- 269 - e XIV ಗುಣ ಗುಣ ಸವತೆಕಾಯಿಯ ಸಂತಾಪಮೋರ್ಚಾಪಹರಂ ಸುತೃಪ್ತಿದಂ - ವಾತಪ್ರಕೋಪಾಯ ಘನಂ ತು ಸೇವಿತಂ || (ಧ, ನಿ. 41.) ಸವುತೆಕಾಯಿಯು ಪಿತ್ತಹರ, ಬಹಳ ಶೀತ, ಸೀ, ಗುರು, ರುಚಿಕರ, ತೃಪ್ತಿಕರ, ಮೂತ್ರ ರೋಗವನ್ನೂ, ಸಂತಾಪವನ್ನೂ, ಮೂರ್ಚೆಯನ್ನೂ ಪರಿಹರಿಸುತ್ತದೆ. ಷರಾ ಸವತೆಕಾಯಿಯಲ್ಲಿ ಅನೇಕ ಜಾತಿಗಳಿವೆ ದೊಡ್ಡ ಜಾತಿದರಲ್ಲಿ ಎಳೆದು ತೀತ, ಲಫು ರೂಕ್ಷ, ಅತಿ ಯಾಗಿ ಮೂತ್ರ ಕಾರಿ, ರಕ್ತಪಿತ್ತ ಮತ್ರ ಕೃಚ್ಛ, ರಕ್ತದೋಷ, ಇವುಗಳನ್ನು ಜಯಿಸತಕ್ಕಂಧಾದ್ದು, ಹಣ್ಣಾದರೆ ಉಷ್ಣ, ಅಗ್ನಿ ದೀಪನಕಾರಿ ಮತ್ತು ತ್ರಿದೋಷಪರ, ಮತ್ತು ಹಳದು ಉಷ್ಣ, ಪಿತ್ತಕರ ಮತ್ತು ಕಫವಾತವನ್ನು ನಾಶಮಾಡ ತಕ್ಕಂಥಾದ್ದು ಸಣ್ಣ ಜಾತಿದು ಶೀತ, ಕೆಮ್ಮು ಮತ್ತು ವೀನಸ ಉಂಟುಮಾಡತಕ್ಕಂಧಾದ್ದು ಆದರೆ ಪಿತ್ತಹರ ಪಚನಕರ ಮತ್ತು ಆಧ್ಯನವಾಯುಗಳನ್ನು ಶಮನಮಾಡತಕ್ಕಂಧಾದ್ದು ಎಂತಲೂ ಮಳೆಗಾಲದಲ್ಲಿ ಬೆಳೆದ ಸವತೆಕಾಯಿ ಒಳ್ಳೆ ದಲ್ಲ ಎಂತ ಹೇಳಿದ್ದು ಕಾಣುತ್ತದ ( ರ) 60. ಪಟೋಲೀ ಸ್ವಾದು ಪಿತ್ತ ಮೈ ರುಚಿ ಕೃಜ್ಞರನಾಶಿನೀ | ಪಡುವಲ ಬಲಪುಷ್ಟಿ ಕರೀ ಪಧ್ಯಾ ಜೇಯಾ ದೀಪನಪಾಚನೀ || ಕಾಯಿ, ಎಲೆ, ದಂಟು, ಬೇ' ಪಟೋಲಪತ್ರಂ ಪಿತ್ತ ನಾಲಂ ತಸ್ಯ ಕಥಾಪಹಂ | ರಿನ ಗುಣಗಳು ಫಲಂ ತ್ರಿದೋಷಶಮನಂ ಮೂಲಂ ಚಾಸ್ಯ ವಿರೇಚನಂ || (ರಾ ಸಿ 17 ) ಪಟೋಲಕಾಯಿ ಸೀ, ಪಿತ್ತನಾಶಕಾರಿ, ರುಚಿಕರ, ಜ್ವರಹರ, ದೀಪನಪಾಚನಗಳನ್ನು ಮಾಡತಕ್ಕಂಧಾದ್ದು, ಬಲಪುಷ್ಟಿಗಳನ್ನು