ಈ ಪುಟವನ್ನು ಪರಿಶೀಲಿಸಲಾಗಿದೆ

ಅ XI

             - 222 - 

ಮತ್ತು ಕರಿವರ್ಣ, ಕ್ರಿಮಿ, ಕೆಮ್ಮು, ವಾಂತಿ, ಉಬ್ಬಸ, ಶೋಷ, ಪೀನಸ, ಮತ್ತು ಹೃದ್ರೋಗ, ಇವುಗಳನ್ನು ಪರಿಹರಿಸುತ್ತದೆ. - 28. ಚಾತೀಪಶ್ರೀ ಲಘುಃ ಸ್ವಾದುಃ ಕಟೂಷ್ಣಾ ರುಚಿವರ್ಣಕೃತ್ | ಚಾಪತ್ರೆಯ ಗುಣ ಕಫ-ಕಾಸ-ವಮಿ-ಶ್ವಾಸ-ತೃಷ್ಣಾ -ಕ್ರಿಮಿ ವಿಷಾಪಹಾ || (ಭಾ.ಪ್ರ. 94.)

   ಜಾಪತ್ರೆಯು ಲಘು, ಸೀ, ಕಟು, ಉಷ್ಣ, ರುಚಿಕರ, ವರ್ಣಕರ, ಮತ್ತು ಕಫ,ಕೆಮ್ಮು, ವಾಂತಿ, ಉಬ್ಬಸ, ಬಾಯಾರಿಕೆ, ಕ್ರಿಮಿ, ವಿಷ, ಇವುಗಳನ್ನು ಪರಿಹರಿಸತಕ್ಕಂಧಾದ್ದು.

29. ಕರ್ಪೂರಃ ಶೀತಲೋ ವೃಷ್ಯಶ್ಚಕ್ಷುಷ್ಯೂಲೇಖನೋ ಲಘುಃ |

       ಸುರಭಿರ್ಮಧುರಸ್ತಿಕ್ತಃ ಕಫಪಿತ್ತವಿಷಾವಹಃ ||
       ದಾಹತೃಪ್ಲಾಸ್ಯವೈರಸ್ಯಮೇದೋದೌರ್ಗಂಧ್ಯನಾಶನಃ ||ಕರ್ಪೂರದ  ಕರ್ಪೂರೋ ದ್ವಿವಿಧಃ ಪ್ರೋಕ್ತಃ ಪಕ್ವಾಪಕ್ವ ಪ್ರಭೇದತಃ |
 ಗುಣ   ಪಕ್ವಾತ್ಕರ್ಪೂರತಃ ಪ್ರಾಹುರಪಕ್ವಂ ಗುಣವತ್ತರಂ ||
       ಚೀನಾಕಸಂಜ್ಞಃ ಕರ್ಪೂರಃ ಕಫಕ್ಷಯಕರಃ ಸ್ಮೃತಃ ||
       ಕುಷ್ಠ ಕಂಡೂವಮಿಹರಸ್ತಧಾತಿಕ್ತರಸಶ್ಚಸಃ|(ಭಾ. ಪ್ರ. 91.) 
 ಕರ್ಪೂರವು ಶೀತಕಾರಿ, ವೃಷ್ಯ, ಕಣ್ಣಿಗೆ ಹಿತವಾದದ್ದು, ಲೇಖನ, ಲಘು, ಸುವಾಸನೆ ಯುಳ್ಳದ್ದು, ಸೀ, ಕಹಿ, ಕಫಪಿತ್ತವಿಷಗಳನ್ನು ಪರಿಹರಿಸುವಂಧಾದ್ದು; ಮತ್ತು ಉರಿ, ಬಾಯಾ ರಿಕೆ, ಬಾಯಿ ಒಣಗುವಿಕೆ, ಮೇದಸ್ಸು, ದುರ್ವಾಸನೆ, ಇವುಗಳನ್ನು ನಾಶಮಾಡುವದು. ಕರ್ಪೂರದಲ್ಲಿ ಅಡಿಗೆ ಕರ್ಪೂರ, ಹಸಿ ಕರ್ಪೂರ, ಎಂಬ ಎರಡು ಭೇದಗಳಿವೆ; ಅವುಗಳೊಳಗೆ ಹಸಿ ಕರ್ಪೂರವೇ ಹೆಚ್ಚು ಗುಣವುಳ್ಳದ್ದು, ಚೀನೀಕರ್ಪೂರವು ಕಫವನ್ನು ಕಡಿಮೆ ಮಾಡುತ್ತದೆ; ಕುಷ್ಠ-ತುರಿಕೆ-ವಾಂತಿಗಳನ್ನು ಪರಿಹರಿಸತಕ್ಕಂಧಾದ್ದು; ಮತ್ತು ಕಹಿರಸವುಳ್ಳದ್ದಾ

ಗಿರುತ್ತದೆ.

30. ಛತ್ರಧಾರಣ ವರ್ಷಾನಿಲರಜೋಘರ್ವಹಿಮಾದೀನಾಂ ನಿವಾರಣಂ |

    ಗುಣ    ವರ್ಣ್ಯಂ ಚಕ್ಷುಷ್ಯಮೌಜಸ್ಯಂ ಶಂಕರಂ ಛತ್ರಧಾರಣಂ||
                                  (ಸು. 506.) 

ಕೊಡೆಯನ್ನು ಹಿಡಕೊಳ್ಳುವದರಿಂದ ಮಳೆ, ಗಾಳಿ, ದೂಳು, ಬಿಸಿಲು, ಹಿಮ, ಮುಂತಾ ದವುಗಳ ನಿವಾರಣೆಯಾಗುವದಲ್ಲದೆ, ಅದು ಕಣ್ಣುಗಳಿಗೆ ಹಿತವಾದದ್ದು, ವರ್ಣವನ್ನು ಕಾಪಾಡ ತಕ್ಕಂಧಾದ್ದು, ತೇಜೋವೃದ್ಧಿ ಕರ, ಮತ್ತು ಶುಭಕರ.

31. ಶುನಃ ಸರೀಸೃಪವ್ಯಾಲವಿಷಾಣಿಭ್ಯೋ ಭಯಾಪಹಂ | ದಂಡಧಾರಣ ಶ್ರಮಸ್ಖಲನದೋಷಘ್ನಂ ಸ್ಥವಿರೇ ಚ ಪ್ರಶಸ್ಯತೇ ||

 ಗುಣ     ಸತ್ವೋತ್ಸಾಹಬಲಸ್ಥೈರ್ಯಧೈರ್ಯವೀರ್ಯವಿವರ್ಧನಂ | 
         ಅವಷ್ಟಂಭಕರಂ ಚಾಪಿ ಭಯಘ್ನಂ ದಂಡಧಾರಣಂ || 
                             (ಸು.506.)