e XVII - 302 - ಯೇ, ಅವನ ಬಾಯಿಯ ರುಚಿಯನ್ನು ತಿಳಿಯಬೇಕು; ಹೇನುಗಳು ಹೊರಟು ಹೋಗುವದ ರಿಂದ ಶರೀರದಲ್ಲಿ ರಸವಿಲ್ಲವೆಂಬದನ್ನೂ, ನೊಣ ಸಮಿಪಿಸುವದರಿಂದ ಶುರೀರವು ಸೀಯಾಗಿರ ಬೇಕೆಂಬದನ್ನೂ, ರಕ್ತಪಿತ್ತದ ಸಂದೇಹ ಹುಟ್ಟಿ, ಇದು ದೇಹಧಾರಿಯಾದ ರಕ್ತವೋ ಅಥವಾ ರಕ್ತಪಿತ್ತವೋ ಎಂಬದನ್ನು ನಿಶ್ಚಯಿಸಬೇಕಾದಾಗ್ಗೆ, ನಾಯಿ ಅಥವಾ ಕಾಗೆ ತಿಂದರೆ ಧಾರಿರಕ್ತವೆಂತಲೂ, ತಿನ್ನದೆ ಬಿಟ್ಟರೆ ರಕ್ತಪಿತ್ತವೆಂತಲೂ, ಅನುಮಾನರೀತಿಯಿಂದ ತಿಳಿಯ ಬೇಕು, ಹೀಗೆ ರೋಗಿಯ ಶರೀರದೊಳಗಣ ಬೇರೆ ರಸಗಳನ್ನೂ ಊಹಿಸಬೇಕು, ರೋಗಿಯ ಇಡೀ ಶರೀರದ ಸ್ವಾಭಾವಿಕ ವಾಸನೆಯನ್ನೂ, ವಿಕಾರ ಹೊಂದಿದ ವಾಸನೆಯನ್ನೂ, ಮೂಗಿ ನಿಂದ ಪರೀಕ್ಷಿಸಬೇಕು, ಸ್ಪರ್ಶವಿಷಯವಾದ ಪ್ರಕೃತಿ ಮತ್ತು ವಿಕಾರವನ್ನು ಕೈಯಿಂದ ಮುಟ್ಟಿ ತಿಳಿಯಬೇಕು, ಹೀಗೆ ಪ್ರತ್ಯಕ್ಷದಿಂದಲೂ, ಕೆಲವು ಅನುಮಾನಭಾಗಗಳಿಂದಲೂ, ಮಾಡಬೇಕಾದ ಪರೀಕ್ಷೆಯನ್ನು ವಿವರಿಸಿದ್ದಾಯಿತು (b) ಇಮೇ ತು ಖಲು ಅನ್ಯೇ೮ಪ್ಯೇವಮೇವ ಭೂರ್ಯೋನುಮಾನಜ್ಞಯಾ ಭವಂತಿ ಭಾವಾಃ | ತದ್ಯಧಾ | ಅಗ್ನಿಂ ಬರಣಶಕ್ತ್ಯಾ, ಬಲಂ ವ್ಯಾ ಯಾಮಶಕ್ತ್ಯಾ,ಶ್ರೋತ್ರಾದೀನ್ ಶಬ್ದಾದಿಗ್ರಹಣೇನ, ಮನೋರ್ಧಾ ವ್ಯಭಿಚಾರೇಣ, ವಿಜ್ಞಾನಂ ವ್ಯವಸಾಯೇನ, ರಜಃ ಸಂಗೇನ, ಮೋಹ ಮವಿಜ್ಞಾನೇನ, ಕ್ರೋಧಮಭಿದ್ರೋಹಣ, ಶೋಕಂ ದೈನ್ಯೇನ, ಹರ್ಷ ಮಾಮೋದೇನ, ಪ್ರೀತಿಂ ತೇಷೇಣ, ಭಯಂ ವಿಷಾದೇನ, ಧೈರ್ಯ ಮವಿಷಾದೇನ, ವೀರ್ಯಮುತ್ಸಾಹನ, ಸ್ಥಾನಮವಿಭ್ರಮೇಣ, ಶ್ರದ್ಧಾ ಮಭಿಪ್ರಾಯೇಣ, ಮೇಧಾಂ ಗ್ರಹಣೇನ, ಸಂಜ್ಞಾಂ ನಾಮಗ್ರಹಣೇನ, ಸ್ಮೃತಿಂ ಸ್ಮರಣೇನ, ಹ್ರಿಯಮಪತ್ರಪೇಣ, ಶೀಲಮನುಶೀಲನೇನ, ದ್ವೇ ಷಂ ಪ್ರತಿಷೇಧನ, ಉಪಾಧಿಮನುಬಂಧೇನ, ಧೃತಿಮಲೌಲ್ಯೇನ, ವಶ್ಯ ತಾಂ ವಿಧೇಯತಯಾ, ವಯೋಭಕ್ತಿಸಾತ್ಮ್ಯವ್ಯಾಧಿಸಮುತ್ಥಾನಾನಿ ಕಾಲದೇಶೋಪಶಯವೇದನಾವಿಶೇಷೇಣ, ಗೂಢಲಿಂಗಂ ವ್ಯಾಧಿಮುಪ ಶಯಾನುಪಶಯಾಭ್ಯಾ೦, ದೋಷಪ್ರಮಾಣವಿಶೇಷಮಪಚಾರವಿಶೇಷೇಣ, ಆಯುಷಃ ಕ್ಷಯಮರಿಷ್ಟೈರುಪಸ್ಥಿತಶ್ರೇಯಸ್ತ್ವಂ ಕಲ್ಯಾಣಾಭಿನಿವೇಶೇನ, ಅಮಲಂ ಸತ್ವಮವಿಕಾರೇಣೇತಿ | (258) ಇದೇ ಮೇರೆಗೆ ಊಹಯಿಂದ ತಿಳಿಯಬೇಕಾದ ಬೇರೆ ಭಾವಗಳು ಯಾವವೆಂದರೆ:- ಅಗ್ನಿಯನ್ನು ಜೀರ್ಣಶಕ್ತಿಯಿಂದ, ಒಲವನ್ನು ವ್ಯಾಯಾಮಶಕ್ತಿಯಿಂದ, ಶ್ರೋತ್ರಾದಿ ಇಂದ್ರಿಯ ಗಳನ್ನು ಶಬ್ದಾದಿಗಳ ಗ್ರಹಣ(ಗೋಚರ) ಶಕ್ತಿಯಿಂದ, ಮನಸ್ಸನ್ನು ಅರ್ಧವನ್ನು ಬಿಡದೆ ಇರೋಣದರಿಂದ, ಜ್ಞಾನವನ್ನು ನಿಶ್ಚಯದಿಂದ, ರಜೋಗುಣವನ್ನು ಸಂಗದಿಂದ, ಮೋಹ ವನ್ನು ಜ್ಞಾನವಿಲ್ಲದಿರೋಣದಿಂದ, ಕ್ರೋಧವನ್ನು ಕೆಡಕುತನದಿಂದ, ಶೋಕವನ್ನು ದೈನ್ಯಭಾವ ದಿಂದ, ಹರ್ಷವನ್ನು ಆನಂದದಿಂದ, ಪ್ರೀತಿಯನ್ನು ಸಂತೋಷಪಡಿಸುವಿಕೆಯಿಂದ, ಭಯವನ್ನು ಜಡತನದಿಂದ, ಧೈರ್ಯವನ್ನು ಜಡತ್ವ ಎಲ್ಲ ದಿರೋಣದರಿಂದ, ವೀರ್ಯವನ್ನು ಉತ್ಸಾಹದಿಂದ,
ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೩೯೨
ಈ ಪುಟವನ್ನು ಪರಿಶೀಲಿಸಲಾಗಿಲ್ಲ.