ಈ ಪುಟವನ್ನು ಪರಿಶೀಲಿಸಲಾಗಿಲ್ಲ.



                               - 253 -
                             XIV ನೇ ಅಧ್ಯಾಯ. 
                 ನಾಧಾರಣನಾಗಿ ಉಪಯೋಗಿಸಲ್ಪಡುವ ಆಹಾರವದಾರ್ಥಗಳು. 

1. ಸುದುರ್ಜರಃ ಸ್ಟಾದರಸೋ ಬೃಂಹಣಸ್ತಂಡುಲೋ ನಮಃ | 

ಅಕ್ಕಿ, ಹೊಸತು ಸಂಧಾನಕೃನ್ಮೇಹಹರಃ ಪುರಾಣಸ್ತಂಡುಲಃ ಸ್ಮೃತಃ || ಮತ್ತು ಹಳೇದು

                                              (ಸು. 231.) 
   ಹೊಸ ಅಕ್ಕಿಯು ಸೀರಸವುಳ್ಳದ್ದು ಮತ್ತು ಪುಷ್ಟಿ ಕರ, ಆದರೆ ಜೀರ್ಣಕ್ಕೆ ಬಹು ಕಷ್ಟ 

ವಾದದ್ದು. ಹಳೇ ಅಕ್ಕಿಯು ಸಂಧಾನಕರ ಮತ್ತು ಮೇಹಹರವಾದದ್ದೆಂತ ಹೇಳಲ್ಪಟ್ಟಿದೆ.

2  ಧೌತಸ್ತು ವಿಮಲಃ ಶುದ್ಧೋ ಮನೋಜ್ಞಃ ಸುರಭಿಃ ಸಮಃ |

ಅನ್ನ,ಬಸಿದದ್ದು ಸ್ವಿನ್ನಃ ಸುಪ್ರಸ್ತುತಸ್ತೊಷ್ಟೋ ವಿಶದಸ್ತೋದನೋ ಲಘುಃ || ಇಂಗಿಸಿದ್ದು ಅದೌತೋSಪ್ರಸ್ರುತೋsಸ್ವಿನ್ನಃ ಶೀತಶ್ಚಾಪ್ಯೋದನೋ ಗುರುಃ |

                                       (ಸು. 225 ) 
   ಅಕ್ಕಿಯನ್ನು ತೊಳೆದು, ಶೋಧಿಸಿ, ನಿರ್ಮಲಮಾಡಿಕೊಂಡು, ಸರಿಯಾಗಿ ಬೇಯಿಸಿ 

ಚೆನ್ನಾಗಿ ಬಸಿದ ಮತ್ತು ಬಿಸಿಯಾಗಿರುವ ಅನ್ನವು ಪರಿಮಳವಾಗಿಯೂ, ಮನೋಹರವಾಗಿ ಯೂ, ಅಂಟಿಲ್ಲದೆ (ಉದುರಾಗಿ)ಯೂ, ಲಘುವಾಗಿಯೂ ಇರುತ್ತದೆ. ತೊಳೆಯದೆ ಮತ್ತು ಬಸಿಯದೆ ಮಾಡಿದ, ಪಕ್ವವಾಗದ ಮತ್ತು ತಣ್ಣಗಾದ ಅನ್ನವು ಗುರುವಾಗಿರುತ್ತದೆ.

3  ಹುರಿದ ಅಕ್ಕಿ ಲಘುಃ ಸುಗಂಧಿಃ ಕಫಹಾ ವಿಜ್ಞೋಯೋ ದೃಷ್ಟ
 ಯ ಅನ್ನ ತಂಡುಲಃ |                                 (ಸು. 225.) 
   ಹುರಿದ ಅಕ್ಕಿಯು (ಅದರ ಅನ್ನ) ಲಘು, ಪರಿಮಳವುಳ್ಳದ್ದು ಮತ್ತು ಕಫಹರ ಎಂದು 

ತಿಳಿಯತಕ್ಕದ್ದು.

   ಭೃಷ್ಟತಂಡುಲಮಿಚ್ಛಂತಿ ಗರಶ್ಲೇಷ್ಮಾಮಯೇಷ್ವಸಿ || (ಚ. 176.) 

ವಿಷವಿಕಾರ ಮತ್ತು ಕಫರೋಗಗಳಲ್ಲಿ ಸಹ ಅಕ್ಕಿಯನ್ನು ಹುರಿದೇ ಉಪಯೋಗಿಸು ವದಕ್ಕೆ ಇಚ್ಛಿಸುತ್ತಾರೆ.

   ಭ್ರಷ್ಟತಂಡುಲಜಂ ರುಚ್ಯಂ ಸುಗಂಧಿ ಕಫಹೃಲ್ಲಘು | 
  ವಾತಾಸ್ಥಾಪಿತಮಂದಾಗ್ನಿವಿರಿಕ್ತಾನಾಂ ಪ್ರಶಸ್ಯತೇ |
                      (ಭಾ. ಪ್ರ. 272.) 
   ಹುರಿದ ಅಕ್ಕಿಯ ಅನ್ನವು ಲಘ, ರುಚಿಕರ, ಪರಿಮಳವುಳ್ಳದ್ದು , ಕಫಹರ, ವಾತದವ 

ರಿಗೂ, ಆಸ್ಥಾಪನವಸ್ತಿ ಉಪಯೋಗಿಸಿಕೊಂಡವರಿಗೂ, ಅಗ್ನಿಮಂದವಾದವರಿಗೂ, ಭೇದಿ ಮಾಡಿಸಿಕೊಂಡವರಿಗೂ ಪ್ರಶಸ್ತವಾದದ್ದು.