ಈ ಪುಟವನ್ನು ಪರಿಶೀಲಿಸಲಾಗಿಲ್ಲ.



                          -249-
                                                       ಆ XIII
              ತಧಾ ತಧಾ ಗುಣೈ: ಸ್ವೈ: ಸ್ವೈರಡಧಿಕ೦ ತದುದಾಹೃತಂ ||
                                             (ಭಾ. ಪ್ರ 181.) 

ಒಂದು ವರ್ಷಕ್ಕೆ ಮೇಲಿನ ತುಪ್ಪವು ಹಳೇದು, ಅದು ತ್ರಿದೋಷಹರ; ಮತ್ತು ಮೂರ್ಚ್ಛೆ-ಕುಷ್ಠ -ವಿಷ- ಉನ್ಮಾದ-ಅಪಸ್ಮಾರ-ತಿಮಿರಗಳನ್ನು ಪರಿಹರಿಸತಕ್ಕಂಧಾದ್ದು. ತುಪ್ಪವು, ಯಾವ ಜಾತಿದಾದರೂ, ಹಳೇದಾದ ಹಾಗೆ, ಅದರಲ್ಲಿ ಅದರದರ ಗುಣಗಳು ಅಧಿಕವಾಗುವವು ಎಂತ ಹೇಳಲ್ಪಟ್ಟದೆ.

5. ಯೋಜಯೇನ್ನವಮೇವಾಜ್ಯ೦ ಭೋಜನೇ ತರ್ಪಣೇ ಶ್ರಮೇ |

ಹೊಸ ತುಪ್ಪದ       ಬಲಕ್ಷಯೇ ಪಾಂಡುರೋಗೇ 
                    ಕಾಮಲಾನೇತ್ರರೋಗಯೋಃ ||
ಉಪಯೋಗ                                  (ಭಾ. ಪ್ರ 181.) 
 ಭೋಜನದಲ್ಲಿ, ತರ್ಪಣವಿಧಿಯಲ್ಲಿ, ಶ್ರಮದಲ್ಲಿ, ಬಲಕ್ಷಯದಲ್ಲಿ, ಪಾಂಡುರೋಗದಲ್ಲಿ, ಕಾಮಿಲೆಯಲ್ಲಿ ಮತ್ತು ನೇತ್ರರೋಗದಲ್ಲಿ ಹೊಸತಾದ ತುಪ್ಪವನ್ನೇ ಉಪಯೋಗಿಸತಕ್ಕದ್ದು.

6. ರಾಜಯಕ್ಷ್ಮಣಿ ಬಾರೇ ಚ ವೃದ್ಧೇ ಶ್ಲೇಷ್ಮಕೃತೇ ಗದೇ ||

                   ರೋಗೇ ಸಾಮೇ ವಿಷೂಚ್ಯಾ೦ ಚ ವಿಬಂಧೇ ಚ ಮದಾತ್ಯಯೇ || 
ತುಪ್ಪ ಪ್ರಶಸ್ತ ವಲ್ಲದವರು   ಜ್ವರೇ ಚ ದಹನೇ ಮಂದೇ ನ ಸರ್ಪಿರ್ಬಹು ಮನ್ಯತೇ |
                                                (ಭಾ. ಪ್ರ. 181.)
  ರಾಜಯಕ್ಷ್ಮ, ಕಫದಿಂದುಂಟಾದ ರೋಗ, ಆಮವುಳ್ಳ ರೋಗ, ವಿಷೊಚಿಕಾ, ಹೊಟ್ಟೆ ಬಿಗಿಯೋಣ, ಮದಾತ್ಯಯ (ಹಳೇದಲ್ಲದ) ಜ್ವರ ಮತ್ತು ಅಗ್ನಿಮಾಂದ್ಯ, ಈ ರೋಗಗಳಲ್ಲಿಯೂ, ಬಾಲರ ಮತ್ತು ವೃದ್ಧರ ವಿಷಯದಲ್ಲಿಯೂ, ಹೆಚ್ಚು ತುಪ್ಪ ಪ್ರಶಸ್ತವಾಗಿರುವದಿಲ್ಲ.
                 ಬಾಲೇ ವೃದ್ದೇ ಕ್ಷಯೇ ಚಾಮೇ ಕಫರೋಗೇ ಮದಾತ್ಯಯೇ |
                  ಬದ್ಧ ವಿಟ್ಕೇ ಜ್ವರೇ ಚೈವಾಲ್ಪಾಲ್ಪಂ ಚೈವ ಪ್ರದೀಯತೇ ||
                                                 (ನಿ. ರತ್ನಾಕರ.) 
  ಬಾಲವೃದ್ಧರ ಸಂಗತಿಯಲ್ಲಿಯೂ, ಕ್ಷಯ-ಆಮರೋಗ-ಕಫರೋಗ-ಮದಾತ್ಯಯ-ಮಲ ಬದ್ಧತೆ ಮತ್ತು ಜ್ವರ, ಈ ರೋಗಗಳಲ್ಲಿಯೂ ತುಪ್ಪವನ್ನು ಅಲ್ಪಾಲ್ಪವಾಗಿ ಕೊಡುತ್ತಾರೆ.

7. ನವನೀತಂ ಪುನಃ ಸದ್ಯಸ್ಕ೦ ಲಘು ಸುಕುಮಾರಂ ಮಧುರಂ ಕಷಾಯ ಮಾಷದಮ್ಲ೦

            ಶೀತಲಂ ಮೇಧ್ಯಂ ದೀಪನಂ ಹೃದ್ಯಂ ಸಂಗ್ರಾಹಿ ಪಿತ್ತಾ
            ನಿಲಹರಂ ವೃಷ್ಯಮವಿದಾಹಿ ಕ್ಷಯ-ಕಾಸ-ಶ್ವಾಸ-ವ್ರಣಾರ್ಶೋsರ್ದಿತಾಪ
ಬೆಣ್ಣೆಯ ಗುಣ    ಹಂ* ಗುರು ಕಫಮೇದೋವಿವರ್ಧನಂ ಬಲಕರಂ ಬೃಂಹಣಂ ಶೋಷ
             ಘ್ನ೦ ವಿಶೇಷತೋ ಬಾಲಾನಾಂ ಪ್ರಶಸ್ಯತೇ | ಕ್ಷೀರೋತ್ಥ೦ ಪುನರ್ನವ 
            ನೀತಮುತ್ಕೃಷ್ಟಸ್ನೇಹಂ ಮಾಧುರ್ಯಯುಕ್ತಮತಿಶೀತಂ ಸೌಕುಮಾ
                                                      32