ಈ ಪುಟವನ್ನು ಪರಿಶೀಲಿಸಲಾಗಿಲ್ಲ.
- 100 -
lv ಬೆಲ್ಲದೊಂದಿಗೆ ಕಾಗೆಸೊಪ್ಪು, ಜೇನಿನೊಂದಿಗೆ ಮೂಲಂಗಿ, ಬೆಲ್ಲ ಮತ್ತು ಜೇನಿನೊಂದಿಗೆ ಕಾಡಹಂದಿಮಾಂಸ ಸಹ ವಿರುದ್ದ. ಕದಲೀಫಲಂ ತಾಲಫಲೇನ ಪಯಸಾ ದಧ್ಯಾ ತಕ್ರೇಣ ವಾ || (ಸು. 79 ) ಬಾಳೆಹಣ್ಣನ್ನು ತಾಳಿಹಣ್ಣಿನೊಂದಿಗೆ, ಹಾಲಿನೊಂದಿಗೆ, ಮೊಸರೊಂದಿಗೆ ಅಧವಾ ಮಜ್ಜಿಗೆ ಯೊಂದಿಗೆ, ತಿನ್ನಬಾರದು. ಲಿಕುಚಫಲಂ ಪಯಸಾ ದಧ್ಯಾ ಮಾಷಸೂಪೇನ ವಾ ಮಧುನಾ ಘೃತೇನ ಚ | ಪ್ರಾಕ್ ಪಯಸಃ ಪಯಸೋ5ನೇ ವಾ || (ಸು 79.) ಹೆಬ್ಬಲಸಿನ ಫಲವನ್ನು ಹಾಲಿನೊಂದಿಗೆ, ಮೊಸರಿನೊಂದಿಗೆ, ಉದ್ದಿನ ತೋವೆಯೊಂದಿಗೆ, ಅಧವಾ ತುಪ್ಪ-ಜೇನುಗಳೊಂದಿಗೆ ತಿನ್ನಬಾರದು, ಮತ್ತು ಅದನ್ನು ಹಾಲಿಗೆ ಮೊದಲಾಗಲಿ ಹಾಲಿನ ಅಂತ್ಯದಲ್ಲಿಯಾಗಲ ಭಕ್ಷಿಸಬಾರದು. ಕಾಂಸ್ಯಭಾಜನೇ ದಶರಾತ್ರಪರ್ಯುಮಿತಂ ಸರ್ಪಿಃ || (ಸು. 79.) ಕಂಚಿನ ಪಾತ್ರೆಯಲ್ಲಿ ಹತ್ತು ರಾತ್ರಿ ಉಳಿಸಿದ ತುಪ್ಪ ತ್ಯಾಜ್ಯ. ಸ್ನೇಹೌ ಮಧುಸ್ನೇಹೌ ಜಲಸ್ನೇಹೌ ವಾ || (ಸು 79.) ಎರಡು ಜಾತಿ ಸ್ನೇಹಗಳನ್ನು, ಜೇನು ಮತ್ತು ಸ್ನೇಹವನ್ನು, ಅಥವಾ ನೀರು ಮತ್ತು ಸ್ನೇಹವನ್ನು, ಸರಿ ತೂಕ ಕೂಡಿಸಿದರೆ, ವಿರೋಧ ಉಂಟಾಗುತ್ತದೆ. ಮಧುಸರ್ಪಿವ್ರಸಾತೈಲಪಾನೀಯಾನಿ ದ್ವಿಶಸ್ತಿಶಃ ಏಕತ್ರ ವಾ ಸಮಾಂಶಾನಿ ವಿರುಧನೇಪರಸರಮ | ಭಿನ್ನಾಂಶೇ ಅಪಿ ಮಧ್ವಾಜೇ ದಿವ್ಯವಾರ್ಯ ನುಪಾನತಃ || (ವಾ 40 ) ಜೇನು, ತುಪ್ಪ, ವಸೆ, ತೈಲ, ನೀರು, ಇವುಗಳನ್ನು ಎರಡಾಗಿ, ಮೂರಾಗಿ, ಅಧವಾ ಒಟ್ಟಾಗಿ, ಸಮಾಂಶದಿಂದ ಉಪಯೋಗಿಸಿದರೆ, ಅವು ಪರಸ್ಪರ ವಿರೋಧ ಮಾಡುತ್ತವೆ. ಜೇನು ಮತ್ತು ತುಪ್ಪವನ್ನು ಭಿನ್ನಾಂಶವಾಗಿ ಉಪಯೋಗಿಸಿದಾಗಲೂ, ಅನುಪಾನಕ್ಕೆ ಆಕಾಶದ ನೀರನ್ನುಪಯೋಗಿಸಿದರೆ, ವಿರೋಧವುಂಟಾಗುತ್ತದೆ. ಉಷ್ಟ್ರರ್ದಧಿ ವಿವರ್ಜಯೇತ್ || (ಭಾ. ಪ್ರ. 70.) ಉಷ್ಣಪದಾರ್ಥಗಳೊಂದಿಗೆ ಮೊಸರನ್ನು ಸೇವಿಸಬಾರದು. ಕೃತಾನ್ನಂ ಚ ಕಷಾಯಂ ಚ ಪುನರುತ್ಥಕೃತಂ ತ್ಯಜೇತ್ || (ಭಾ. ಪ್ರ. 70.) ಸಿದ್ಧವಾದ ಅನ್ನವನ್ನಾಗಲಿ, ಕಷಾಯವನ್ನಾಗಲಿ, ಪುನಃ ಬಿಸಿ ಮಾಡಿ ಉಪಯೋಗಿಸ ಬಾರದು. ಏಕತ್ರ ಬಹುಮಾಂಸಾನಿ ವಿರುಧನೇ ಪರಸ್ಪರಮ್ || (ಭಾ. ಪ್ರ. 70 ) ಬಹು ಜಾತಿಯ ಮಾಂಸಗಳನ್ನು ಒಟ್ಟಾಗಿ ಉಪಯೋಗಿಸಿದ್ದಲ್ಲಿ ಅವು ಪರಸ್ಪರ ವಿರೋಧವನ್ನು ಮಾಡುತ್ತವೆ.