ಅ. 1) - 56 56 - ಸಂಕೋಚನಶಕ್ತಿಯಿಂದ ಉಂಟಾಗುವ ಈ ಚಲನೆಗಳಿಂದ ಮೇಲಿನ ಅಂತಸ್ತಿನ ಜಾಗವು ವೃದ್ಧಿಯಾಗಿ, ಶ್ವಾಸಕೋಶಗಳಲ್ಲಿರುವ ಅಸಂಖ್ಯೇಯವಾದ ಚಿಕ್ಕ ವಾಯುಚೀಲಗಳು ತುಂಬಿ ಉಬ್ಬುವದಕ್ಕೆ ಎಡೆಯಾಗುತ್ತದೆ. ಎದೆಯ ಕೋಲೆಲುಬು, ವಪಾವಹನ, ಮತ್ತು ಪಕ್ಕೆಲುಬುಗಳು ಯಧಾಸ್ಥಾನಗಳಿಗೆ ತಿರುಗಿದೊಡನೆ, ಪುನಃ ಸ್ಥಳಸಂಕೋಚವಾಗು ವದರಿಂದ, ಶ್ವಾಸಕೋಶಗಳ ವಾಯುಚೀಲಗಳಲ್ಲಿ ಹೆಚ್ಚಿದ್ದ ಗಾಳಿಯು ಹೊರಗೆ ಹೋಗು ವದೇ ನಿಃಶ್ವಾಸ. ಹಿಂದೆ ಬೆನ್ನಿನ ಕೋಲೆಲುಬುಗಳು, ಎದುರು ಎದೆಯ ಕೋಲೆಲುಬು, ಮೇಲೆ ಚಟ್ಟಿಯಾಗಿರುವ 1ನೇ ಪಕ್ಕೆಲುಬುಗಳು ಮತ್ತು ಹೆಗಲ ಎಲುಬುಗಳು, ಪಕ್ಕಗಳಲ್ಲಿ ಪಕ್ಕೆ ಲುಬುಗಳು ಮತ್ತು ಈ ಎಲ್ಲಾ ಎಲುಬುಗಳಿಗೆ ಸಂಯುಕ್ತವಾದ ಮಾಂಸಖಂಡಗಳು, ಕೆಳಗೆ ವಪಾವಹನ ಮತ್ತು ಇವುಗಳಿಗೆಲ್ಲಾ ಹೊದಿಕೆಗಳು, ಇಷ್ಟು ಬಂದೋಬಸ್ತುಳ್ಳ ಪಂಜರದಲ್ಲಿ ಚೇತನಾಸ್ಥಾನವಾದ ಹೃದಯ ಮತ್ತು ಅದಕ್ಕೆ ಸಂಬಂಧಪಟ್ಟ ಶ್ವಾಸಕೋಶಗಳು ಸ್ಥಾಪಿಸ ಲ್ಪಟ್ಟವೆ ಯಾಕಂದರೆ ಮುಖದ್ವಾರದಿಂದ ಕಫಾಶಯಕ್ಕಾಗಿ ಶ್ವಾಸಕೋಶಗಳಿಗೆ ಹೊರಗಿನ ಗಾಳಿಯು ಹೋಗಬೇಕಲ್ಲದೆ, ಆ ಪಂಜರದಲ್ಲಿ ಬೇರೆ ಎಲ್ಲಿಯಾದರೂ ರಂಧ್ರ ಬಿದ್ದು ಹೊರ ಗಿನ ಗಾಳಿಯು ಶ್ವಾಸಕೋಶಗಳಿಗೂ ಪಂಜರದ ಒಳಗಿನ ಹೊದಿಕೆಗೂ ಮಧ್ಯ ಇರುವ ಎಡೆಯಲ್ಲಿ ಸೇರಿದ ಪಕ್ಷದಲ್ಲಿ, ಕೂಡಲೇ ಶ್ವಾಸಕೋಶಗಳ ವ್ಯಾಪಾರವು ನಿಂತು ಮರಣ ಉಂಟಾಗುವದು. ಶ್ವಾಸಕೋಶಗಳ ಹೊರಭಾಗದಲ್ಲಿ ಗಾಳಿ ಇಲ್ಲದೆ ಇರುವದರಿಂದ, ಹೊರಗಿನಿಂದ ಮೂಗು, ಬಾಯಿಗಾಗಿ ಶ್ವಾಸಕೋಶಗಳೊಳಗೆ ಸೇರುವ ಗಾಳಿಯು ಚಿಕ್ಕ ಚಿಕ್ಕ ವಾಯುಚೀಲಗಳನ್ನು ತುಂಬಿ ಉಬ್ಬಿಸುತ್ತದೆ ಈ ಕಾರಣದಿಂದ ಶ್ವಾಸಕೋಶಗಳು ಎದೆಯ ಮೂಲದಲ್ಲಿ ಮಾತ್ರ ವಿನಾ ಉಳಿದ ಸರ್ವತ್ರ ಪಂಜರಕ್ಕೆ ಅವಲಂಬಿಸದೆ ಇರುವದಾ ದರೂ, ಪಂಜರದ ಒಳಬದಿಗೆ ಒತ್ತಿಕೊಂಡೇ ಇದ್ದು, ಪಂಜರವು ದೊಡ್ಡದು ಸಣ್ಣದು ಆದ ಹಾಗೆ, ಶ್ವಾಸಕೋಶಗಳು ಸಣ್ಣವು ದೊಡ್ಡವು ಆಗುವವು. ಶ್ವಾಸಕೋಶಗಳು ಎರಡು ಗಾಳಿ ಚೀಲಗಳುಳ್ಳ ತಿದಿಯಂತೆ ಇರುವವು ಈ ತಿದಿಕೊಳಿವೆಯ ಮುಖವು ಬಾಯಿಯೊಳಗಿರುವ ಅನ್ನನಾಳದ್ವಾರದ ಎದುರು ಇರುವದು. ಕಿರುನಾಲಿಗೆಯನ್ನು ವಂಧಾದ್ದು ಕೊಳೆವೆಬಾಯಿಯ ಮುಚ್ಚಳ, ಸೇವಿಸಿದ ಅನ್ನಪಾನಾದಿಗಳು ಶ್ವಾಸಕೋಶಗಳ ಕೊಳಿವೆದ್ವಾರದೊಳಗೆ ಬೀಳದೆ ದಾಟಿಹೋಗುವದಕ್ಕೋಸ್ಕರ, ಕಿರಿನಾಲಿಗೆಯು ಆ ದ್ವಾರವನ್ನು ಮುಚ್ಚಿಡುವದು, ಆ ಕೊಳಿ ವೆಯು ಗಂಟಲನ್ನು ದಾಟಿ, ಎದೆಯೊಳಗೆ ಸೇರಿದೊಡನೆ, ಎರಡು ಶಾಖೆಗಳಾಗಿ ಒಡೆದು, ಒಂದು ಬಲದ ಶ್ವಾಸಕೋಶದೊಳಗೂ, ಒಂದು ಎಡದ ಶ್ವಾಸಕೋಶದೊಳಗೂ ಹೋಗಿ, ಉತ್ತರೋತ್ತರ ಕವಲುಗಳೊಳಗೆ ಕವಲುಗಳಾಗಿ, ಕೊನೆಗೆ ಅತಿ ಸೂಕ್ಷ್ಮವಾಗಿ, ತೊಟ್ಟುಗಳ ಹಾಗೆ ಚಿಕ್ಕ ಗಾಳಿಚೀಲಗಳಲ್ಲಿ ಸೇರುತ್ತವೆ. ನೊರೆಗುಳ್ಳೆಗಳ ಹಾಗೆ ತೋರುವ ಈ ಗಾಳಿ ಚೀಲಗಳ ಹೊದಿಕೆಯನ್ನು ಸುತ್ತಿಕೊಂಡು ಸೂಕ್ಷ್ಮವಾದ ರಕ್ತನಾಳಗಳು ಇರುತ್ತವೆ ಈ ರಕ್ತನಾಳಗಳ ಹೊದಿಕೆಯೂ, ಗಾಳಿಚೀಲದ ಹೊದಿಕೆಯೂ, ಅತಿ ತೆಳ್ಳಗಾಗಿದ್ದು, ನಾಳ ಗಳಲ್ಲಿರುವ ರಕ್ತಕ್ಕೂ, ಚೀಲಗಳಲ್ಲಿರುವ ಪ್ರಾಣವಾಯುವಿಗೂ ಸಂಪರ್ಕವಾಗುತ್ತದೆ. ಗಾಳಿಯಿಂದ ರಕ್ತವು ಬೇಕಾದ ಗುಣವನ್ನು ಆಕರ್ಷಿಸಿಕೊಂಡು, ತನ್ನಲ್ಲಿರುವ ಮಲವನ್ನು ಆ ಗಾಳಿಗೆ ಸೇರಿಸಿಬಿಡುತ್ತದೆ. ಹೀಗೆ ರಕ್ತವು ಶುದ್ಧವಾಗುತ್ತದೆ. ಕಫಾಶಯವಾದ ತಿದಿ ಕೊಳಿವೆಯು ಪ್ರಧಮತಃ ಕವಲೊಡೆಯುವ ಸ್ಥಳದಲ್ಲಿ ಶ್ವಾಸಕೋಶಗಳೆರಡು ಒಂದಕ್ಕೊಂದು
ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೧೪೬
ಈ ಪುಟವನ್ನು ಪರಿಶೀಲಿಸುವ ಅವಶ್ಯಕತೆಯಿಲ್ಲ