ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆ XIII.

              -252-

ಕೇಶ್ಯಂ ರಸೇ ಚ ಪಾಕೇ ಚ ಮಧುರಂ ಚ ರುಚಿಪ್ರದಂ | ಹೃದ್ಯಂ ಚ ವಾತಪಿತ್ತಘ್ನಂ ತಜ್ಜೀಣ‌ಂ ಗುರು ವಾತಹಂ!) (ನಿ. ರ.) ತೆಂಗಿನಕಾಯಿಯ ಹಾಲನ್ನು ಮಣ್ಣಿನ ಗಡಿಗೆಯಲ್ಲಿ ಹಾಕಿ, ವಸ್ತ್ರದಿಂದ ಬಾಯಿಕಟ್ಟಿ,

ರಾತ್ರಿಯಲ್ಲಿ ಮನೆಯ ಹೊರಗೆ ಇರಿಸಿ, ಪ್ರಾತಃಕಾಲದಲ್ಲಿ ಅದನ್ನು ಕಡೆದು, 

ಬೆಣ್ಣೆಯನ್ನು ತೆಗೆಯಬೇಕು. ಆ ಬೆಣ್ಣೆಯನ್ನು ಕಾಯಿಸಿ ಬಂದ ಖೊಬ್ಬರಿತುಪ್ಪವೂ ಬ್ರಂಹಣ, ಬಲವೃದ್ಧಿ ಕಾರಿ, ಕೇಶಕ್ಕೆ ಒಳ್ಳೇದಾದದ್ದು, ರಸದಲ್ಲಿಯೂ, ಪಾಕದಲ್ಲಿ ಯೂ ಸೀ, ರುಚಿಕರ, ಮನೋ ಹರವಾದದ್ದು ಮತ್ತು ವಾತಪಿತ್ತನಾಶಕರ. ಅದು ಹಳೇದಾದರೆ ಗುರು ಮತ್ತು ವಾತಹರ.

    13. ಫಲೋದ್ಭವಾನಿ ತೈಲಾನಿ ಯಾನ್ಯನುಕ್ತಾನಿ* ಕಾನಿಚಿತ್ ||

- ಗುಣಾನ್ ಕರ್ಮ ಚ ವಿಜ್ಞಾಯ ಫಲವತ್ತಾಗಿ ನಿರ್ದಿಶೇತ್ ||

        ಯಾವಂತಃ ಸ್ಥಾವರಾಃ ಸ್ನೇಹಾಕ ಸಮಾಸಾತ್ಪರಿಕೀರ್ತಿತಾಃ | "ಇತರ ತೈಲಗಳ

ಗುಣಗಳು ಸರ್ವೇ ತೈಲಗುಣಾ ಜ್ಞೇಯೂಃ ಸರ್ವೇ ಚಾನಿಲನಾಶನಾಃ || ಸರ್ವೇಭ್ಯಸ್ತ್ವಿ ತೈಲೇಭ್ಯಸ್ತಿಲತೈಲಂ ಪ್ರಶಸ್ಯತೇ | ನಿಷ್ಪತ್ತೇದ್ಗುಣತ್ವಾಚ್ಚ ತೈಲತ್ವ ಮಿತರೇಷ್ಪಪಿ|| (ಸು. 183.) ಫಲದಿಂದ ತೆಗೆದ ತೈಲಗಳು ಪ್ರತ್ಯೇಕವಾಗಿ ಹೇಳಲ್ಪಡದ ಯಾವವಾದರೂ, ಆಯಾ ಫಲದ ಗುಣಕರ್ಮಗಳನ್ನು ತಿಳಿದು ಆಯಾ ತೈಲದ ಗುಣಕರ್ಮಗಳನ್ನು ನಿಶ್ಚಯಿಸತಕ್ಕದ್ದು ಒಟ್ಟಾರ, ಸ್ಥಾವರಸ್ನೇಹಗಳೆಲ್ಲಾ ಎಳ್ಳೆಣ್ಣೆಯಂತೆಯೇ ಗುಣವುಳ್ಳವೆಂತಲೂ, ವಾಯುವನ್ನು ಪರಿಹಾರಮಾಡತಕ್ಕವು ಎಂತಲೂ ತಿಳಿಯತಕ್ಕದ್ದುಆದರೆ ಎಲ್ಲಾ ತೈಲಗಳೊಳಗೆ ಎಳ್ಳೆಣ್ಣೆ ಯೇ ಪ್ರಶಸ್ತ. ಅದರ ಹಾಗಿನ ಉತ್ಪತ್ತಿ ಮತ್ತು ಗುಣವಿರುವದರಿಂದ ಮಿಕ್ಕವುಗಳಿಗೂ ತೈಲ ಎಂಬ ಹೆಸರಾಗಿರುತ್ತದೆ ಷರಾ ಗಿ ಯಾನ್ಯುಕ್ತಾನೀಹ' ಎಂತಲೂ, 'ಯಾನೀತ್ಯುಕ್ತಾಸಿ' ಎಂತಲೂ ಪಾರಾಂತರಗಳು ಇದ್ದ ಹಾಗೆ ಕಾಣುತ್ತದೆ, ಅವುಗಳಿಗಿಂತಲೂ ಈ ಪಾರವೇ ಸರಿ ಕಾಣುತ್ತದೆ |