ಆ X 204 ಅತಿಯಾಗಿ ನೀರು ಕುಡಿಯುವದರಿಂದಲೂ, ವಿಷಮವಾದ ಅಶನದಿಂದಲೂ (ಮೂ ತ್ರಾದಿ ವೇಗ) ಧಾರಣದಿಂದಲೂ, ನಿದ್ರೆಯ ನಿಯಮ ತಪುವದರಿಂದಲೂ, ಸಕಾಲದಲ್ಲಿ ಉಂಡ ಮತ್ತು ಲಘುವೂ, ಸಾತ್ಮವೂ, ಆದ ಅನ್ನವಾದರೂ ಮನುಷ್ಯನಿಗೆ ಪಚನವಾಗುವದಿಲ್ಲ. ಶನ 26. ಹಿತಾಹಿತೋಪಸಂಯುಕ್ತಮನ್ನಂ ಸಮಶನಂ ತಂ || ಮರು ವಿಧ ಬಹುಸ್ತೆಕಮಕಾಲೇ ವಾ ವಿಜೇಯಂ ವಿಷನಾಶನಂ || ರಾದ ನಿಂದ್ಯಾ ಸಾರ್ಣೇ ಭುಜ್ಯತೇ ಯತ್ತು ತದಧ್ರಶನಮುಚ್ಚತೇ | ತ್ರಯಮೇತ ಹತ್ಯಾಶು ಬಹೂನ್ಯಾಧೀನರೋತಿ ವಾ || (ಸು. 240.) ಹಿತವಾದದ್ದೂ , ಅಹಿತವಾದದ್ದೂ ಕೂಡಿರುವ ಭೋಜನವು ಸಮಶನವೆನ್ನಿಸಿಕೊಳ್ಳುತ್ತದೆ. ಅತಿಯಾಗಿ, ಕಡಿಮೆಯಾಗಿ, ಅಧವಾ ಅಕಾಲದಲ್ಲಿ, ಭುಂಜಿಸಿದ ಅನ್ನವು ವಿಷಮಾಶನ ಎಂತ ತಿಳಿಯಬೇಕು. ಅಜೀರ್ಣವಾದದ್ದು ಇರುವಾಗ್ಗೆ ಉಂಡದ್ದು, ಅಧ್ರಶನ ಎಂತ ಹೇಳುತ್ತಾರೆ. ಇವು ಮೂರೂ ಬೇಗನೇ ಕೇಡು ಮಾಡುತ್ತವೆ, ಅಧವಾ ಬಹು ವ್ಯಾಧಿಗಳನ್ನುಂಟುಮಾಡು ಇವೆ. 27. ಪಯಾದಿಗಳ ಪೇಯಲೇಹ್ಯಾದ್ಯಧಕ್ಷಾಣಾಂ ಗುರು ವಿದ್ಯಾದ್ಯಧೋರಂ | ಗುರುತ್ವ ಭೇದ (ಸು. 238.) ಪೇಯ (ಪಾನಕ, ಗಂಜಿ ಮುಂತಾದ ಕುಡಿಯತಕ್ಕವು), ಲೇಹ್ಯ (ಜೇನು ಮುಂತಾದ ನೆಕ್ಕತಕ್ಕವು), ಅದ್ಯ (ಅನ್ನ ಮುಂತಾದ್ದು), ಭಕ್ಷ, ಇವುಗಳೊಳಗೆ (1 ನೇದಕ್ಕಿಂತ 2ನೇದು, 2ನೇದಕ್ಕಿಂತ 3ನೇದು, 3ನೇದಕ್ಕಿಂತ 4ನೇದು, ಹೀಗೆ) ಯಧೋತ್ತರ ಗುರುವಾದದ್ದೆಂತ ತಿಳಿಯ ಬೇಕು. ಆಹಾರಂ ಷಡ್ಡಿಧಂ ಚೇಷ್ಯಂ ಪೇಯಂ ಲೇಹ್ಯಂ ತಥೈವ ಚ | ಭೋಜ್ಯಂ ಭಕ್ಷಂ ತಧಾ ಚರ್ವ೦ ಗುರು ವಿದ್ಯಾದ್ಯಧೋರಂ | (ನಿ. ರತ್ನಾಕರ.) ಚೀಪತಕ್ಕದ್ದು, ಕುಡಿಯತಕ್ಕದ್ದು, ನೆಕ್ಕತಕ್ಕದ್ದು, ಉಣ್ಣತಕ್ಕದ್ದು, ತಿನ್ನತಕ್ಕದ್ದು, ಜಗಿಯ ತಕ್ಕದ್ದು, ಎಂತ ಆಹಾರದಲ್ಲಿ ಆರು ವಿಧಗಳು. ಇವು ಯಧೋತ್ತರ ಗುರುವಾಗಿರುತ್ತವೆ (ಅಂದರೆ ಹಿಂದಣದಕ್ಕಿಂತ ಮುಂದಿನದು ಗುರು). 28, ಪಿಷ್ಟಾನ್ನಂ ನೈವ ಭುಂಜೀತ ಮಾತ್ರಯಾ ವಾ ಒುಭುಕ್ಷಿತಃ | ಹಿಟ್ಟಿನಿಂದ ಮಾ ದ್ವಿಗುಣಂ ಚ ಪಿಬೇತ್ತೊಯಂ ಸುಖಂ ಸಮ್ಯಕ್ ಪ್ರಜೀರ್ಯತಿ | ಡಿದ ಅನ್ನ (ಸು. 238.) ಹಿಟ್ಟಿನಿಂದ ತಯಾರಿಸಿದ ಅನ್ನವನ್ನು ತಿನ್ನದೇ ಇರುವದು ಒಳ್ಳೇದು; ಅಧವಾ ಹಸಿವು ಆದ ಸಮಯ ನೋಡಿ, ಮಿತದಿಂದ ತಿಂದು, ಎರಡು ಪಾಲಷ್ಟು ನೀರನ್ನು ಕುಡಿಯಬೇಕು; ಆಗ್ಗೆ ಅದು ಸುಖವಾಗಿ ಮತ್ತು ಸರಿಯಾಗಿ ಜೀರ್ಣವಾಗುತ್ತದೆ."
ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೨೯೪
ಈ ಪುಟವನ್ನು ಪರಿಶೀಲಿಸಲಾಗಿಲ್ಲ.