ಈ ಪುಟವನ್ನು ಪರಿಶೀಲಿಸಲಾಗಿದೆ

-223-

ದಂಟೆಯನ್ನು ಉಪಯೋಗಿಸುವದರಿಂದ ನಾಯಿ, ಹಾವು, ಬೇಟೆಮೃಗ (ಹುಲಿ ಜಾತಿ), ಕೋಡುಮೃಗ, ಇವುಗಳ ಭಯ ಹೋಗುವದಲ್ಲದೆ, ಶ್ರಮ ಮತ್ತು ಜಾರಿಬೀಳುವ ಸಂಭವ ನಿವಾರಣೆಯಾಗುವದು. ಮುದಿಪ್ರಾಯದಲ್ಲಿ ಪ್ರಶಸ್ತವಾದದ್ದು. ಅದು ಆಧಾರಕರವಾಗಿ, ಭಯವನ್ನು ನಿವಾರಿಸಿ, ಸತ್ವ, ಉತ್ಸಾಹ, ಬಲ, ಸ್ಥಿರತೆ, ಧೈರ್ಯ, ಮತ್ತು ವೀರ್ಯ, ಇವು ಗಳನ್ನು ವೃದ್ಧಿಪಡಿಸುವದು.

32. ಬಿಸಿಲುನೆರಳು ಆತಪಃ ಪಿತ್ತ-ತೃಷ್ಣಾಗ್ನಿ-ಸ್ವೇದ-ಮೂರ್ಚ್ಛಾ -

   ಗಳ ಗುಣ   ಭ್ರಮಾಸ್ರಕೃತ |  
           ದಾಹ-ವೈವರ್ಣ್ಯಕಾರೀ ಚ ಛಾಯಾ ಚೈತಾನಪೋಹತಿ|
                               (ಸು. 507.)
ಬಿಸಿಲು ಪಿತ್ತವನ್ನೂ, ಬಾಯಾರಿಕೆಯನ್ನೂ, ಅಗ್ನಿಯನ್ನೂ, ಬೆವರನ್ನೂ,ಮೂರ್ಚ್ಛೆಯನ್ನೂ, ಭ್ರಮೆಯನ್ನೂ, ರಕ್ತಪ್ರಕೋಪವನ್ನೂ, ಮೈಯುರಿಯನ್ನೂ, ವರ್ಣವಿಕಾರವನ್ನೂ ಉಂಟು ಮಾಡುತ್ತದೆ. ನೆರಳು ಈ ದೋಷಗಳನ್ನು ದೂರ ಮಾಡುತ್ತದೆ.

33. ಅಧ್ವಾ ವರ್ಣ-ಕಫ-ಸ್ಧೌಲ್ಯ-ಸೌಕುಮಾರ್ಯ-ವಿನಾಶನಃ |

       ಅತ್ಯಧ್ವಾ ವಿಪರೀತೋSಸ್ಮಾಜ್ಜರಾ-ದೌರ್ಬಲ್ಯ ಕೃಚ್ಚ ಸಃ  || ಚಂಕ್ರಮಣ ಯತ್ತು ಚಂಕ್ರಮಣಂ ನಾತಿದೇಹಪೀಡಾಕರಂ ಭವೇತ್ |
ಗುಣ    ತದಾಯುರ್ಬಲಮೇಧಾಗ್ನಿಪ್ರದಮಿಂದ್ರಿಯಬೋಧನಂ || 
                            (ಸು. 506.)
ದಾರಿ ನಡೆಯುವದರಿಂದ ವರ್ಣ, ಕಫ, ಸ್ದೂಲತೆ, ಎಳೇತನ, ಈ ದೋಷಗಳು ನಾಶ ವಾಗುವವು, ಅತಿಯಾಗಿ ದಾರಿ ನಡೆಯುವದು ಇದಕ್ಕೆ ವಿರುದ್ಧ ಗುಣವುಳ್ಳದ್ದಾಗಿ, ಮುದಿತನ ವನ್ನೂ, ಬಲಹೀನತೆಯನ್ನೂ, ಉಂಟುಮಾಡುವದು. ದೇಹಕ್ಕೆ ಅತಿಪೀಡೆಯನ್ನುಂಟುಮಾ ಡದ ತಿರುಗಾಡುವಿಕೆಯಿಂದ ಆಯುಸ್ಸೂ,ಬಲವೂ, ಜ್ಞಾನಶಕ್ತಿಯೂ, ಜರರಾಗ್ನಿಯೂ, ವೃದ್ಧಿಯಾಗಿ, ಇಂದ್ರಿಯಗಳು ಚುರುಕಾಗುವವು.

34. ವ್ಯಾಯಾಮ ಶರೀರಾಯಾಸಜನನಂ ಕರ್ಮ ವ್ಯಾಯಾಮಸಂಜ್ಞೆತಂ‌‌|

                                  (ಸು. 503.)

ಶರೀರಕ್ಕೆ ಆಯಾಸವನ್ನುಂಟುಮಾಡುವ ಕೆಲಸ(ಕುಸ್ತಿ ಮುಂತಾದ್ದ)ಕ್ಕೆ ವ್ಯಾಯಾಮ ಎಂತ ಹೆಸರು.

     ಲಾಘವಂ ಕರ್ಮಸಾಮರ್ಧ್ಯ೦ ವಿಭಕ್ತಘನಗಾತ್ರತಾ | 
     ದೋಷಕ್ಷಯೋSಗ್ನಿವೃದ್ಧಿಶ್ಚ ವ್ಯಾಯಾಮಾದುಪಚಾಯತೇ || 
     ವ್ಯಾಯಾಮದೃಢಗಾತ್ರಸ್ಯ ವ್ಯಾಧಿರ್ನಾಸ್ತಿ ಕದಾಚನ || 
     ವಿರುದ್ಧಂ ವಾ ವಿದಗ್ಧಂ ವಾ ಭುಕ್ತಂ ಶೀಘ್ರಂ ವಿಪಚ್ಯತೇ !! 
     ಭವಂತಿ ಶೀಘ್ರಂ ನೈತಸ್ಯ ದೇಹೇ ಶಿಧಿಲತಾದಯಃ |
     ನ ಚೈನಂ ಸಹಸಾsಕ್ರಮ್ಯ ಜರಾ ಸಮಧಿರೋಹತಿ ||