ಆ } - 58 - ವಾದ ಗೀರು ಉಂಟು. ಚೀಲವನ್ನು ಸೀಳಿದರೆ, ಅದರ ಮೈಯಿಂದ ಅರಸಿನವಾದ ರಸ ಬರುವದು. 4 ಅಂಕಣಗಳಲ್ಲಿ ಮೇಲಿನ ಅಂಕಣಗಳಿಗಿಂತ ಕೆಳಗಣ ಅಂಕಣಗಳು ಸ್ಥೂಲ ವಾದ ಹೊದಿಕೆಯುಳ್ಳವು ಕೆಳಗಣ ಅಂಕಣಗಳೆರಡರಲ್ಲಿ ಎಡದ್ದು ಬಲದ್ದಕ್ಕಿಂತ ಸುಮಾರು 3 ಪಾಲಷ್ಟು ದಪ್ಪವಾದ ಹೊದಿಕೆಯುಳ್ಳದ್ದು. (ಕಮಲದ ಹೋಲಿಕೆಗೆ ಬಲ ಪಡುವ ಹಾಗೆ) ಹೃದಯದ ಮೂಲದ ಎಡಬಲಗಳಲ್ಲಿ ಮೇಲಣ ಅಂಕಣಗಳಿಗೆ ಕೂಡಿ ಕೊಂಡ ಎರಡು ಕಿವಿಗಳಿವೆ. ಕೈಗಳು, ತಲೆ, ಕುತ್ತಿಗೆ ಮೊದಲಾದ ಮೇಲಿನ ಭಾಗಗಳಿಂದ ರಕ್ತವನ್ನು ಹೃದಯಕ್ಕೆ ಸಾಗಿಸುವ ಧಮನಿ ಒಂದು, ಕಾಲುಗಳು ಹೊಟ್ಟಿ ಮೊದಲಾದ ಕೆಳ ಗಿನ ಭಾಗಗಳಿಂದ ರಕ್ತವನ್ನು ತರುವ ಧಮನಿ ಒಂದು, ಹೃದಯದೊಳಗೆನೇ ಸಂಚರಿಸುವ ರಕ್ತವನ್ನು ತರುವ ಧಮನಿ ಒಂದು, ಹೀಗೆ ಧಮನಿಗಳು ಬಲದ ಬದಿಯ ಮೇಲಿನ ಅಂಕಣ ದೊಳಗೆ ಸೇರುತ್ತವೆ. ಅದೇ ಬದಿಯ ಕೆಳಗಿನ ಅಂಕಣದಿಂದ ಒಂದು ಧಮನಿ ಹೊರಟು, 2 ಕವಲುಗಳಾಗಿ ಒಡೆದು, 2 ಶ್ವಾಸಕೋಶಗಳಿಗೆ ರಕ್ತವನ್ನು ಸಾಗಿಸುತ್ತದೆ. ಶ್ವಾಸಕೋಶ ಗಳೊಳಗೆ ಸಂಚಾರಮಾಡುವ ನಾಡಿಗಳು 4 ಧಮನಿಗಳಾಗಿ, ಎಡದ ಬದಿಯ ಮೇಲಿನ ಅಂಕಣದೊಳಗೆ ಸೇರುತ್ತವೆ. ಅದೇ ಬದಿಯ ಕೆಳಗಿನ ಅಂಕಣದಿಂದ ಒಂದು ದೊಡ್ಡ ಧಮನಿ ಯು ಹೊರಟು ಉತ್ತರೋತ್ತರ ಕವಲುಗಳಾಗುತ್ತಾ, ಶುದ್ಧವಾದ ರಕ್ತವನ್ನು ಶರೀರದ ಎಲ್ಲಾ ಪ್ರದೇಶಕ್ಕೂ ಒಯ್ಯುತ್ತದೆ. ಹೃದಯದ ಮೇಲಿನ ಅಂಕಣಗಳೆರಡೂ ಏಕಕಾಲದಲ್ಲಿ ಸಂಕೋಚವಾಗುತ್ತವೆ. ಆಗ್ಗೆ ಅವುಗಳಲ್ಲಿ ತುಂಬಿದ್ದ ರಕ್ತವು ಕೆಳಗಿನ ಅಂಕಣದೊಳಗೆ ಸೇರುತ್ತದೆ. ಅನಂತರ ಕೆಳಗಿನ 2 ಅಂಕಣಗಳು ಏಕಕಾಲದಲ್ಲಿ ಸಂಕೋಚವಾಗುತ್ತವೆ. ಆಗ್ಗೆ ಅವುಗಳಲ್ಲಿ ತುಂಬಿದ್ದ ರಕ್ತವು ಅಲ್ಲಿಂದ ಹೊರಡುವ ಧಮನೀಮೂಲಕ ಹೊರಗೆ ಹೋಗು ತ್ತದೆ. ಕೆಳಗಿನ ಅಂಕಣಗಳು ಸಂಕೋಚವಾಗುವಾಗ್ಗೆ, ಮೇಲಿನ ಅಂಕಣಗಳು ಸಡಿಲಾಗಿ (ಅಂದರೆ ವಿಸ್ತರಿಸಿ) ಸಂಬಂಧಪಟ್ಟ ಧಮನಿಗಳಿಂದ ರಕ್ತವು ಅವುಗಳೊಳಗೆ ಬಂದು ಸೇರು ತ್ತದೆ. ಮೇಲಿನ ಅಂಕಣಗಳು ಸಂಕೋಚವಾಗುವಷ್ಟರಲ್ಲಿ, ಕೆಳಗಣ ಅಂಕಣಗಳು ಖಾಲಿ ಯಾಗುತ್ತವೆ. ಹೃದಯದ ಕೆಳಗಣ ಅಂಕಣಗಳಿಂದ ಹೊರಡುವ 2 ಧಮನಿಗಳ ದ್ವಾರ ದಲ್ಲಿಯೂ, ಧಮನಿಯ ರಕ್ತವು ತಿರುಗಿ ಹೃದಯಕ್ಕೆ ಬಾರದ ಹಾಗೆ, ಧಮನಿಯ ಕಡೆಗೆ ಮಾತ್ರ ತೆರೆಯತಕ್ಕ ಮುಚ್ಚಳವಿದೆ. ಹೃದಯದ ಕೊನೆಗೆ ಎದುರಾಗಿ ಎದೆಗೆ ಕಿವಿಕೊಟ್ಟರೆ 2 ಸ್ವರಗಳು ಕೇಳುತ್ತವೆ. 1 ನೇದು ಅಬ್ ಎಂಬ ಹಾಗಿನದು, 2ನೇದು ಡುನ್ ಎಂಬ ಹಾಗಿ ನದು. 1ನೇ ಸ್ವರವು ಅಂಕಣಗಳ ಮಧ್ಯದ ಮುಚ್ಚಳಗಳು ಏಕಕಾಲದಲ್ಲಿ ಮುಚ್ಚುವದ ರಿಂದಲೂ, 2ನೇ 'ಸ್ವರವು ಧಮನಿಗಳೆರಡರ ದ್ವಾರಗಳು ಮುಚ್ಚುವದರಿಂದಲೂ, ಉಂಟಾಗು ವಂಧವು. ಈ 2 ಶಬ್ದಗಳನಂತರ ಸ್ವಲ್ಪ ವಿರಾಮಕಾಲ ಕಾಣುತ್ತದೆ. ಮೇಲಿನ ಅಂಕಣ ಗಳೊಳಗೆ ಬಂದು ಕೂಡುವ ಧಮನಿಗಳ ದ್ವಾರಗಳ ಮುಚ್ಚಳವಿಲ್ಲ. ಆ ಅಂಕಣಗಳ ಸಂಕೋಚಾವಸರದಲ್ಲಿ, ಆ ದ್ವಾರಗಳು ಮಾಂಸಸಂಕೋಚನವ್ಯಾಪಾರದಿಂದಲೇ ಮುಚ್ಚಿ ಹೋಗುತ್ತವೆ. 127. ಎಡಬದಿಯ ಕೆಳಗಣ ಅಂಕಣದಿಂದ ಹೊರಟ ರಕ್ತವು ತುಂಬಿದ್ದ ಧಮನಿ ಯೊಳಗೆ ಬಲಾತ್ಕಾರದಿಂದ ಸೇರುವ ದೆಸೆಯಿಂದ, ರಕ್ತವು ಧಮನಿಯನ್ನು ಉಬ್ಬಿಸಿಕೊಂಡು
ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೧೪೮
ಈ ಪುಟವನ್ನು ಪರಿಶೀಲಿಸಲಾಗಿದೆ