-- 303 - e XVII ಸ್ಥಾನಸ್ಥಿತಿಯನ್ನು ಭ್ರಮೆಯಿಲ್ಲದಿರೋಣದರಿಂದ, ಶ್ರದ್ಧೆಯನ್ನು ಅಭಿಪ್ರಾಯದಿಂದ, ಮೆದುಳನ್ನು ಗ್ರಹಿಸುವ ಶಕ್ತಿಯಿಂದ, ಸಂಜ್ಞೆಯನ್ನು ಹೆಸರು ತಿಳಿಯೋಣದರಿಂದ, ಸ್ಮೃತಿಯನ್ನು ನೆನಪಿರುವದರಿಂದ, ನಾಚುವ ಸ್ವಭಾವವನ್ನು ಲಜ್ಜೆ ಪಡುವದರಿಂದ, ಶೀಲವನ್ನು ಪದೇಪದೇ ನಡಿಸುವ ಸ್ವಭಾವದಿಂದ, ದ್ವೇಷವನ್ನು ವಿರೋಧಮಾಡೋಣದರಿಂದ, ಹೇತುವನ್ನು ಅದರ ಲಕ್ಷಣದಿಂದ, ಧೃತಿಯನ್ನು ಚಂಚಲವಿಲ್ಲದಿರೋಣದರಿಂದ, ವಶ್ಯತೆಯನ್ನು ಎಧೇಯತ್ವದಿಂದ, ವಯಸ್ಸು, ಭಕ್ತಿ, ಸಾತ್ಮ್ಯ, ವ್ಯಾಧಿಯ ಹೊರಡುವಿಕೆ, ಇವುಗಳನ್ನು ಕಾಲ-ದೇಶ-ಸುಖಕರವಾ ದದ್ದು -ನೋವು, ಇವುಗಳ ವಿಶೇಷದಿಂದ, ಗುಪ್ತವಾದ ಲಕ್ಷಣವುಳ್ಳ ವ್ಯಾಧಿಯನ್ನು ಸುಖಾ ಸುಖಕರವಾದವುಗಳಿಂದ, ದೋಷಪ್ರಮಾಣದ ಹೆಚ್ಚು ಕಡಿಮೆಯನ್ನು ಅಪಚಾರದ ಹೆಚ್ಚು ಕಡಿಮೆಯಿಂದ, ಆಯುಸ್ಸಿನ ಕ್ಷಯವನ್ನು ಅನಿಷ್ಟಸೂಚನೆಗಳಿಂದ, ಸುಖ ಸಮಿಪಿಸಿದ ಲಕ್ಷಣವನ್ನು ಮಂಗಲಾವೇಶದಿಂದ, ನಿರ್ಮಲವಾದ ಸತ್ವವನ್ನು (ಕ್ರೋಧ ಮುಂತಾದ) ಎಕಾರವಿಲ್ಲ ದಿರೋಣದರಿಂದ, ಹೀಗೆ ಊಹಿಸಿ ತಿಳಿಯತಕ್ಕದ್ದು ಸರ್ವಥಾ ಸರ್ವಮಾಲೋಚ್ಯ ಯಧಾಸಂಭವವರ್ಧವಿತ್ | ಅಧಾಧ್ಯವಸ್ಯತ್ ತತ್ವೇಚ ಕಾರ್ಯೇ ಚ ತದನಂತರಂ || (ಚ 259 ) ಸರ್ವ ಲಕ್ಷಣಗಳನ್ನು ಹುಟ್ಟಿದ ಹಾಗೆ ಸರ್ವ ಪ್ರಕಾರವಾಗಿ ಆಲೋಚಿಸಿ, ಅವುಗಳ ಅರ್ಧವನ್ನು ತಿಳಿದವನಾಗಿ, ಅನಂತರ ವ್ಯಾಧಿಯ ತತ್ವವನ್ನೂ, ಮಾಡತಕ್ಕ ಪರಿಹಾರವನ್ನೂ, ನಿಶ್ಚಯಿಸತಕ್ಕದ್ದು 6 (a) ತತೋ ದೂತನಿಮಿತ್ತಶಕುನಮಂಗಲಾನುಲೋಮ್ಯೇನಾತುರಗೃಹಮಭಿ ಗಮ್ಯೇಪವಿಶ್ಯಾತುರಮಭಿಪಶ್ಯೇತ್ ಸ್ಪೃಶೇತ್ ಪೃಚ್ಛೇಚ್ಚ | ತ್ರಿಭರೇತೈ ರೋಗಿಯ ಪರೀಕ್ಷಾ ಕ್ರಮ-ಸುಶ್ರುತನ ನಿರ್ದೇಶ ರ್ವಿಜ್ಞಾನೋಪಾಯೈ ರೋಗಾಃ ಪ್ರಾಯಶೋ ವೇದಿತಾವ್ಯಾ ಇತೇಕೇ | ತತ್ತು ನ ಸಮ್ಯಕ್ | ಷಡ್ವಿಧೋ ಹಿ ರೋಗಾಣಾಂ ಎಜ್ಞಾನೋಪಾ ಯಃ | ತದ್ಯಧಾ ಪಂಚಭಿಃ ಶ್ರೋತ್ರಾದಿಭಿಃ ಪ್ರಶ್ನೇನ ಚೇತಿ | (ಸು 34.) ವೈದ್ಯನು ದೂತ-ನಿಮಿತ್ತ-ಶಕುನ-ಮಂಗಲ, ಈ ಸೂಚನೆಗಳನ್ನು ಅನುಸರಿಸಿಕೊಂಡು, ರೋಗಿಯ ಮನೆಯನ್ನು ಹೊಕ್ಕು, ಕೂತು, ರೋಗಿಯನ್ನು ಪರೀಕ್ಷಿಸಿ ನೋಡಬೇಕು, ಮುಟ್ಟ ಬೇಕು, ಮತ್ತು ಪ್ರಶ್ನೆ ಮಾಡಬೇಕು. ಈ ಮೂರು ಜ್ಞಾನೋಪಾಯಗಳಿಂದ ರೋಗಗಳನ್ನು ಹೆಚ್ಚಾಗಿ ತಿಳಿಯಬೇಕೆಂತ ಕೆಲವರು ಹೇಳುತ್ತಾರೆ ಆದರೆ ಅದು ಸರಿಯಲ್ಲ , ಯಾಕೆಂದರೆ ರೋಗಗಳನ್ನು ತಿಳಿಯುವ ಉಪಾಯವು ಷಡ್ವಿಧವಾಗಿರುತ್ತದೆ, ಹ್ಯಾಗೆಂದರೆ ಕಿವಿ ಮೊದ ಲಾದ ಪಂಚೇಂದ್ರಿಯಗಳಿಂದ ಮತ್ತು ಪ್ರಶ್ನೆಯಿಂದ. ಸಿರ್ದೇಶ (6) ತತ್ರ ಶ್ರೋತ್ರೇಂದ್ರಿಯವಿಜ್ಞಯಾ ವಿಶೇಷಾ ರೋಗೇಷು ಪ್ರಣಾಸ್ರಾವ ವಿಜ್ಞಾನೀಯಾದಿಷು ವಕ್ಷ್ಯಂತೇ ಸಫೇನಂ ರಕ್ತಮಾರಯನ್ನನಿಲಃ ಸಶ ಬ್ದೋ ನಿರ್ಗಚ್ಛತೀತ್ಯೇವಮಾದಯಃ | ಸ್ಪರ್ಶನೇಂದ್ರಿಯವಿಜ್ಞಯಾಃ ಶೀತೋಷ್ಣಶ್ಲಕ್ಳಕರ್ಕಶಮೃದುಕರಿನತ್ವಾದಯೋ ಸ್ಪರ್ಶವಿಶೇಷಾ ಜ್ವರ
ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೩೯೩
ಈ ಪುಟವನ್ನು ಪರಿಶೀಲಿಸಲಾಗಿಲ್ಲ.