ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆ XII

                 -238-

21. ಸೀಯಾಳದ ಸ್ನಿಗ್ಧಂ ಸ್ವಾದು ಹಿಮಂ ಹೃದ್ಯಂ ದೀಪನಂ ವಸ್ತಿಶೋಧನಂ| ಸೀರಿನ ಗುಣ ವೃಷ್ಯಂ ಪಿತ್ತಪಿಪಾಸಾಘ್ನಂ ನಾರಿಕೇಲೋದಕಂ ಗುರು ||

                                  (ಸು. 174.)
  (ಎಳೇ) ತೆಂಗಿನಕಾಯಿಯ ನೀರು ಗುರು,ಸ್ನಿಗ್ಧ,ಸೀ,ಶೀತ,ಮನೋಹರ,ಆಗ್ನಿದೀಪನ   ಕಾರಿ,ವಸ್ತಿಶೋಧನಕಾರಿ, ವೃಷ್ಯ ಮತ್ತು ಪಿತ್ತವನ್ನೂ, ಬಾಯಾರಿಕೆಯನ್ನೂ ಪರಿಹರಿಸ

ತಕ್ಕಂಧಾದ್ದು. 22. ಲಿಂಬೆಪಾನಕದ ನಿಂಬೂಫಲಭವಂ ಪಾನಮತ್ಯಮ್ಲಂ ವಾತನಾಶನಂ|

      ಗುಣ   ವಹ್ನಿದೀಪ್ತಿಕರಂ ರುಚ್ಯಂ ಸಮಸ್ತಾಹಾರಪಾಚಕಂ ||
                                    (ಭಾ ಪ್ರ. 168.)
(ಒಂದು ಪಾಲು ಲಿಂಬೇ ರಸಕ್ಕೆ ಆರು ಪಾಲು ಶರ್ಕರೋದಕ ಮಿಶ್ರಮಾಡಿ, ಲವಂಗದ
ಮತ್ತು ಕಾಳುಮೆಣಸಿನ ಪುಡಿ ಧೂಳಿಸಿದ) ಲಿಂಬೆಪಾನಕವು ಅತಿ ಹುಳಿ, ವಾತನಾಶನ, ಅಗ್ನಿ
ದೀಪನಕಾರಿ, ರುಚಿಕರ ಮತ್ತು ಸಮಸ್ತ ಆಹಾರವನ್ನು ಪಾಚನಮಾಡುವ ಶಕ್ತಿಯುಳ್ಳದ್ದು.

23. ಹುಳಿಪಾನಕದ ಅಮ್ಲಿಕಾಫಲಸಂಭೂತಂ ಪಾನಕಂ ವಾತನಾಶನಂ|

     ಗುಣ       ಪಿತಶ್ಲೇಷ್ಮಕರಂ ಕಿಂಚಿತ್ ಸುರುಚ್ಯಂ ವಹಿಬೋಧನಂ ||
                            (ಭಾ. ಪ್ರ. 168.)
(ಸಕ್ಕರೆ, ಮೆಣಸಿನ ಕಾಳು, ಲವಂಗ ಮತ್ತು ಪಚ್ಚೆಕರ್ಪೂರ, ಇವುಗಳಿಂದ ಕೂಡಿದ)

ಹುಣಸೆಹಣ್ಣನ್ನು ನೀರಿನಲ್ಲಿ ಕಿವಿಚಿ ಮಾಡಿದ ಪಾನಕವು ವಾತವನ್ನು ನಾಶಮಾಡುತ್ತದೆ; ಸ್ವಲ್ಪ ವಾಗಿ ಪಿತಶ್ಲೇಷ್ಮಗಳನ್ನು ವೃದ್ಧಿ ಮಾಡುವದು, ಒಳ್ಳೇ ರುಚಿಕರ ಮತ್ತು ಅಗ್ನಿದೀಪನಕಾರಿ

 24.       ಶರ್ಕರೋದಕಮಾಖ್ಯಾತಂ ಶುಕ್ರಲಂ ಶಿಶಿರಂ ಸರಂ |
ಸಕ್ಕರೆಪಾನಕದ   ಒಲ್ಯಂ ರುಚ್ಯಂ ಲಘು ಸ್ವಾದು ವಾತಪಿತ್ತಪ್ರಣಾಶನಂ ||
  ಗುಣ      ಮೂರ್ಜ್ವಾ-ಛರ್ದಿ-ತೃಷಾ-ದಾಹ-ಜ್ವರ-ಶಾಂತಿಕರಂ ಪರಂ | (ಭಾ. ಪ್ರ. 167.)

(ಯಾಲಕ್ಕಿ, ಲವಂಗ, ಪಚ್ಚೆಕರ್ಪೂರ ಮತ್ತು ಕಾಳುಮೆಣಸು, ಇವುಗಳಿಂದ ಕೂಡಿದ) ಸಕ್ಕರೆಪಾನಕವು ಶುಕ್ರವೃದ್ಧಿಕರ, ತಂಪು, ಸರ, ಬಲಕರ, ರುಚಿಕರ, ಲಘು, ಸ್ವಾದು, ವಾತ ಪಿತ್ತಹರ, ಮೂರ್ಚ್ಛೆ, ವಾಂತಿ, ಬಾಯಾರಿಕೆ. ಉರಿ ಮತ್ತು ಜ್ವರ, ಇವುಗಳನ್ನು ಶಮನಮಾಡತಕ್ಕಂಧಾದ್ದು ಮತ್ತು ಉತ್ತಮವಾದದ್ದು 25. ತತ್ರ ಸರ್ವಮೇವ ಕ್ಷೀರಂ ಪ್ರಾಣಿನಾಮಪ್ರತಿಷಿದ್ಧಂ ಜಾತಿಸಾತ್ಮ್ಯಾತ್ |

          ವಾತಪಿತ್ತಶೋಣಿತಮಾನಸವಿಕಾರೆಷ್ವವಿರುದ್ದಂ | ಜೀಣ೯ಜ್ವರ-ಕಾಸ-
ಹಾಲಿನ      ಶ್ವಾಸ-ಶೋಷ-ಕ್ಷಯ-ಗುಲ್ಮೋನ್ಮಾದೋದರ-ಮೂಚ್ಛಾ೯-ಭ್ರಮ-ಮದ
ಪ್ರಶಂಸಾ     ದಾಹ-ಪಿಪಾಸಾ-ಹೃದ್ವಸ್ತಿದೋಷ-ಪಾಂಡುರೋಗ-ಗ್ರಹಣೀ-ದೋಷಾ
          ರ್ಶಃ-ಶೂಲೋದಾವರ್ತಾತಿಸಾರ-ಪ್ರವಾಹಿಕಾ-ಯೋನಿರೋಗ-ಗರ್ಭಾ