- 219 - ಆ XT ಪಚ್ಚೆ ಕರ್ಪೂರ, ಜಾಯಿಕಾಯಿ, ಗಂಧಮೆಣಸು, ಲವಂಗ, ಕಾಳುಮೆಣಸು, ಸುಣ್ಣ, ಅಡಿಕೆ, ಇವುಗಳು ಸಹಿತವಾದ ಒಳ್ಳೆ ತಾಂಬೂಲದ ಎಲೆಯು ಬಾಯಿಯ ನಿರ್ಮಲತೆ ಮತ್ತು ಪರಿಮಳವನ್ನು ಮತ್ತು ಮುಖದ ಕಾಂತಿ ಮತ್ತು ಪ್ರಶಸ್ತತೆಯನ್ನು ಉಂಟುಮಾಡುವದಲ್ಲದೆ, ದವಡೆ, ಹಲ್ಲು, ಸ್ವರ, ಮಲ, ನಾಲಿಗೆ, ಇವುಗಳನ್ನು ಶೋಧಿಸುವದು; ಮತ್ತು ಅದರಿಂದ ನೆಗಡಿ ಮತ್ತು ಗಂಟಲರೋಗಗಳು ಶಾಂತವಾಗುವವು, ಪ್ರೀತಿಕರವಾದದ್ದು. ನಿದ್ರೆ ಮಾಡಿ ಎದ್ದಾಗೆ, ಉಂಡ ಮೇಲೆ, ಸ್ನಾನ ಮಾಡಿದ ಮೇಲೆ, ಮತ್ತು ವಾಂತಿ ಮಾಡಿಸಿಕೊಂಡ ಮೇಲೆ, ಮನುಷ್ಯನಿಗೆ ಅದು ಪಧ್ಯವಾಗಿರುತ್ತದೆ ರಕ್ತಪಿತ್ತ, ಕೃತ, ಕ್ಷೀಣ, ಬಾಯಾರಿಕೆ, ಮೂರ್ಚೆ, ಈ ವಿಕಾರಗಳಿಂದ ಪೀಡಿತರಾದವರಿಗೂ, ರೂಕ್ಷವಾದವರಿಗೂ, ಬಲಹೀನರಾದವರಿಗೂ, ಬಾಯಿಹುಣ್ಣಿನವರಿಗೂ, ಅದು ಹಿತವಲ್ಲ. ಮರಾ ಮೇಲಿನ ವಸ್ತುಗಳೊಳಗೆ ಸುಣ್ಣ ಬಿಟ್ಟು ಮಿಕ್ಕ ಏಳು ಬಗೆಗಳು ಮತ್ತು ಸಣ್ಣ ಏಲಕ್ಕಿ, ಇವುಗಳನ್ನು ಬಾಯಿಯೊಳಗೆ ಇಟ್ಟು ಕೊಳ್ಳಬೇಕಾಗಿ ಚರಕದಲ್ಲಿ ಕಾಣುತ್ತದೆ (ಪು 31) ಈ 8 ಬಗೆಗಳೊಳಗೆ ಕಾಳುಮೆಣಸು ಮತ್ತು ಗಂಧಮೆಣಸು ಬಿಟ್ಟು ಕಾಚನ್ನು ಮತ್ತು ಜಾಪತ್ರೆಯನ್ನು ಕೂಡಿಸಿಕೊಂಡು ತಿನ್ನ ಬೇಕಾಗಿ ಮತ್ತು ತಾಂಬುಲಾನುಪಯಗಾತ್ಸಾತ್ ಶ್ರೇಷ್ಮಪಿತ್ತಾಪಿಲಾನ್ವಿತಃ | ದೇಹದೃಶದಂತಾಗ್ನಿ ಶೂತ್ರವರ್ಣಬಲಕ್ಷ ಯಃ | (ರಾ 164 ) ತಾಂಬೂಲವನ್ನು ಉಪಯೋಗಿಸದ್ದರಿಂದ ಕಫ-ಪಿತ್ತ-ವಾಯುಗಳಿಂದ ಕೂಡಿಕೊಂಡು, ದೇಹ, ಕಣ್ಣು, ಕೂದಲು, ಹಲ್ಲು, ಜರರಾಗ್ನಿ, ಕಿವಿ, ಮತ್ತು ಮೈವರ್ಣ, ಇವುಗಳ ಕ್ಷಯ ಉಂಟಾಗುವದು ಎಂತ ಸಹ ರಾಜವಲ್ಲಭ ಹೇಳುತ್ತದ (ಆದರೆ 20ನೇ ಸಂ ನೋಡು) ದುರ್ಬಲವಾದ ಹಬ್ಬಗಳುಳ್ಳವರಿಗೂ, ದೃಷ್ಟಿ ರೋಗವುಳ್ಳವರಿಗೂ, ವಿಷ ಪೀಡಿತರಾದವರಿಗೆ ಸಹ ತಾಂಬೂಲವು ಹಿತವಲ್ಲ ಎಂತ ಭಾ ಪ್ರ ಹೇಳುತ್ತದೆ ಆದ್ಯಂ ವಿಮೋಪಮಂ ಪೀತಂ ದ್ವಿತೀಯಂ ಭೇದಿ ದುರ್ಜರಂ | ತೃತೀಯಾದನುಪಾತವ್ಯಂ ಸುಧಾತುಲ್ಯಂ ರಸಾಯನಂ !! (ಭಾ. ಪ್ರ. 53.) ಒಂದನೇ ಸರ್ತಿಯ ರಸವನ್ನು ಕುಡಿದರೆ, ಅದು ವಿಷಕ್ಕೆ ಸಮ, ಎರಡನೇದು ಜೀರ್ಣಕ್ಕೆ ಕಷ್ಟವಾದದ್ದು ಮತ್ತು ಭೇದಿಕರ, ಮೂರನೇದು ಮೊದಲುಗೊಂಡು ಅಮೃತಸಮಾನ ಮತ್ತು ರಸಾಯನದ ಗುಣವುಳ್ಳವು. ಮರಾ ಮೇಲೆ ಹೇಳಿದ ಗುಣದೋಷಗಳು ರಾಜವಲ್ಲ ಭದಲ್ಲಿ ಅಡಿಕೆಗೆ ಹೇಳಲ್ಪಟ್ಟಿವೆ (ಪು 165 ) 20. ತಾಂಬೂಲಂ ನಾತಿಸೇವೇತ ನ ವಿರಿಕ್ಕೊ ಬುಭುಕ್ತಿತಃ | ದೇಹದೃಶದಂತಾಗ್ನಿ ಶ್ವೇತವರ್ಣಬಲಕ್ಷಯಃ || ಶೋಷಃ ಪಿತ್ತಾನಿಲಾಸ್ತಂ ಸ್ಯಾದತಿತಾಂಬೂಲಭಕ್ಷಣಾತ್ | (ಭಾ. ಪ್ರ. 53.) ತಾಂಬೂಲವನ್ನು ಅತಿಯಾಗಿ ಯಾರೂ ಸೇವಿಸಬಾರದು. ವಿರೇಚನ ಮಾಡಿಸಿಕೊಂಡವ ನಿಗೂ, ಹಸಿದವನಿಗೂ ಅದು ನಿಷಿದ್ಧ. ಅತಿಯಾಗಿ ತಾಂಬೂಲವನ್ನು ಸೇವಿಸುವದರಿಂದ 28* ಕ
ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೩೦೯
ಈ ಪುಟವನ್ನು ಪರಿಶೀಲಿಸಲಾಗಿಲ್ಲ.