ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆ XII - 272 - 9C ಗಿಯ ಗುಣ ಗುಣ ಮಲಬದ್ಧತೆ, ಗುಲ್ಮ, ಅರುಚಿ, ಕೆಮ್ಮು, ಶೋಭೆ, ಮೂಲವ್ಯಾಧಿ, ಕುಷ್ಠ, ಅಗ್ನಿಮಾಂದ್ಯ, ಕ್ರಿಮಿ, ವಾಯು, ಉಬ್ಬಸ, ಕಫ, ಇವುಗಳನ್ನೆಲ್ಲಾ ನಾಶಮಾಡುತ್ತದೆ. ಹುಳಿ ಬಿಟ್ಟು ಮಿಕ್ಕ ಐದು ರಸಗಳುಳ್ಳದ್ದಾದ್ದರಿಂದ ಇದಕ್ಕೆ 'ರಸೋನ' ಎಂಬ ಹೆಸರು ಬಂದದ್ದು. 69. ಗ್ರಾಹೀ ಗೃಂಜನಕ ವಾತಶ್ಲೇಷ್ಯಾರ್ಶಸಾಂ ಹಿತಃ | ಅರಸಿನ ಮೂಲ ಸೈದನೇಭ್ಯವಹಾರ್ಯೇ ಚ ಯೋಜಯೇತ್ತಮಪಿನಾಂ || (ಚ. 169.) ಅರಸಿನ (ಕಿತ್ತಳೇ ವರ್ಣದ) ಮೂಲಂಗಿಯ ಗ್ರಾಹೀ, ತೀಕ್ಷ, ವಾತ, ಕಫ, ಮತ್ತು ಅರ್ಶಸ್ಸು ವ್ಯಾಧಿಗಳಲ್ಲಿ ಹಿತವಾದದ್ದು ಮತ್ತು ಪಿತ್ತಶರೀರವಲ್ಲದವರಿಗೆ ಬೆವರಿಸುವ ಯೋಗ ದಲ್ಲಿಯೂ, ಪಧ್ಯದಲ್ಲಿಯೂ ಉಪಯೋಗಿಸತಕ್ಕಂಧಾದ್ದಾಗಿರುತ್ತದೆ. 70. ಪಲಾಂಡುಃ ಕಟುಕೋ ಬಲಕಿ ಕಫಪಿತ್ತಹರೂ ಗುರುಃ | ನೀರುಳ್ಳಿಯ ವೃಷ್ಯತ್ವ ರೂಚನಃ ನ್ನಿಗೇ ವಾಂತಿದೋಷವಿನಾಶನಃ | (ರಾ ನಿ. 148.) ನೀರುಳ್ಳಿಯು ಖಾರ, ಗುರು, ರುಚಿಕರ, ಬಲಕರ, ವೃಷ್ಣ, ಸಿಗ್ಗ ಮತ್ತು ಕಫಪಿತ್ತ ಗಳನ್ನೂ, ವಾಂತಿದೋಷವನ್ನೂ ಪರಿಹರಿಸುತ್ತದೆ. ಶೇಷಲೋ ಮಾರುತಕ್ಷಶ ಪಲಾಂಡುರ್ನ ಚ ಪಿತ್ತನುತೇ | ಆಹಾರಯೋಗೀ ಬಲಶ ಗುರುರ್ವೃದ್ಯೋSಧ ರೋಚನಃ || (ಚ. 169 ) ನೀರುಳ್ಳಿಯು ಕಫಕರ, ಗುರು, ರುಚಿಕರ, ಬಲಕರ, ವೃಷ್ಯ, ವಾಯುಹರ, ಪಿತ್ತನಾಶ ಕರವಲ್ಲದ್ದು ಮತ್ತು ಆಹಾರದೊಂದಿಗೆ ಉಪಯೋಗಿಸಲಿಕ್ಕೆ ತಕ್ಕದಾದದ್ದು ಪಲಾಂಡುರ್ನೈಸಪೂರ್ವ ಸ್ಯಾಚ್ಛಿಶಿರಃ ಪಿತ್ತನಾಶನಃ || ದೊಡ್ಡ ನೀರುಳ್ಳಿಯ ಗುಣ ಕಫಹೃದ್ದೀಪನಶ್ಚಿವ ಬಹುನಿದ್ರಾಕರಸ್ರಧಾ || (ರಾ. ನಿ. 148 ) ದೊಡ್ಡ ಜಾತಿಯ ನೀರುಳ್ಳಿ ಮತ್ತು ಕೆಂಪು ನೀರುಳ್ಳಿ ತಂಪು, ಪಿತ್ತನಾಶನಕಾರಿ, ಕಫ ವನ್ನು ತೆಗೆಯತಕ್ಕಂಧಾದ್ದು , ಅಗ್ನಿದೀಪನಕಾರಿ ಮತ್ತು ಹೆಚ್ಚು ನಿದ್ರೆಯನ್ನುಂಟುಮಾಡುತ್ತದೆ. 72. ಮಧುರಃ ಕಫವಾತಜ್ಞಃ ಪಾಚನಃ ಕಂಶೋಧನಃ | ಎಲೆಮುರಿಸೊಪ್ಪಿನ ಗುಣ ವಿಶೇಷತಃ ಪಿತ್ತ ಹರಃ ಸತಿಕ ಕಾಸಮರ್ದಕಃ || (ಸು. 315.) ಎಲೆಮುರಿಸೊಪ್ಪು ಕಹಿ ಮಿಶ್ರವುಳ್ಳ ಸೀ, ಕಫವಾತನಾಶನಕಾರಿ, ವಿಶೇಷವಾಗಿ ಪಿತ್ತಹರ. ಪಾಚನ ಮತ್ತು ಕಂರಶೋಧನ ಮಾಡುತ್ತದೆ. 73. ಸೌಭಾಂಜನಫಲಂ ಸ್ವಾದು ಕಷಾಯಂ ಕಫವಿತ್ರನುತ್ | ನುಗ್ಗೆ ಕೋಡಿನ ಶೂಲ-ಕುಷ್ಠ - ಕ್ಷಯ-ಶ್ವಾಸ-ಗುಹೃದ್ದೀಪನಂ ಪರಂ || (ಭಾ. ಪ್ರ. 149.) 71. ಗಣ