- 257 -- e XIV 16, ಸೇವಿಕಾ ತರ್ಪಣೀ ಬಲ್ಯಾ ಗುರ್ವೀ ಪಿತ್ತಾನಿಲಾಪಹಾ | ಸೇಮಿಗೆ ಪಾಯ ಗ್ರಾಹಿಣೀ ಸಂಧಿಕೃದ್ರುಚ್ಚಾ ತಾಂ ಖಾದೇನ್ನಾತಿಮಾತ್ರಯಾ | ಸದ ಗುಣ (ಭಾ. ಪ್ರ. 161, ಸೇಮಿಗೆಪಾಯಸವು ಗುರು, ಬಲಕಾರಿ, ತೃಪ್ತಿಕರ, ಗ್ರಾಹಿ ಮತ್ತು ರುಚಿಕರ; ಪಿತ್ತ ವಾಯುಗಳನ್ನು ಪರಿಹರಿಸುತ್ತದೆ; ಸಂದು ಕೂಡಿಸುತ್ತದೆ, ಆದರೆ ಅದನ್ನು ಅತಿಯಾಗಿ ತಿನ್ನ ಕೂಡದು. 17 ದುಗ್ದೇನ ಸಾಜ್ಯಖಂಡೇನ ಮಂಡಕಂ ಭಕ್ಷಯೇನ್ನರಃ | ಅಧವಾ ಸಿದ್ದ ಮಾಂಸೇನ ಸತಕ್ರವಟಕೇನ ವಾ || ಮಂಡಿಗೆ ಭಕ್ಷ್ಯ ದ ಗುಣ * ಮಂಡಕೋ ಬೃಂಹಣೋ ವೃಷ್ಟೊ ಬಲ್ಯೋ ರುಚಿಕರೋ ಭೃಶಂ | ಪಾಕೇSಪಿ ಮಧುರೋ ಗ್ರಾಹೀ ಲಘುರ್ದೋಷತ್ರಯಾಪಹಾ || (ಭಾ. ಪ್ರ. 161.) ಮಂಡಿಗೆಯನ್ನು ಹಾಲು, ತುಪ್ಪ, ಸಕ್ಕರೆ ಕೂಡಿಸಿಕೊಂಡು ಅಧವಾ ಕ್ರಮದಂತೆ ಅಟ್ಟ ಮಾಂಸಯುಕ್ತವಾಗಿ, ಇಲ್ಲವೆ ಮಜ್ಜಿಗೆ ವಡೆಯೊಂದಿಗೆ, ಭಕ್ಷಿಸಬೇಕು. ಮಂಡಿಗೆಯ ಪುಷ್ಟಿ ಕರ, ವೃಷ್ಯ, ಬಲಕರ, ಒಳ್ಳೆ ರುಚಿಕರ, ಪಾಕದಲ್ಲಿಯೂ ಸೀ, ಗ್ರಾಹಿ, ಲಘು ಮತ್ತು ದೋಷಯವನ್ನು ಪರಿಹರಿಸತಕ್ಕ ಗುಣವುಳ್ಳದ್ದು ಆಗಿರುತ್ತದೆ. ಗುಣ 18. ಶುಷ್ಕಗೋಧೂಮಚೂರ್ಣೇನ ಕಿಂಚಿತ್ತುಷ್ಟಾಂ ಚ ವೋಲಿಕಾಂ | ತಸ್ತಕ ಸೈದಯೇತ್ಕೃತ್ವಾ ಭೂಯ್ಯಂಗಾರೇSಪಿ ತಾಂ ಸಚೇತ್ || ಗೋದಿ ರೊಟ್ಟಿ ಕೊಟ್ಟ ಸಿದ್ಧೈಫಾ ರೋಟಿಕಾ ಪ್ರೋಕ್ತಾ ಗುಣಾನ್ ತಸ್ಯಾಃ ಪ್ರಚಕ್ಷ್ಮಹೇ | (ಬಕರಿ)ಯ ರೋಟಿಕಾ ಬಲಕೃದ್ವೃಷ್ಯ ಬೃಂಹಣೀ ಧಾತುವರ್ಧನೀ || ವಾತಘ್ನೀ ಕಫಕೃದ್ಗರ್ವೀದೀಪ್ತಾಗ್ನೀನಾಂ ಪ್ರಪೂಜಿತಾ | (ಭಾ ಪ್ರ. 161-62.) ಗೋದಿ ಹಿಟ್ಟಿನ ಪುಡಿ ಕೂಡಿಸಿಕೊಂಡು ಸಜ್ಜಿಗೆಯಿಂದ ಸ್ವಲ್ಪ ದಪ್ಪವಾದ ಹಪ್ಪಳ ಮಾಡಿ, ಹಂಚಿನ ಮೇಲೆ ಹಾಕಿ ಕಾಯಿಸಿದನಂತರ ಒಳ್ಳೆ ಕೆಂಡದಲ್ಲಿ ಪಕ್ವಮಾಡಿದ ರೊಟ್ಟಿಯು, ಬಲಕಾರಿ, ರುಚಿಕರ, ಪುಷ್ಟಿಕರ, ಧಾತುವೃದ್ಧಿಕರ, ವೀರ್ಯವೃದ್ಧಿ ಕರ, ವಾತ ನಾಶನಮಾಡತಕ್ಕಂಧಾದ್ದು, ಕಫವೃದ್ದಿಕರ ಮತ್ತು ಗುರು ಆಗಿರುತ್ತದೆ, ಅದು ಪಚನಶಕ್ತಿ ಚುರುಕಾಗಿದ್ದವರಿಗೆ ಹೆಚ್ಚಾಗಿ ಪ್ರಶಸ್ತವಾದದ್ದು. 19 ಮಾಷಾಣಾಂ ಪಿಷ್ಟಿಕಾಂ ಪೂಜ್ಯಾಲ್ಲ ವಣಾರ್ದ್ರಕಹಿಂಗುಭಿಃ | ತಯಾ ಪಿಷ್ಟಿಕಯಾ ಪೂರ್ಣ ಸಮಿತಾ ಕೃತಪೋಲಿಕಾ || ಪೂರಿಯ ಗುಣ ತತಸ್ತೈಲೇನ ಪಕ್ವಾ ಸಾ ಪೂರೀಕಾ ಕಧಿತಾ ಬುಧೈ: || ರುಚ್ಯಾ ಸ್ವಾದ್ವೀ ಗುರುಃ ಸ್ನಿಗ್ಧಾ ಬಲ್ಯಾ ಪಿತ್ತಾಸ್ರದುಷಿಕಾ ||ಚಕ್ಷುಸ್ತೇಜೋಹರೀ ಚೋಷ್ಣಾ ಪಾಕೇ ವಾತವಿನಾಶಿನೀ | 3 3
ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೩೪೭
ಈ ಪುಟವನ್ನು ಪರಿಶೀಲಿಸಲಾಗಿದೆ