III - 80 - ಲೋಕದಲ್ಲಿ ದೊರಕುವವುಗಳು ಬಹು ಕಡಿಮೆ. ಪ್ರತ್ಯಕ್ಷವಾಗಿ ದೊರೆಯುವ ದ್ರವ್ಯ ಗಳಲ್ಲಿ ಯಾವ ಯಾವ ಮೂಲಭೂತಗಳು ಯಾವ ಯಾವ ಪ್ರಮಾಣಗಳಿಂದ ಸಂಯುಕ್ತ ವಾಗಿವೆ ಎಂದು ನಿಶ್ಚಯಿಸುವರೆ ಸೂಕ್ಷ್ಮ ಮತ್ತು ತಕ್ಕವಾದ ಯಂತ್ರಗಳು, ಮಹತ್ಪಾಂಡಿತ್ಯ ಮತ್ತು ದೀರ್ಘ ಶೋಧನೆಗಳು ಅವಶ್ಯಕವಾಗಿವೆ. ಹಾಗೆ ಗೊತ್ತುಮಾಡಿಕೊಂಡರೂ, ಆದ ರಿಂದಲೇ ಆ ದ್ರವ್ಯಗಳ ಗುಣ ನಿಶ್ಚಿತವಾಗುವದಿಲ್ಲ. ಮನುಷ್ಯಶರೀರದಲ್ಲಿ ಯಾವ ಮೂಲ ಭೂತ ಕಡಿಮೆ ಯಾ ಹೆಚ್ಚು ಆಗಿದೆ, ಯಾವ ಔಷಧದಲ್ಲಿ ಆ ಭೂತ ಹೆಚ್ಚು ಯಾ ಕಡಿಮೆ ಉಂಟು, ಅಂಧಾ ಔಷಧವನ್ನು ಯಾವ ಯೋಗದಲ್ಲಿ ಕೊಡಬಹುದು ಎಂಬಿತ್ಯಾದಿ ಎಲ್ಲಾ ಅವಶ್ಯಕವಾದ ಸೂಕ್ಷ್ಮಜ್ಞಾನವನ್ನು ಸಾಕಷ್ಟು ಸಂಪಾದಿಸುವದು ಅಸಾಧ್ಯವೆನ್ನಲೇ ಬೇಕು. ಲೋಕದಲ್ಲಿ ಔಷಧವಾಗಿ ಉಪಯೋಗಿಸಲಿಕ್ಕೆ ತಕ್ಕವಾಗಿರುವ ವಸ್ತುಗಳು ಅಪರಿಸಂಖ್ಯೇಯ ವಾಗಿವೆ. ಆದ್ದರಿಂದ ಚರಕಾದಿ ವೈದ್ಯಗ್ರಂಧಗಳಲ್ಲಿ ವಿವರಿಸುವ ಪೃಧಿವ್ಯಾದಿ ಪಂಚ ಮಹಾ ಭೂತಗಳ ರೂಪಕಾರ್ಯಾದಿ ಭೇದಗಳನ್ನು ತಿಳಿದು ವರ್ತಿಸುವದೇ ಸಾಧಾರಣ ಸಾಧ್ಯ. ಆದರೆ ಈ ಕೆಳಗೆ ಬರೆದ ಕೆಲವು ಭಾವಗಳನ್ನು ತಿಳಿದಿರುವುದು ಒಳ್ಳೆಯದು. 27. ಈ ದೇಹದ ರಚನೆಯಲ್ಲಿ ಸುಮಾರು 16 ಮೂಲಭೂತಗಳಿವೆ. ಅವುಗಳಲ್ಲಿ ಈ ಕೆಳಗಣವು ಸೇರಿ ಇವೆ -ಓಕ್ಸಿಜನ್ ವಾಯು, ಹೈಡ್ರೊಜನ್ ವಾಯು, ಕಾರ್ಬನ್, ನೈ ದೇಹದಲ್ಲಿ ಟ್ರೊಜನ್, ಗಂಧಕ, ಕ್ಲೋರಿನ್, ಕ್ಯಾಲ್ಸಿಯಮ್, ಸೋಡಿಯಮ್, ಪೊಟೇಸ್ಸಿ ರುವ ಮೂಲ ಯಮ್, ಕಬ್ಬಿಣ ಮತ್ತು ಸಿಲಿಕನ್. ಇವುಗಳಲ್ಲಿ ಓಕ್ಸಿಜನ್, ನೈಟ್ರೊಜನ್ ಭೂತಗಳು ಮತ್ತು ಹೈಡ್ರೊಜನ್ ಮಾತ್ರ ಪ್ರತ್ಯೇಕವಾಗಿ ಕಾಣಸಿಕ್ಕುವವು. ಮಿಕ್ಕವುಗಳೆ ಲ್ಲಾ ಸಂಯೋಗವಾಗಿಯೇ ಇರುತ್ತವೆ. ಓಕ್ಸಿಜನ್, ಫುಪ್ಫುಸಕ್ಲೋಮಗಳಲ್ಲಿಯೂ, ದೇಹದ ರಸಪದಾರ್ಧಗಳಲ್ಲಿಯೂ, ನೈಟ್ರೊಜನ್ ರಸಪದಾರ್ಧಗಳಲ್ಲಿಯೂ , ಹೈಡ್ರೊಜನ್ ಅನ್ನ ನಾಳದಲ್ಲಿ ಸಂಯುಕ್ತಪದಾರ್ಧಗಳು ವಿಯುಕ್ತವಾಗುವ ದೆಸೆಯಿಂದ ಉಂಟಾಗಿಯೂ, ಕಾಣುವವು. 28. ದೇಹದಲ್ಲಿ ಸಾರಭೂತವಾದ ಮಾಂಸಾದಿ ಅಂಗಗಳ ಪೋಷಣೆಗೆ ನೈಟ್ರೊ
ಜನೂ, ಬಿಸಿ ಮತ್ತು ವೇಗ ಇವುಗಳ ಪೋಷಣೆಗೆ ಕಾರ್ಬನ್ ಎಂಬ ಭೂತವೂ, ನಾಲ್ಕು ವಿಧ ವಾದ ಆಹಾರ ಮಖ್ಯವೆಂತ ಎಣಿಸಿ ಆಹಾರದ್ರವ್ಯಗಳನ್ನು ನಾಲ್ಕು ಜಾತಿಗಳಾಗಿ ವಿಭಾಗಿಸು
ದ್ರವ್ಯಗಳು ತಾರೆ - 1. ಮಾಂಸಪೋಷಕವಾದ (ನೈಟ್ರೊಜನ್ ಭೂಯಿಷ್ಠವಾದ) ವು 2. ಅಂಟು ಅಧವಾ ಪಿಷ್ಟ (ಕಾರ್ಬನ್ ಭೂತ ಭೂಯಿಷ್ಠ) ಪದಾರ್ಧಗಳು. 3. ಸ್ನೇಹಗಳು. 4. ಖನಿಜಗಳು. 2ನೇ ವರ್ಗದಲ್ಲಿ ಗೋದಿ, ಜೋಳ, ಅಕ್ಕಿ, ಕೂವೆಹಿಟ್ಟು, ಬಟ್ಟಾಟೆ, ಇತ್ಯಾದಿಗಳಲ್ಲಿರುವ ಅಂಟೂ, ಸಕ್ಕರೆ, ಬೆಲ್ಲ, ಕಬ್ಬು, ಸೀ ಹಣ್ಣುಗಳು, ಇತ್ಯಾದಿ ಮಧುರಪದಾರ್ಧಗಳೂ ಸೇರಿವೆ. ಅಂಟಿನಲ್ಲಿ, ಕಾರ್ಬನ್ 6 ಪಾಲಿಗೆ ಹೈಡ್ರೊಜನ್ 10 ಪಾಲು, ಓಕ್ಸಿಜನ್ 5 ಪಾಲು,