ಈ ಪುಟವನ್ನು ಪರಿಶೀಲಿಸಲಾಗಿಲ್ಲ.



                              - 255 -                      ಆ XIV

ತಕ್ಕಂಧಾದ್ದು, ವಸ್ತಿಶೋಧನಕರ, ಶ್ರಮವನ್ನೂ ಆಯಾಸವನ್ನೂ ಪರಿಹರಿಸುವಂಧಾದ್ದು ಮತ್ತು ಜ್ವರದವರಿಗೂ ಅತಿಸಾರದವರಿಗೂ ಪಧ್ಯ.

 8. ವಿಲೇಪೀ ದೀಪನೀ ಬಲ್ಯಾ ಹೃದ್ಯಾ ಸಂಗ್ರಾಹಿಣೀ ಲಘುಃ | 

ಎಲೇಪಿಯ ವ್ರಣಾಕ್ಷಿರೋಗಿಣಾಂ ಪಧ್ಯಾ ತರ್ಪಣೀ ತೃಡ್ಜ್ವರಾಪಹಾ ||

                             (ಭಾ. ಪ್ರ. 270 ) 
 ವಿಲೇಪೀ ಎಂಬ ಗಂಜಿಯು ಅಗ್ನಿದೀಪನಕಾರಿ, ಬಲಕಾರಿ, ಮನೋಹರವಾದದ್ದು, 

ಒಳ್ಳೆ ಗ್ರಾಹೀ, ಲಘು, ತೃಪ್ತಿಕರ, ಬಾಯಾರಿಕೆ ಮತ್ತು ಜ್ವರ ಪರಿಹರಿಸತಕ್ಕಂಧಾದ್ದು ಮತ್ತು ವ್ರಣದವರಿಗೂ, ನೇತ್ರರೋಗದವರಿಗೂ ಪಧ್ಯವಾದದ್ದು.

 9. ಲಾಜಮಂಡೋ ವಿಶುದ್ಧಾನಾಂ ಪಧ್ಯಃ ಪಾಚನದೀಪನಃ | 

ಅರಳಿನ ಮಂಡ ವಾತಾನುಲೋಮನೋ ಹೃದ್ಯಃ ಪಿಪ್ಪಲೀನಾಗರಾಯುತಃ || ದ ಗುಣ

                                       (ಸು. 225.) 
 ಹಿಪ್ಪಲಿ ಶುಂಠಿ ಕೂಡಿಸಿದ ಅರಳುಗಂಟೆಯ ನೀರು ಶೋಧನೆಮಾಡಿಸಿಕೊಂಡವರಿಗೆ ಪಧ್ಯ 

ವಾದದ್ದು, ದೀಪನಸಾಚನಕಾರಿ, ವಾತವನ್ನು ಸಡಿಲಿಸುವದು ಮತ್ತು ಮನೋಹರವಾದದ್ದು.

 10. ಗೊಧೂಮ ಉಕ್ತೋ ಮಧುರೋ ಗುರುಶ್ಚ ಬಲ್ಯಃ ಸ್ಛಿರಃ ಶುಕ್ರರುಚಿಪ್ರದಶ್ಜ | 

ಗೋದಿಯ ನ್ನಿಗ್ದೋSತಿಶೀತೋSನಿಲಪಿತ್ತಹಂತಾ ಸಂಧಾನಕೃತ್ ಶ್ಲೇಷ್ಮಕರಃ ಸರಶ್ಚ || ಗುಣ (ಸು. 197)

 ಗೋದಿಯು ನೀ, ಗುರು, ಬಲಕರ, ಸ್ಥಿರತ್ವವನ್ನೂ, ಶುಕ್ರವನ್ನೂ, ರುಚಿಯನ್ನೂ ಕೊಡ 

ತಕ್ಕಂಧಾದ್ದು, ನಿಗ್ಧ, ಅತಿಶೀತ, ಪಿತ್ತವಾಯುಹರ, ಸಂಧಾನಕರ, ಕಫಕರ, ಸರ.

 ಷರಾ ಹಳೇ ಗೋದಿಯಲ್ಲಿ ಕನಕರ ಗುಣ ಇಲ್ಲ
 11. ಯವಃ ಕಷಾಯೋ ಮಧುರೋ ಹಿಮಶ್ಚ ಕಟುರ್ವಿಪಾಕೇ ಕಫಪಿತ್ತಹಾರೀ |
     ವ್ರಣೇಷು ಪಧ್ಯಸ್ತಿಲವಚ್ಚ ನಿತ್ಯಂ ಪ್ರಬದ್ಧ ಮೂತ್ರೋ ಬಹುವಾತವರ್ಚಾಃ || 

ಯವ ಗೋದಿ ಸ್ಥೈರ್ಯಾಗ್ನಿಮೇಧಾಸ್ವರವರ್ಣಕೃಚ್ಚ ಸಪಿಚ್ಛಿಲಃ ಸ್ಥೂಲವಿಲೇಖನಶ್ಚ | ಯ ಗುಣ ಮೇದೋಮರುತ್ತೈಡ್ ಹರಣೋSತಿರೂಕ್ಷಃ ಪ್ರಸಾದನಃ ಶೋಣಿತಪಿತ್ತಯೋ

                                                 ಶ್ಚ || 
     ಏಭಿರ್ಗುಣೈರ್ಹೀನತರಾಂಸ್ತು ಕಿಂಚಿತ್ ವಿದ್ಯಾದ್ಯವೇಭ್ಯೋSತಿಯವಾನ್ ಎಶೇ
                                   ಪೈ || (ಸು. 196-97.) 
 ಯವಗೋದಿಯ ಚೊಗರು ಮತ್ತು ಸೀ, ತಂಪು, ಪಾಕದಲ್ಲಿ ಖಾರ, ಕಫಪಿತ್ತಹರ, 

ಎಳ್ಳಿನಂತೆ ಯಾವಾಗಲೂ ವ್ರಣಗಳಲ್ಲಿ ಪಧ್ಯ, ಮೂತ್ರವನ್ನು ತಡೆಯತಕ್ಕಂಧಾದ್ದು, ಹೆಚ್ಚು ವಾತಯುಕ್ತವಾದ ಮಲಗಳನ್ನುಂಟುಮಾಡುವಂಧಾದ್ದು, ಸ್ಥಿರತೆ, ಅಗ್ನಿ, ಜ್ಞಾನ, ಸ್ವರ, ವರ್ಣ, ಇವುಗಳನ್ನು ಮಾಡುವಂಧಾದ್ದು, ಅಂಟುಳ್ಳದ್ದು, ಸ್ಥೂಲತೆಯನ್ನು ಕಡಿಮೆಮಾಡತಕ್ಕಂಧಾದ್ದು,