ಈ ಪುಟವನ್ನು ಪರಿಶೀಲಿಸಲಾಗಿದೆ

- 57 - ಆ ೧೧

ಕೂಡುತ್ತವೆ. ಅಲ್ಲಿಯೇ ಶ್ವಾಸಕೋಶಗಳೆರಡು ಹಿಂಬದಿಯ ಬೆನ್ನೆಲುಬಿಗೆ ಕಟ್ಟಲ್ಪಟ್ಟವೆ. ಅದನ್ನು ಶ್ವಾಸಕೋಶಗಳ ಮೂಲವೆನ್ನುವರು. ಎದೆಗೂಡಿನ ಒಳಬದಿಯ ಹೊದಿಕೆಯು ಶ್ವಾಸ ಕೋಶಗಳೆರಡರ ಹೊದಿಕೆಯ ಹೊರಗೆ ಎರಡನೇ ಚೀಲವೆಂಬಂತೆ ಎರಡು ಭಾಗಗಳಾಗಿ, ಎದೆಯ ಕೋಲೆಲುಬಿನ ಬಲಬದಿಗೆ ಒಂದು ಭಾಗ, ಮತ್ತು ಎಡಬದಿಗೆ ಒಂದು ಭಾಗದಂತೆ ನಿಂತಿವೆ. ಹೃದಯವು ಇದಕ್ಕೆ ಹೊರಗಾಗಿ ಪ್ರತ್ಯೇಕ ಚೀಲವಾಗಿರುತ್ತದೆ ಶ್ವಾಸಕೋಶಗಳ ಮೂಲವು, ಎದೆಯ ಕೋಲೆಲುಬಿಗೆ ಪಕ್ಕದ 1-2ನೇ ಎಲುಬುಗಳು ಕೂಡುವ ಮಧ್ಯ ಸ್ಥಳದ ಹಿಂದೆ, ಮತ್ತು ಬೆನ್ನೆಲುಬಿನ 3 ನೇ 4ನೇ ಅಡ್ಡ ಮೊಳೆಗಳ ಎದುರು ಆಗಿರುತ್ತದೆ.

