ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆ XIV - 258 - ತದ್ಭವ ಮೃತಪಕ್ವಾಪಿ ಚಕ್ಷುಷ್ಯಾ ರಕ್ತಪಿತ್ತಕೃತ್ || (ಭಾ. ಪ್ರ. 162 ) ಉದ್ದಿನ ಹಿಟ್ಟಿನೊಂದಿಗೆ ಉಪ್ಪು -ಶುಂಠಿ-ಹಿಂಗು ಕಲಸಿ, ಆ ಹಿಟ್ಟನ್ನು ತುಂಬಿಸಿ ಗೋದಿ ಸಜ್ಜಿಗೆಯಿಂದ ಹೋಳಿಗೆ ಮಾಡಿ, ತೈಲದಲ್ಲಿ ಕಾಯಿಸಿದ ಪೂರಿಯು ರುಚಿಕರ, ಸ್ವಾದು, ಗುರು, ಸ್ನಿಗ್ಧ, ಬಲಕಾರಿ, ಪಿತ್ತರಕ್ತವನ್ನು ಪ್ರಕೋಪಿಸತಕ್ಕಂಧಾದ್ದು, ಕಣ್ಣಿನ ದೃಷ್ಟಿಗೆ ವಿರೋಧ ವಾದದ್ದು, ಪಾಕದಲ್ಲಿ ಉಷ್ಣ, ಮತ್ತು ವಾತನಾಶನಮಾಡತಕ್ಕಂಧಾದ್ದು, ಅದನ್ನು ತುಪ್ಪದಲ್ಲಿ ಕಾಯಿಸಿದರೆ, ರಕ್ತಪಿತ್ತಹರವಾಗಿ ಕಣ್ಣಿಗೂ ಒಳ್ಳೇದಾಗುವದು 20. ಸಿದ್ಧಷಾ ಫೀನಿಕಾ ನಾಮ್ರಾ ಮಂಡಕೇನ ಸಮಾಗುಣೈಃ | ಚಿರೋಟಿ (ಫೇ ತತಃ ಕಿಂಚಿಲ್ಲ ಘುರಿಯಂ ವಿಶೇಷೋsಯಮುದಾಹೃತಃ || ಇ)ಯ ಗುಣ (ಭಾ ಪ್ರ. 166.) ಫಣಿಯು (ಪದರು ಫಣಿ) ಮಂಡಿಗೆಗೆ ಸಮಾನ ಗುಣವುಳ್ಳದ್ದು, ಆದರೆ ಅದಕ್ಕಿಂತ ಇದು ಸ್ವಲ್ಪ ಲಘು ಎಂಬದೊಂದು »ಶೇಷ. ಗುಣ 21. ಲಘುಗ್ರ್ರಾಹೀ ತ್ರಿದೋಷಪ್ಪ ಸ್ವಾದುಃ ಶೀತೂ ರುಚಿಪ್ರದಃ | ಹೆಸರುಂಡೆಯ ಚಕ್ಷುಷ್ಯ ಜ್ವರಹೃದ್ವಸ್ತರ್ಪಣೋ ಮುದ್ಧ ಮೋದಕಃ || (ಭಾ. ಪ್ರ. 166.) ಹೆಸರು ಹಿಟ್ಟಿನ ಕರಿದ ಕಾಳುಗಳಿಂದ ಕಟ್ಟಿದ ಲಾಡು ಲಘು, ಗ್ರಾಹಿ, ಸ್ವಾದು, ರುಚಿ ಕರ, ಶೀತ, ತ್ರಿದೋಷಹರ, ಜ್ವರಹರ, ಕಣ್ಣಿಗೆ ಹಿತ, ಬಲಕಾರಿ, ಮತ್ತು ತೃಪ್ತಿಕರ. - ಏಷಾ ಕುಂಡಲಿನೀ ನಾಮ್ರಾ ಪುಷ್ಟಿಕಾಂತಿಬಲಪ್ರದಾ | ಜಲೇಬಿಯ ಗುಣ ಧಾತುವೃದ್ಧಿ ಕರೀ ವೃಷ್ಯಾ ರುಚ್ಯಾ ಚ ಕ್ಷಿಪ್ರತರ್ಪಣೀ || (ಭಾ. ಪ್ರ. 167.) ಜಿಲೇಬಿಯು ಪುಷ್ಟಿಯನ್ನೂ, ಕಾಂತಿಯನ್ನೂ, ಬಲವನ್ನೂ, ಕೊಡತಕ್ಕಂಧಾದ್ದು , ಧಾತು ವೃದ್ಧಿಕರ, ವೃಷ್ಯ, ರುಚಿಕರ, ಮತ್ತು ಬೇಗನೇ ತೃಪ್ತಿ ಕೊಡುವಂಥಾದ್ದು Gy 23. ಲಾರ್ಜಾ ಸ್ಯುರ್ಮಧುರಾಃ ಶೀತಾ ಲಘವೋ ದೀಪನಾಶ ತೇ | ಸ್ವಲ್ಪ ಮೂತ್ರಮಲಾ ರೂಕ್ಷಾ ಬಲ್ಯಾ ಪಿತ್ತ ಕಫಚ್ಛಿರ್ದ || ಅರಳಿನ ಗಣ ಛರ್ದತೀಕಾರದಾಹಾಸ್ವಮೇಹಮೇದಸ್ಯ ಪಾಪಹಾ | (ಭಾ. ಪ್ರ. 169 ) ಭತ್ತದ ಅರಳು ಸೀ, ಶೀತ, ಲಘು, ದೀಪನಕಾರಿ, ರೂಕ್ಷ, ಬಲಕಾರಿ, ಮೂತ್ರ-ಮಲ ಗಳನ್ನು ಕಡಿಮೆ ಮಾಡುವಂಧಾದ್ದು, ಪಿತ್ತ ಕಫಹರ, ಮತ್ತು ವಾಂತಿ- ಅತಿಸಾರ-ಉರಿ-ರಕ್ತ ಮೇಹ-ಮೇದೋರೋಗ-ಬಾಯಾರಿಕೆ, ಇವುಗಳನ್ನು ಪರಿಹರಿಸತಕ್ಕಂಥಾದ್ದು.