ಈ ಪುಟವನ್ನು ಪರಿಶೀಲಿಸಲಾಗಿದೆ

- 139 - ಅ VII ಹುಟ್ಟಿದ್ದೆಂಬ ಎರಡು ಭೇದಗಳಿವೆ. ಅದಲ್ಲದೆ ಶುಷ್ಕ (ಒಣಗಲು), ಆದ್ರ೯ (ರಕ್ತ ಕಾಣು ವಂಥಾದ್ದು (Bleeding), ಎಂಬ ಎರಡು ಭೇದಗಳೂ ಇವೆ. ಚರ್ಮಕೀಲ ತ್ರಿಧೈವ ಚರ್ಮಕೀಲಾನಿ ವಾತಾತ್ಪಿತ್ತಾತ್ಕಫಾದಪಿ || ೧೩ || 12. ಚರ್ಮಕೀಲಗಳು 3 – ವಾತ, ಪಿತ್ತ, ಕಫಗಳಿಂದ ಪ್ರತ್ಯೇಕವಾಗಿ ದ್ವಾವಿಂಶತಿ ಪ್ರಕಾರೇಣ ಕೃಮಯಃ ಸ್ಯುರ್ದ್ವಿಧಾ ಚ ತೇ | ಬಾಹ್ಯಾಸ್ತಧಾಭ್ಯಂತರಾಃ ಸ್ಯುಃ ತೇಷು ಯೂಕಾ ಬಹಿಶ್ಚರಾಃ || ೧೪ || ಲಿಕ್ಷಾಶ್ಚಾನ್ಯೇಽಭ್ಯಂತರಾಸ್ಯುಃ ಕಫಾತ್ತೇ ಹೃದಯಾದಿಕಾಃ | ಅಂತ್ರಾದಾ ಉದರಾವೇಷ್ಟಾ ಗುರವಶ್ವ ಮಹಾಂಕುರಾಃ || ೧೫ || ಕ್ರಿಮಿ ಸುಗಂಧಾ ದರ್ಭಕುಸುಮಾಸ್ತಧಾ ರಕ್ಕಾಚ್ಚ ಮಾತರಃ | ಸೌರಸಾ ಲೋಮವಿಧ್ವಂಸಾ ರೋಮದ್ವೀಪಾ ಉದುಂಬರಾಃ || ೧೬ || ಕೇಶಾದಾಶ್ಚ ತಧೈವಾನ್ಯೇ ಶಕೃಜ್ಜಾತಾ ಮಕೇರುಕಾಃ || ಲೇಲಿಹಾಶ್ಚ ಸಲೂನಾಶ್ವ ಸೌಸುರಾದಾಶ್ಚ ಕೇರುಕಾಃ || ೧೭ || ತಧ್ಯಾನ್ಯೇ ಕಫರಕ್ತಾಭ್ಯಾಂ ಸಂಜಾತಾಃ ಸ್ನಾಯುಕಾಃ ಸ್ಮೃತಾಃ | ವ್ರಣಸ್ಯ ಕೃಮಯಶ್ಚಾನ್ಯೇ ವಿಷಮಾ ಬಾಹ್ಯಯೋನಯಃ || ೧೮ || 13 ಕ್ರಿಮಿಗಳು (Worms) 22 ವಿಧ.-ಇವುಗಳಲ್ಲಿ ಹೊರಗಿನವು, ಒಳಗಿನವು ಎಂತ ಎರಡು ಭೇದ, 1 ಯೂಕ, 2 ಲಿಕ್ಷಾ, ಎಂಬವು ಹೊರಗಿನವು, ಉಳಿದ ಒಳಗಿನವು ಯಾವ ವೆಂದರೆ 3 ಹೃದಯಾದ, 4 ಅಂತ್ರಾದ, 5 ಉದರಾವೇಷ್ಟಾ, 6, ಗುರವ, 7, ಮಹಾಂ ಕುರಾ, 8, ಸುಗಂಧಾ, 9 ದರ್ಭಕುಸುಮ, ಇವು ಕಫದಿಂದ, 10, ಮಾತರ, 11. ಸೌರಸಾ, 12. ಲೋಮವಿಧ್ವಂಸಾ, 13 ರೋಮದ್ವೀಪಾ, 14, ಉದುಂಬರಾ, 15, ಕೇಶಾದಾ, ಇವ್ರ ರಕ್ತದಿಂದ, 16, ಮಕೇರುಕಾ, 17, ಲೇಲಿಹಾ , 18, ಸಲೂನಾ, 19, ಸೌಸುರಾದಾ, 20. ಕೇರುಕಾ, ಇವು ಮಲದಲ್ಲಿ ಉಂಟಾಗತಕ್ಕವ್ರ, 21, ಸ್ನಾಯುಕಾ, ಕಫರಕ್ತಗಳಿಂದ ಹುಟ್ಟುವವು, 22, ವ್ರಣಗಳಲ್ಲಿ ಆಗತಕ್ಕ ಕ್ರಿಮಿಗಳು, ಇವು ಹೊರಗಿನವು, ವಿಷಮ. (ನರಾ ಭಾವಪ್ರಕಾಶದಲ್ಲಿ ಪ್ರಥಮ 20 ಮಾತ್ರ ಹೇಳಿ, ಕ್ರಿಮಿಗಳು ಹೆಸರಿಸಿಂದ 20 ವಿಧ ಎಂತ ಕಾಣಿಸಿಯದೆ ) ಪಾಂಡು ಪಾಂಡುರೋಗಾಶ್ಚ ಪಂಚ ಸ್ಯುಃ ವಾತ-ಪಿತ್ತ, ಕಫೈಸ್ತ್ರಿಧಾ | ತ್ರಿದೋಷೈರ್ಮೃತ್ರಿಕಾಭಿಶ್ಚ 14. ಪಾಂಡುರೋಗ (Anemia) 5 ಮೂರು ದೋಷಗಳಿಂದ ಪೃಧಕ್ ಮತ್ತು ಸಮಸ್ತವಾಗಿ 4, ಮೃತ್ತಿಕೆಯಿಂದ 1, ಹೀಗೆ ಕಾಮಿಲೆ ತಧೈಕಾ ಕಾಮಲಾ ಸ್ಮೃತಾ || ೧೯ || 15. ಕಾಮಿಲೆ (Jaundice) 1.