ಈ ಪುಟವನ್ನು ಪರಿಶೀಲಿಸಲಾಗಿಲ್ಲ.



                        -239-                            ಆ XII
      ಸ್ರಾವ-ರಕ್ತಪಿತ್ತ-ಶ್ರಮ-ಕ್ಲಮ-ಹರಂ ಪಾಪ್ಮಾಪಹಂ ಬಲ್ಯಂ ವೃಷ್ಯಂ 
      ವಾಜೀಕರಣಂ ರಸಾಯನಂ ಮೇಧ್ಯಂ ಸಂಧಾನಮಾಸ್ಪಾಪನಂ ವಯಃ
      ಸ್ಧಾಪನಮಾಯುಷ್ಯಂ ಜೀವನಂ ಬೃಂಹಣಂ ವಮನಂ ವಿರೇಚನಂ ಚ 
      ತುಲ್ಯಗುಣತ್ವಾಚ್ಚೌಜಸೋ ವರ್ಧನಮಿತಿ ಬಾಲ-ವೃದ್ದ-ಕ್ಷತ-ಕ್ಷೀಣಾ
      ನಾಂ ಕ್ಷುದ್ವ್ಯವಾಯವ್ಯಾಯಾಮಕರ್ಶಿತಾನಾಂ ಚ ಪಧ್ಯತಮಂ | (ಸು.175.)
 ಸರ್ವ ಜಾತಿಯ (ದನ, ಆಡು, ಒಂಟೆ, ಕುರಿ, ಎಮ್ಮೆ, ಕುದುರೆ, ನಾರಿ, ಆನೆ) ಹಾಲೂ 

ಹುಟ್ಟಿನಿಂದಲೇ ಸಾತ್ಮ್ಯವಾದದ್ದರಿಂದ, ಸರ್ವ ಪ್ರಾಣಿಗಳಿಗೂ ನಿಷಿದ್ಧವಲ್ಲದ್ದಾಗಿರುತ್ತದೆ. ವಾತ, ಪಿತ್ತ, ರಕ್ತಸಂಬಂಧವಾದ ರೋಗಗಳಲ್ಲಿಯೂ, ಮನೋವಿಕಾರಗಳಲ್ಲಿಯೂ, ಉಪಯೋಗಿಸುವಲ್ಲಿ ವಿರೋಧವಿಲ್ಲ. ಹಳೆದಾದ ಜ್ವರ, (ಹೊಸ ಜ್ವರದಲ್ಲಿ ಕೂಡದೆಂತ ಪ್ರತ್ಯೇಕ ವಿಧಿ ಉಂಟು), ಕೆಮ್ಮು, ಉಬ್ಬಸ, ಶೋಷ, ಕ್ಷಯ, ಗುಲ್ಮ, ಹುಚ್ಚು, ಉದರವ್ಯಾಧಿ, ಮೂರ್ಚ್ಛೆ, ಭ್ರಮೆ, ಮದ, ಉರಿ, ಬಾಯಾರಿಕೆ, ಹೃದ್ರೋಗ. ವಸ್ತಿರೋಗ, ಪಾಂಡುರೋಗ, ಗ್ರಹಣೀ ದೋಷ, ಅರ್ಶಸ್ಸು, ಶೂಲೆ,' ಉದಾವರ್ತ, ಅತಿಸಾರ, ಪ್ರವಾಹಿಕಾ (ಅತಿಸಾರಭೇದ), ಯೋನಿರೋಗ, ಗರ್ಭಸ್ರಾವ, ರಕ್ತಪಿತ್ತ, ಶ್ರಮ, ಆಯಾಸ. ಇವುಗಳನ್ನು ಪರಿಹರಿಸುತ್ತದೆ, ಪಾಪದ ಬುದ್ದಿಯನ್ನು ಹೋಗಗೊಳಿಸುತ್ತದೆ, ಬಲಕೊಡುತ್ತದೆ, ವೀರ್ಯ ವೃದ್ಧಿಮಾಡಿ, ವ್ಯವಾಯಬಲವನ್ನುಂಟುಮಾಡುತ್ತದೆ; ಸರ್ವ ಧಾತುಗಳನ್ನು ಪೋಷಿಸುತ್ತದೆ; ಬುದ್ದಿಯನ್ನು ನಿರ್ಮಲಪಡಿಸುತ್ತದೆ, ಸಂಧಾನಕರ, ಆಸ್ಧಾಪನ, ವಯಃಸ್ಥಾಪನ (ಮುದಿತನವನ್ನು ದೂರ ಮಾಡುವಂಧಾದ್ದು ). ಆಯುರ್ವೃದ್ಧಿಕರ, ಒದುಕಿಸುವಂಧದ್ದು, ಪುಷ್ಟಿಮಾಡುವಂಧಾದ್ದು, ವಮನಕಾರಿ, ವಿರೇಚನಕಾರಿ ಮತ್ತು ಸಮಾನಗುಣವುಳ್ಳದ್ದಾದ್ದರಿಂದ ತೇಜೋವೃದ್ಧಿಕರ. ಆದ್ದರಿಂದ ಬಾಲರಿಗೂ, ವೃದ್ದರಿಗೂ, ಗಾಯಪಟ್ಟವರಿಗೂ. ಕ್ಷೀಣರಾದವರಿಗೂ ಮತ್ತು ಹಸಿವು, ವ್ಯವಾಯ, ವ್ಯಾಯಾಮ, ಇವುಗಳಿಂದ ಕೃಶರಾದವರಿಗೂ, ಅತ್ಯಂತ ಪಧ್ಯವಾಗಿರುತ್ತದೆ.