ಕೊಡತಕ್ಕಂಧಾದ್ದು ಮತ್ತು ಪಧ್ಯವಾದದ್ದು. ಅದರ ಎಲೆಯು ವಿಶೇಷವಾಗಿ ಪಿತ್ತಹರ, ದಂಟು ಕಫಹರ, ಫಲ ತ್ರಿದೋಷ ಶಮನಕರ ಮತ್ತು ಬೇರು ವಿರೇಚನಕಾರಿ. ಷರಾ ಈ ಗುಣಗಳಲ್ಲದ ವೃಷ್ಟ ಉಷ್ಣ ಸಿಗ್ನಗುಣಗಳೂ, ಕೆಮ್ಮು, ರಕ್ತದೋಷ, ಜ್ವರ, ತ್ರಿದೋಷ ಮತ್ತು ಕ್ರಿಮಿ, ಇವುಗಳನ್ನು ನಾಶಮಾಡುವ ಗುಣವೂ ಇದೆ ಎಂತ ಭಾ – (ಪ್ರ 14 ) ಉದ್ದ ತಾತಿದು ಕಟ್ಟು, ಎಷ್ಟಂಫಿ, ವಾತವೃಕರ, ಕಫಪ್ರಕೋಪಕರ, ಶೀತ ಮತ್ತು ವೇದಿಕರ ಎಂತ ರಾಜವಲ್ಲಭ ( 63 ) ಆ 61. ಧಾರಾಕೋಶಾತಕೀ ಸಿಗ್ಗಾ ಮಧುರಾ ಕಫಪಿತ್ರನುತ್ | ಹೀರೆಕಾಯಿಯ ಗುಣ ಈಷಾತಕರೀ ಪಧ್ಯಾ ರುಚಿಕ್ಕದ್ದಲವೀರ್ಯದಾ || (ರಾ. ನಿ. 47.) ಧಾರೆಹೀರೆಕಾಯಿಯು ಸಿಗ್ನ, ಸೀ, ಕಫಪಿತ್ರಗಳನ್ನು ಶಮನಮಾಡತಕ್ಕಂಧಾದ್ದು, ರುಚಿ ಕರ, ಬಲವೀರ್ಯಗಳನ್ನು ಕೊಡತಕ್ಕಂಧಾದ್ದು ಮತ್ತು ಪಧ್ಯವಾದದ್ದು; ಆದರೆ ಸ್ವಲ್ಪ ವಾತ ಪ್ರಕೋಪನ ಮಾಡುತ್ತದೆ. ಯ ಗುಣ. 62. ಬಿಂಬೀಫಲಂ ಸ್ವಾದು ಶೀತಂ ಗುರು ಪಿತ್ತಾಶ್ರವಾತಜಿತ್ | ತೊಂಡೆಕಾಯಿ ಸ್ತಂಭನಂ ಲೇಖನಂ ರುಚ್ಯಂ ಪಿಒಂಧಾಧ್ಯಾನಕಾರಕಂ | (ಭಾ. ಪ್ರ 149.) | ತೊಂಡೆಕಾಯಿಯು ಸ್ವಾದು, ಶೀತ, ಗುರು, ವಿಷ್ಟಂಭಿ, ಲೇಖನ, ರುಚಿಕರ, ರಕ್ತಪಿತ್ತ ವನ್ನೂ, ವಾತವನ್ನೂ, ಜಯಿಸತಕ್ಕಂಧಾದ್ದು ಮತ್ತು ಮಲಬದ್ಧತೆಯನ್ನೂ, ಹೊಟ್ಟೆಯುಬ್ಬರ ವನ್ನೂ ಉಂಟುಮಾಡತಕ್ಕಂಧಾದ್ದಾಗಿರುತ್ತದೆ.
ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೩೫೯
ಈ ಪುಟವನ್ನು ಪರಿಶೀಲಿಸಲಾಗಿಲ್ಲ.