ಈ ಪುಟವನ್ನು ಪರಿಶೀಲಿಸಲಾಗಿಲ್ಲ.
-248-
XIII ನೇ ಅಧ್ಯಾಯ. ಘೃತ ತೈಲಾದಿ ಸ್ನೇಹಗಳು.
1. ಘೃತ೦ ತು ಸೌಮ್ಯಂ ಶೀತವೀರ್ಯ೦ ಮೃದು ಮಧುರಮಲ್ಪಾಭಿಷ್ಯಂದಿ ಸ್ನೇಹನಮುದಾವರ್ತೋನ್ಮಾದಾಪಸ್ಮಾರಶೂಲಜ್ವರಾನಾಹವಾತಪಿತ್ತಪ್ರ
ದನದ ತುಪ್ಪದ ಗುಣ ಶಮನಮಗ್ನಿದೀಪನ೦ ಸ್ಮೃತಿ-ಮತಿ-ಮೇಧಾ-ಕಾಂತಿ-ಸ್ವರ-ಲಾವಣ್ಯ-
ಸೌಕುಮಾರ್ಯೌಜಸ್ತೇಜೋ-ಒಲಕರಮಾಯುಷ್ಯಂ ವೃಷ್ಯ೦ ಮೇ ಧ್ಯ೦ ವಯಃಸ್ದಾಪನ೦ ಗುರು ಚಕ್ಷುಷ್ಯಂ ಶ್ಲೇಷ್ಮಾಭಿವರ್ಧನಂ ಪಾಪ್ಮಾ ಲಕ್ಶ್ಮೀಪ್ರಶಮನಂ ವಿಷಹರಂ ರಕ್ಷೋಘ್ನ೦ ಚ | (ಸು 179-80.) ತುಪ್ಪವು ಸೋಮಗುಣವುಳ್ಳದ್ದು, ಶೀತವೀರ್ಯವುಳ್ಳದ್ದು, ಮೃದು, ಮಧುರ, ಅಲ್ಪಾಭಿ ಷ್ಯ೦ದಿ ಗುಣವುಳ್ಳದ್ದು, ಸ್ನಿಗ್ದವಾದದ್ದು, ಉದಾವರ್ತ-ಉನ್ಮಾದ-ಅಪಸ್ಮಾರ-ಶೂಲೆ-(ಹಳೇ) ಜ್ವರ-ಆನಾಹ- ವಾತ-ಪಿತ್ತಶಮನಕರ, ಅಗ್ನಿದೀಪನಕಾರಿ, ನೆನಪು-ಬುದ್ದಿ -ಜ್ಞಾನ-ಕಾಂತಿ-ಸ್ವರಲಾವಣ್ಯ-ಎಳೆತನ- ಪರಾಕ್ರಮ- ಓಜೋಗುಣ-ಬಲ ಇವುಗಳನ್ನು ಕೊಡತಕ್ಕಂಧಾದ್ದು, ಆಯು ರ್ವೃದ್ದಿಮಾಡತಕ್ಕಂಧಾದ್ದು , ಶುಕ್ರವೃದ್ಧಿ ಕರ, ಪವಿತ್ರವಾದದ್ದು, ಪ್ರಾಯಸ್ಥಿತಿಯನ್ನು ಕಾಪಾಡ ತಕ್ಕಂಧಾದ್ದು, ಗುರು, ಕಣ್ಣುಗಳಿಗೆ ಗುಣಕರ, ಕಫವೃದ್ಧಿ ಕರ, ದುಷ್ಟತನವನ್ನೂ, ಕಲಿಯನ್ನೂ ಶಮನ ಮಾಡತಕ್ಕಂಧಾದ್ದು , ವಿಷಹರ ಮತ್ತು ರಕ್ಷೋಬಾಧೆಯನ್ನು ನಾಶಮಾಡತಕ್ಕಂಧಾದ್ದು ಆಗಿರುತ್ತದೆ
2. ಮಾಹಿಷಂ ತು ಘೃತ೦ ಸ್ವಾದು ಪಿತ್ತರಕ್ತಾನಿಲಾಪಹ೦ | ಎಮ್ಮೆತುಪ್ಪದ ಗುಣ ಶೀತಲಂ ಶ್ಲೇಷ್ಮಲ೦ ವೃಷ್ಯಂ ಗುರು ಸ್ವಾದು ಎಪಚ್ಯತೇ ||
(ಭಾ. ಪ್ರ. 180.) ಎಮ್ಮೆತುಪ್ಪವು ಸ್ವಾದು, ಪಿತ್ತರಕ್ತವಾತಗಳನ್ನು ಪರಿಹರಿಸತಕ್ಕಂಧಾದ್ದು, ಶೀತಲ, ಕಫಕರ, ವೃಷ್ಯ, ಗುರು ಮತ್ತು ಸ್ವಾದುಪಾಕವುಳ್ಳದ್ದು ಆಗಿರುತ್ತದೆ.
3. ಅಜಮಾಜ್ಯಂ ಕರೋತ್ಯಗ್ನಿ೦ ಚಕ್ಷುಷ್ಯಂ ಬಲವರ್ಧನಂ | ಆಡಿನ ತುಪ್ಪದ ಗುಣ ಕಾಸೇ ಶ್ವಾಸೇ ಕ್ಷಯೇ ಚಾಪಿ ಹಿತಂ ಪಾಕೇ ಭವೇತ್ಕಟು |
(ಭಾ. ಪ್ರ. 180.) ಆಡಿನ ತುಪ್ಪವು ಅಗ್ನಿಕಾರಿ, ಕಣ್ಣುಗಳಿಗೆ ಹಿತ, ಬಲವೃದ್ಧಿಕರ, ಕಟುಪಾಕವುಳ್ಳದ್ದು ಮತ್ತು ಕೆಮ್ಮು-ಉಬ್ಬಸ-ಕ್ಷಯಗಳಲ್ಲಿ ಸಹ ಹಿತವಾದದ್ದು ಆಗಿರುತ್ತದೆ.
4. ವರ್ಷಾದೂರ್ಧ್ವಂ ಭವೇದಾಜ್ಯಂ ಪುರಾಣಂ ತತ್ರಿದೋಷನುತ್ |
ಹಳೇ ತುಪ್ಪದ ಗುಣ ಮೂಚ್ಛಾ೯ ಕುಷ್ರ-ವಿಷೋನ್ಮಾದಾಪಸ್ಮಾರ-ತಿಮಿರಾಪಹಂ || ಯಧಾ ಯಧಾsಖಿಲಂ ಸರ್ಪಿ8 ಪುರಾಣಮಧಿಕಂ ಭವೇತ್ |