26.        ಪಯೋಭಿಷ್ಯಂದಿ ಗುವಾ೯ಮಂ ಪ್ರಾಯಶಃ ಪರಿಕೀತಿ೯ತಂ|

ಕಾಯಿಸಿದ ತದೇವೋಕ್ತಂ ಲಘುತರಮನಭಿಷ್ಯಂದಿ ವಶ ಹಾಲಿನ ಗುಣ. ವಜ೯ಯಿತ್ವಾ ಸ್ತ್ರಿಯಾಃ ಸ್ತನ್ಯಮಾಮಮೇವ ಹಿ ತದ್ಧಿತಂ | (ಸು. 176.) ಹಸಿ ಹಾಲು ಹೆಚ್ಚಾಗಿ ಗುರು ಮತ್ತು ಅಭಿಷ್ಯಂದಿ ಎಂತ ಪ್ರಸಿದ್ದ ; ಅದೇ ಕಾಯಿಸಿ ಬತ್ತಿಸಲ್ಪಟ್ಟರೆ, ಲಘು ಎಂತಲೂ, ಅಭಿಷ್ಯಂದ ಗುಣವಿಲ್ಲದ್ದೆಂತಲೂ ಹೇಳಲ್ಪಟ್ಟಿದೆ ಆದರೆ ಸ್ತ್ರೀಯ ಹಾಲನ್ನು ಕಾಯಿಸಕೂಡದು; ಅದು ಹಸಿಯಾಗಿಯೇ ಹಿತವಾಗಿರುತ್ತದೆ. 27. ವರ್ಜ್ಯವಾದ ಅನಿಷ್ಟಗಂಧಮಮ್ಮಂ ಚ ವಿವರ್ಣಂ ವಿರಸಂ ಚ ಯತ್ |

     ಹಾಲು    ವರ್ಜ್ಯ೦ ಸಲವಣಂ ಕ್ಷೀರಂ ಯಚ್ಚ ವಿಗ್ರಧಿತಂ ಭವೇತ್ ||
                                         (ಸು. 176.) 

ಅಹಿತ ವಾಸನೆಯುಳ್ಳದ್ದೂ, ಹುಳಿಯಾದದ್ದೂ, ವರ್ಣಭೇದವುಳ್ಳದ್ದೂ, ರಸಭೇದವುಳ್ಳದ್ದೂ, ಉಪ್ಪಿನಿಂದ ಕೂಡಿಕೊಂಡಿರುವದೂ, ಕೆಟ್ಟು ಗಟ್ಟಿಯಾದದ್ದೂ, ಆದ ಹಾಲನ್ನು ವರ್ಜಿಸತಕ್ಕದ್ದು.