ಆ X1 - 220 - ಗುಣ ಶರೀರ, ಕಣ್ಣು, ಕೂದಲು, ಹಲ್ಲು, ಅಗ್ನಿ, ಕಿವಿ, ವರ್ಣ ಮತ್ತು ಬಲ, ಇವುಗಳ ಕ್ಷಯವೂ, ಶೋಷವೂ, ಪಿತ್ತವಾಯುದುಷ್ಟ ರಕ್ತವೂ ಉಂಟಾಗುವವು. 21. ತಾಂಬೂಲಪತ್ರಂ ತೀಕ್ರೋಷ್ಣಂ ಕಟು ವಾತಕಫಾಪಹಂ | ವೀಳ್ಯದೆಲೆಯ ಪಿತ್ತಕೃತ್ ಸಂಸನಂ ವೃಷ್ಯಂ ವಕ್ನಿಕೃದ್ವಸ್ತಿ ಶೋಧನಂ || - (ರಾ. 163.) ವೀಳ್ಯದೆಲೆಯು ತೀಕ್ಷ, ಉಷ್ಣ, ಖಾರ, ವಾತಕಫಹರ, ಪಿತ್ತಕಾರಿ, ಶಿಥಿಲತ್ವ ಕಾರಿ, ವೃಷ್ಯ, ಅಗ್ನಿದೀಪನಕಾರಿ, ಮತ್ತು ವಸ್ತಿಶೋಧನಕಾರಿ. ಪರ್ಣಮೂಲೇ ಭವೇದ್ಯಾಧಿಃ ಪರ್ಣಾಿ ಪಾಪಸಂಭವಃ | ಜೀರ್ಣ೦ ಪತ್ರಂ ಹರೇದಾಯುಃ ಸಿರಾ - ವಿನಾಶಿನೀ || (ರಾ. 163.) ತಾಂಬೂಲದ ಎಲೆಯ ಮೂಲವನ್ನುಪಯೋಗಿಸುವದರಿಂದ ವ್ಯಾಧಿಯೂ, ತುದಿಯ ನ್ನುಪಯೋಗಿಸುವದರಿಂದ ಪಾಪಸಂಭವವೂ, ನರಗಳ ಉಪಯೋಗದಿಂದ ಅಗ್ನಿನಾಶವೂ, ಹಳೆದಾದ ಎಲೆಯ ಉಪಯೋಗದಿಂದ ಆಯುಃಕ್ಷೀಣತೆಯೂ ಉಂಟಾಗುವವು. ಷರಾ ಪಾರಾಂತರ ಪ್ರಕಾರ ಮಧ್ಯದ ಭಾಗವನ್ನು ಉಪಯೋಗಿಸಿದರೆ ಆಯುಃಕ್ಷೀಣತೆ ಮತ್ತು ನರಗಳ ಉಪ ಯೋಗದಿಂದ ಬುದ್ಧಿನಾಶ ಉಂಟಾಗುತ್ತದೆಂತ ಅರ್ಥವಾಗುತ್ತದೆ (ಭಾ ಪ್ರ 53 ) 22. ಶುಷ್ಕಮಗ್ನಿಕರಂ ಪೊಗಂ ಕಷಾಯಂ ಮಧುರಂ ಪರಂ | ಪಕ್ವಂ ತು ವಾತಲಂ ರೂಕ್ಷಂ ಭೇದನಂ ಕಫನಾಶನಂ || ಅಡಿಕೆಯ ಗುಣ ಗುರ್ವಭಿಷ್ಯಂದಿ ಮಧುರಂ ತೋಯದ್ಭಗ್ನನಾಶನಂ || (ರಾ. 163.) ಒಣ ಅಡಿಕೆಯು ಅಗ್ನಿಪ್ರದೀಪನಕಾರಿ, ಚೊಗರು, ಸೀ ಮತ್ತು ಉತ್ತಮ; ಹಣ್ಣಡಿಕೆಯು ವಾತವೃದ್ಧಿಕರ, ರೂಕ್ಷ, ಭೇದಿಕಾರಿ, ಮತ್ತು ಕಫನಾಶನಕಾರಿ; ಎಳೇ ಅಡಿಕೆಯು ಗುರು, ಅಭಿಷ್ಯಂದಿ, ಸೀ ಮತ್ತು ಅಗ್ನಿನಾಶನಕಾರಿ. ಷರಾ ಆಡಿಕೆಯಲ್ಲಿ ಮೋಹನಗುಣವಿರುತ್ತದಾದರೂ, ನೀರಲ್ಲಿ ನೆನಸಿದ ಹಣ್ಣಡಿಕೆಯು ತ್ರಿದೋಷಹರ (ಭಾ ಪ್ರ 53 ) 23, ಚೂರ್ಣಂ ಸಾರಣಶ್ಲೇಷ್ಮಮೇದೋಹರಮುದಾಹೃತಂ | ಸುಣ್ಣದ ಗುಣ ಶಂಖಚೂರ್ಣ೦ ಕಟು ಕ್ಷಾರಯುಷ್ಣಂ ಕೃಮಿಹರಂ ಪರಂ || (ರಾ. 164.) ಸುಣ್ಣವು ವಾತ-ಕಫ-ಮೇದಸ್ಸುಗಳನ್ನು ಪರಿಹರಿಸತಕ್ಕದ್ದು. ಶಂಖದ ಸುಣ್ಣವು ಕಟು, ಕ್ಷಾರ, ಉಷ್ಣ ಮತ್ತು ಒಳ್ಳೆ ಕ್ರಿಮಿಹರ. 24. ಕಾಚಿನ ಗುಣ, ಖದಿರಃ ಕುಷ್ಠ ವೀಸರ್ಪಮೇಹಪಿತ್ತ ಕಫಾಪಹಃ | (ರಾ. 164.) ಕಾಡು ಕುಷ್ಠ, ಎಸರ್ಪ, ಮೇಹ, ಪಿತ್ತ, ಕಫ, ಇವುಗಳನ್ನು ಪರಿಹರಿಸುವದು.
ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೩೧೦
ಈ ಪುಟವನ್ನು ಪರಿಶೀಲಿಸಲಾಗಿಲ್ಲ.