್ತದ್ರವತ್ವಂ ಪಾಕಾದಿಕರ್ಮಣಾನಲಶಬ್ದಿತಂ | ಪಚತ್ಯನ್ನಂ ವಿಭಜತೇ ಸಾರಕಿಟ್ಟೌ ಪೃಧಕ್ ತಧಾ || ತತ್ರಸ್ಥಮೇವ ಪಿತ್ತಾನಾಂ ಶೇಷಾಣಾಮಪ್ಯನುಗ್ರಹಂ | ಕರೋತಿ ಬಲದಾನೇನ ಪಾಚಕಂ ನಾಮ ತತ್ ಸ್ಮೃತಂ || ಆಮಾಶಯಾಶ್ರಯಂ ಪಿತ್ತಂ ರಂಜಕಂ ರಸರಂಜನಾತ್ | ಬುದ್ಧಿಮೇಧಾಭಿಮಾನಾದ್ಯೈರಭಿಪ್ರೇತಾರ್ಧಸಾಧನಾತ್ || ಸಾಧಕಂ ಹೃದ್ಗತಂ ಪಿತ್ತಂ ರೂಪಾಲೋಚನತಃ ಸ್ಮೃತಂ | ದೃಕ್‌ಸ್ಥಮಾಲೋಚಕಂ ತ್ವಕ್ಸ್ಧಂ ಭ್ರಾಜಕಂ ಭ್ರಾಜನಾತ್ತ್ವಚಃ ||
(ವಾ. 58-9.)
ಪಂಚ ವಿಧವಾದ ಪಿತ್ತವು ಪಕ್ವಾಶಯಕ್ಕೂ ಆಮಾಶಯಕ್ಕೂ ಮಧ್ಯ ಇರುತ್ತದೆ. ಅದು ಪಂಚಭೂತಗಳಿಂದ ಹುಟ್ಟಿದ್ದಾದರೂ, ತೇಜಸ ಗುಣವೇ ಹೆಚ್ಚಾಗಿರುವದರಿಂದ ದ್ರವತ್ವವನ್ನು ಬಿಟ್ಟು, ಪಾಕ ಮೊದಲಾದ ಕರ್ಮಗಳನ್ನು ಮಾಡುವದರಿಂದ ಅಗ್ನಿ ಎಂಬ ಹೆಸರು ಪಡೆದು, ಅನ್ನವನ್ನು ಪಚನಮಾಡಿ ಸಾರವನ್ನೂ, ಮಡ್ಡನ್ನೂ ಪ್ರತ್ಯೇಕಿಸುತ್ತದೆ. ಮತ್ತು ಅಲ್ಲಿಯೇ ನಿಂತು, ಇತರ ಶರೀರದೊಳಗಣ ಪಿತ್ತಗಳಿಗೆ ಬಲಕೊಟ್ಟು, ಅನುಗ್ರಹ ಮಾಡುತ್ತದೆ. ಅಂಥಾ ಪಿತ್ತಕ್ಕೆ ಪಾಚಕಪಿತ್ತ ಎಂದು ಹೆಸರು. ಆಮಾಶಯದಲ್ಲಿರುವ ಪಿತ್ತವು ಅನ್ನರಸಕ್ಕೆ ವರ್ಣ ಕೊಡುವದರಿಂದ ರಂಜಕಪಿತ್ತ ಎಂತಲೂ, ಹೃದಯದಲ್ಲಿರುವ ಪಿತ್ತವು, ಬುದ್ಧಿ, ಗ್ರಹಿಕೆ, ಅಭಿಮಾನ ಮೊದಲಾದ ಗುಣಗಳಿಂದ ಇಷ್ಟಾರ್ಧ ಸಾಧಿಸುವದರಿಂದ ಸಾಧಕಪಿತ್ತ ಎಂತಲೂ, ಕಣ್ಣುಗಳಲ್ಲಿರುವ ಪಿತ್ತವು ರೂಪವನ್ನೂ, ದೃಷ್ಟಿಯನ್ನೂ ಕೊಡುವುದರಿಂದ ಆಲೋಚಕಪಿತ್ತ ಎಂತಲೂ, ಚರ್ಮದಲ್ಲಿರುವ ಪಿತ್ತವು ಚರ್ಮದ ಹೊಳಪಿಗೆ ಹೇತುವಾದ್ದರಿಂದ ಭ್ರಾಜಕಪಿತ್ತ ಎಂತಲೂ ಹೆಸರುಗೊಂಡಿವೆ.
ಷರಾ ಯಕೃತ್‌ಪ್ಪೀಹಗಳಲ್ಲಿಯ ಪಿತ್ತವು ರಂಜಕ ಎಂತ ಸುಶ್ರುತ (ಮುಂದೆ VII ಆ. ನೋಡು )
ಅನ್ನಸ್ಯ ಪಕ್ತಾ ಪಿತ್ತಂ ತು ಪಾಚಕಾಖ್ಯಂ ಪುರೇರಿತಂ | ದೋಷಧಾತುಮಲಾದೀನಾಮೂಷ್ಮೇತ್ಯಾತ್ರೇಯಶಾಸನಂ || ತದಧಿಷ್ಠಾನಮನ್ನಸ್ಯ ಗ್ರಹಣಾದ್ ಗ್ರಹಣೀ ಮತಾ | ಸೈವ ಧನ್ವಂತರಿಮತೇ ಕಲಾ ಪಿತ್ತಧರಾಹ್ವಯಾ || ಆಯುರಾರೋಗ್ಯವೀರ್ಯೌಜೋಭೂತಧಾತ್ವಗ್ನಿಪುಷ್ಟಯೇ | ಸ್ಥಿತಾ ಪಕ್ವಾಶಯದ್ವಾರಿ ಭುಕ್ತಮಾರ್ಗಾರ್ಗಲೇವ ಸಾ || ಭುಕ್ತಮಾಮಾಶಯೇ ರುದ್ಧ್ವಾ ಸಾ ವಿಪಾಚ್ಯ ನಯತ್ಯಧಃ | ಬಲವತ್ಯಬಲಾ ತ್ವನ್ನಮಾಮಮೇವ ವಿಮುಂಚತಿ || ಗ್ರಹಣ್ಯಾಂ ಬಲಮಗ್ನಿರ್ಹಿ ಸ ಚಾಪಿ ಗ್ರಹಣೀಬಲಃ || ದೂಷಿತ್ಯೇಗ್ನಾವತೋ ದುಷ್ಟಾ ಗ್ರಹಣೀ ರೋಗಕಾರಿಣೀ |