ಈ ಪುಟವನ್ನು ಪರಿಶೀಲಿಸಲಾಗಿಲ್ಲ.

-

                         -    83   
                          IVನೇ ಅಧ್ಯಾಯ.
                            ಷಡ್ರಸಗಳು.
1.   ಆಕಾಶ-ಪವನ-ದಹನ-ತೋಯ-ಭೂಮಿಷುಯಧಾಸಂಖ್ಯಮೇಕೋತ್ತರ

ಪರಿವೃದ್ದಾಃ ಶಬ್ದ-ಸ್ಪರ್ಶ-ರೂಪ-ರಸ-ಗಂಧಾಃ | ತಸ್ಮಾದಾಫ್ಯೋರಸಃ

ಜಲದಿಂದ ಪರಸ್ಪರಸಂಸರ್ಗಾತ್ ಪರಸ್ಪರಾನುಗ್ರಹಾತ್ ಪರಸ್ಪರಾನುಪ್ರವೇ ಉತ್ಪತ್ತಿ

ಶಾಚ್ಚ ಸರ್ವೇಷು ಸರ್ವೇಷಾಂ ಸಾನ್ನಿಧ್ಯಮಸ್ತ್ಯುತ್ಕರ್ಷಾಪಕರ್ಷಾತ್ತು ಗ್ರಹಣಂ | (ಸು. 154.)

ಆಕಾಶ, ವಾಯು, ಅಗ್ನಿ, ಜಲ, ಪೃಧ್ವೀ ಇವುಗಳಲ್ಲಿ ಶಬ್ದ, ಸ್ಪರ್ಶ, ರೂಪ, ರಸ, ಗಂಧಗಳು ಏಕೋತ್ತರವೃದ್ಧಿಯಾಗಿ ಇವೆ ಅಂದರೆ, ಆಕಾಶದಲ್ಲಿ ಶಬ್ದ, ವಾಯುವಿನಲ್ಲಿ ಶಬ್ದ ಮತ್ತು ಸ್ಪರ್ಶ, ಅಗ್ನಿಯಲ್ಲಿ ಶಬ್ದ, ಸ್ಪರ್ಶ, ರೂಪ, ಜಲದಲ್ಲಿ ಶಬ್ದ, ಸ್ಪರ್ಶ, ರೂಪ, ರಸ, ಪೃಧ್ವಿಯಲ್ಲಿ (ಗಂಧ ಸೇರಿಕೊಂಡು) ಶಬ್ದಾದಿ ಐದು ಪೂರಾ ಇರುತ್ತವೆ. ಆದ್ದರಿಂದ ರಸ ಎಂಬದು ಜಲಕ್ಕೆ ಸಂಬಂಧವಾದದ್ದು. ಸರ್ವ ವಸ್ತುಗಳಲ್ಲಿಯೂ ಪಂಚಭೂತಗಳೆಲ್ಲಾ ಪರಸ್ಪರ ಸೇರಿಕೊಂಡೂ, ಪರಸ್ಪರ ಬಲಪಡಿಸಿಕೊಂಡೂ, ಪರಸ್ಪರ ಪ್ರವೇಶಮಾಡಿಕೊಂಡೂ, ಇರುತ್ತವ. ಅವುಗಳು ಹೆಚ್ಚುಕಡಿಮೆಯಾಗಿ ಕೂಡಿಕೊಂಡು ಇರುವ ದೆಸೆಯಿಂದ ವಸ್ತುಭೇದ ಉಂಟಾ ಗುವದಾಗಿರುತ್ತದೆ.

2. ಸೌಮ್ಯಾಃ ಖಲು ಆಪೋS೦ತರಿಕ್ಷಪ್ರಭವಾಃ ಪ್ರಕೃತಿಶೀತಾ ಲಘ್ವ್ಯಶ್ಚ ಅವ್ಯಕ್ತರಸಾಶ್ಚ ತಾಸ್ತ್ವಂತರಿಕ್ಷಾದ್ ಭ್ರಶ್ಯಮಾನಾಭ್ರಷ್ಟಾಶ್ಚ ಪಂಚಮಹಾ ಷಡ್ರಸಗಳ ಭೂತವಿಕಾರಗುಣಸಮನ್ವಿತಾ ಜಂಗಮಸ್ಥಾವರಾಣಾಂ ಭೂತಾನಾಂ ಉತ್ಪತ್ತಿ ಮೂರ್ತೀರಭಿಪ್ರೀಣಯಂತಿ ತಾಸು ಮೂರ್ತಿಷು ಷಡ್ಭಿರ್ಮೂರ್ಚ್ಛಂತಿ ರಸಾಃ | (ಚ. 144 )

ನೀರು ಚಂದ್ರನ ದೆಸೆಯಿಂದ ಅಂತರಿಕ್ಷದಲ್ಲಿ ಹುಟ್ಟುವದಾಗಿರುತ್ತದೆ. ಅದು ಶೀತ ಪ್ರಕೃತಿಯುಳ್ಳದ್ದಾಗಿಯೂ, ಲಘುವಾಗಿಯೂ, ತಿಳಿಯಲಾರದ ರುಚಿಯುಳ್ಳದ್ದಾಗಿಯೂ ಇರುತ್ತದೆ ಅಂತರಿಕ್ಷದಿಂದ ಕೆಳಗೆ ಬೀಳುತ್ತಿರುವ, ಮತ್ತು ಬಿದ್ದ ಆ ನೀರು ಪಂಚಮಹಾಭೂತಗಳ ವಿಕಾರಗುಣಗಳಿಂದ ಕೂಡಿಕೊಂಡು, ಸ್ಥಾವರ ಜಂಗಮಗಳೆಂಬ ಸಮಸ್ತ ವಸ್ತುಗಳ ಮೂರ್ತಿಗಳನ್ನು ತೃಪ್ತಿಗೊಳಿಸುತ್ತದೆ. ಅಂಧಾ ಮೂರ್ತಿಗಳಲ್ಲಿ ಆರು ವಿಧವಾಗಿ ರಸಗಳು ವ್ಯಕ್ತವಾಗುತ್ತವ.

3. ಸ ಖಲ್ವಾಪ್ಯೋ ರಸಃ ಶೇಷಭೂತಸಂಸರ್ಗಾದ್ವಿದಗ್ದಃ ಷೋಢಾ ವಿಭ ಜ್ಯತೇ|ತದ್ಯಧಾ|ಮಧುರೋಽಮ್ಲೋಲವಣಃ ಕಟುಕಸ್ತಿಕ್ತಃ ಕಷಾಯ ರಸಭೇದಗಳು ಇತಿ | ತೇ ಚ ಭೂಯಃ ಪರಸ್ಪರ-ಸಂಸರ್ಗಾತ್ತ್ರಿಷಷ್ಟಿಧಾ ಭಿದ್ಯಂತೇ | (ಸು. 154-55.)

ಆ ಜಲಸಂಬಂಧವಾದ ರಸವು ಇತರ ಮಹಾಭೂತಗಳ ಯೋಗದಿಂದ ಪಕ್ವವಾಗಿ (ಅಂದರೆ ರೂಪಾಂತರ ಹೊಂದಿ) ಆರು ವಿಧವಾಗಿ ಪರಿಣಮಿಸುತ್ತದೆ. ಹ್ಯಾಗಂದರೆ:- ಸೀ,