126. ಶ್ವಾಸಕೋಶಗಳ ಮೂಲದಲ್ಲಿ ಎದುರುಭಾಗ ಹೃದಯವು ನಿಂತಿದೆ. (ಇದರ ಆಕಾರವು ಅರಳಲಿಕ್ಕೆ ಸಿದ್ದವಾದ ತಾವರಮೊಗ್ಗೆಯ ಹಾಗಿನದೆನ್ನಬಹುದು.) ಅದರ - ಬುಡವು ಎದೆಯ ಕೋಲೆಲುಬಿನ ಅಡಿಯಲ್ಲಿ 3ನೇ ಪಕ್ಕಲುಬು ಸೇರುವಲ್ಲಿ, ಎಡ ಬದಿಯು ಬಲಬದಿಗಿಂತ ಸ್ವಲ್ಪ ಮೇಲೆ ನಿಲ್ಲುವ ಹಾಗೆ ಓರೆಯಾಗಿ ಇದೆ ಕಮಲದ ಕೊನೆಯು ಪಂಜರದ ಎಡಭಾಗದಲ್ಲಿ, 5ನೇ 6ನೇ ಪಕ್ಕೆಲುಬುಗಳ ಮಧ್ಯ ಗೂಡಿನ ಎದುರಿನ ಆವರಣಕ್ಕ ತಗಲಕೊಂಡು ಉಂಟು 3ನೇ ಪಕ್ಕಲುಬಿನ ಮೇಲಿನ ಅಂಚಿನಲ್ಲಿ ಎದೆಯ ಕೋಲೆಲುಬಿಗೆ ಅರ್ಧ ಇಂಚು ಬಲ ಹಿಡಿದು, ಒಂದು ಇಂಚು ಎಡದ ವರೆಗೆ ಕಮಲದ ಬುಡದ ಅಂಚು ಇರುವದು ಕೊನೆಯು ಎಡದ ಮೊಲೆತೊಟ್ಟಿನಿಂದ ಸುಮಾರು 2 ಇಂಚು ಕೆಳಗಿನ ಬಿಂದುವಿನಿಂದ ನೆಟ್ಟಗೆ 1 ಇಂಚು ಬಲಕ್ಕೆ (ಅಂದರೆ ಎದೆಯ ಕೋಲೆಲುಬಿನ ಕಡೆ) ಇರುವದು. ಈ ಕೊನೆಯ ಅಡಿಬದಿಯು ವಪಾವಹನದ ಮಧ್ಯದ ಸ್ನಾಯುವಿನ ಮೇಲೆ ಬಿಗಿಯಲ್ಪಟ್ಟದೆ. ಬುಡವು ದೊಡ್ಡದಾದ ಧಮನಿ ಮುಂತಾದ ಹೃದಯಕ್ಕೆ ಸಂಬಂಧ ಪಟ್ಟ ನಾಡಿಗಳಿಗೆ ಸುತ್ತಿ ಅಂಟಿಕೊಂಡು ಇದೆ. ಹೃದಯದಲ್ಲಿ 4 ಅಂಕಣಗಳು. ಬಲಬದಿ 2, ಎಡಬದಿ 2 ಎಡಬದಿಗೂ ಒಲಬದಿಗೂ ಮಧ್ಯ ಮಾಂಸದ ಗೋಡೆ ಇದೆ. ಅದರಲ್ಲಿ ದ್ವಾರ ಇಲ್ಲ. ಈ ಗೋಡೆಯು ಓರೆಯಾಗಿರುತ್ತದೆ ಆದ್ದರಿಂದ ಎದುರಿನಲ್ಲಿ ಬಲಬದಿಯೇ ಹೆಚ್ಚಾಗಿ ಕಾಣುತ್ತದೆ. ಎಡಬದಿಯ ಹೆಚ್ಚಿನ ಅಂಶವು ಅದರ ಅಡಿಯಲ್ಲಿ ಅಡಗಿಯದೆ. ಎರಡು ಬದಿಗಳಲ್ಲಿಯೂ ಮೇಲಿನ ಅಂಕಣದಿಂದ ಕೆಳಗಿನ ಅಂಕಣಕ್ಕೆ ಬರುವ ಹಾಗೆ ದ್ವಾರವಿದೆ ಈ ದ್ವಾರಗಳ ಮುಚ್ಚಳಗಳು ಕೆಳಗಿನ ಅಂಕಣಗಳಲ್ಲಿದ್ದು, ಮೇಲಕ್ಕೆ ತೆರೆಯಲಾರವು, ಆದ್ದರಿಂದ ಮೇಲಿನ ಅಂಕಣದಿಂದ ರಕ್ತವು ಕೆಳಗಿನ ಅಂಕಣಕ್ಕೆ ಬಂದ ಮೇಲೆ ದ್ವಾರವು ಮುಚ್ಚಿಕೊಳ್ಳುವದರಿಂದ ರಕ್ತವು ಮೇಲಿನ ಅಂಕಣಕ್ಕೆ ತಿರುಗಿ ಹೋಗಲಿಕ್ಕೆ ಸಾಧ್ಯವಿಲ್ಲ. ಬಲದ ಅಂಕಣಗಳ ಮಧ್ಯ ದ್ವಾರದ ಮುಚ್ಚಳದಲ್ಲಿ 3 ತುಂಡುಗಳಿವೆ. ಎಡ ಅಂಕಣಗಳ ಮಧ್ಯದ ಮುಚ್ಚಳಕ್ಕೆ ಎರಡೇ ತುಂಡುಗಳು. ಇಡೀ ಹೃದಯದ ಪರಿಮಾಣವು ಆಯಾ ಮನುಷ್ಯನ ಕೈಮುಷ್ಟಿಯಷ್ಟು ಎಂಬುದು ಸಾಧಾರಣವಾದ ಹೇಳಿಕೆ. ಹೃದಯಕ್ಕೆ 2 ಹೊದಿಕೆಗಳು ಇವೆ. 2ನೇ ಹೊದಿಕೆಯು 1ನೇ ಹೊದಿಕೆಗೆ ಹೃದಯದ ಮೂಲದಲ್ಲಿ ಮಾತ್ರ ಕೂಡಿರುವದರಿಂದ, ಹೃದಯವು ಒಂದು ಪ್ರತ್ಯೇಕ ಚೀಲದೊಳಗೆ ಇರುವ ಹಾಗೆ ಕಾಣುತ್ತದೆ. ತೆಳ್ಳಗಾಗಿರುವ ಚೀಲವು ಮೂಲದಲ್ಲಿ ಮಾತ್ರ ಮೇದಸ್ಸಿನಿಂದ ತುಂಬಿ ದಪ್ಪವಾಗಿರುತ್ತದೆ. ಕೆಳಗಿನ ಅಂಕಣ ಗಳಿಗೂ ಮೇಲಿನ ಅಂಕಣಗಳಿಗೂ ನಡುವೆ ಅಡ್ಡವಾಗಿ ಹೆಚ್ಚು ಮೇದಸ್ಸಿರುವ ಒಂದು ಕಂತ