ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಅ XVII. -- 316 --
ದುರ್ಗಂಧಂ ಚಂದ್ರಿಕಾಯುಕ್ತಮಸಾಧ್ಯಂ ಮಲಲಕ್ಷಣಂ || 20. ಬದ್ದಂ ಶ್ಯಾಮಂ ಮರುತಿ ಕುಪಿತೇ ಪಿತ್ತಕೋಪೇ ತು ಪೀತಂ 2 1. ಪಾನೀಯಾಭಂ ಸಫೇನಂ ಕಫರುಷಿ ಚ ಮಲೇ ಸಾಂದ್ರಪಾಂಡೂರವರ್ಣಂ | 22. ರಕ್ತೇ ಕ್ರುದ್ದೇ ಸರಕ್ತಂ ಜಲನಿಭಮಧ ತತ್ ದ್ವಂದ್ವಕೋಪೇ ದ್ವಿಲಿಂಗಂ 23. ಸರ್ವೈರ್ದೋಷೈಃ ಸರೋಷೈರ್ಭವತಿ ಕಿಲ ಮಲಂ ರೋಗಿಣಸ್ಸರ್ವಲಿಂಗಂ || ದುರ್ಗಂಧಿ ಶ್ಯಾಮವರ್ಣಂ ಮಲಮರುಣನಿಭಂ ಪಾಂಡುರಾಭಂ ವಿಚಿತ್ರಂ ಮಾಂಸಾಭಂ ಮೇಚಕಂ ತತ್ಪ್ರಭವತಿ ಮರಣಾಯೈವ ರೋಗಾನ್ವಿತಸ್ಯ | ಎಸ್ರಂ ಶೈಧಿಲ್ಯಯುಕ್ತಂ ಮುಹುರತಿನಿಪತತ್ಸ್ಯಾದಜೀರ್ಣಾಚ್ಚ ವರ್ಚೋ ದಿಙ್ಮೂತ್ರಂ ಚೈತದೇವಂ ನಿಗದಿತಮಗದೈರ್ಲಕ್ಷಣಂ ವರ್ಚಸೋಪಿ || (ನಿ.ರತ್ನಾಕರ.)
ಷರಾ ಮೇಲಿನ ಶ್ಲೋಕಗಳಲ್ಲಿ 4, 5, 6, 20 21, 22 ಮತ್ತು 23ನೇ ಅರ್ಧ ಶ್ಲೋಕಗಳಲ್ಲದ ಮಿಕ್ಕ ಭಾಗ ದ ಲ್ಲಿಯೂ ಕಾಣುತ್ತದೆ ವಾತಪ್ರಕೋಪದಿಂದ ಮಲವು ಕಡಿದು, ನೊರೆ ಕೂಡಿಕೊಂಡು, ರೂಕ್ಷವಾಗಿ ಮತ್ತು ಹೊಗೆವರ್ಣವಾಗಿ, ಇರುವದು. ಕಫವಾತರೋಗದಲ್ಲಿ ಮಲದ ವರ್ಣವು ಕಪಿಶ ( ಕಪ್ಪು ಮಿಶ್ರ ಅರಸಿನ)ವಾಗುವದು. ಪಿತ್ರವಾಯುವಿನಿಂದ ಮಲವು ಬದ್ಧವಾಗಿ, ಬಹಳವಾಗಿ ಒಡೆದು, ಅರಸಿನ ಶ್ಯಾಮ ಮಿಶ್ರವರ್ಣದ್ದಾಗುತ್ತದೆ ಕಫಪಿತ್ತದಿಂದ ಮಲ ಅರಸಿನ ಮತ್ತು ಶ್ಯಾಮ ಮಿಶ್ರವರ್ಣವುಳ್ಳದ್ದಾಗಿ, ಸ್ವಲ್ಪ ತೆಳ್ಳಗಾಗಿಯೂ, ಪಿಲವಾಗಿಯೂ ಇರುವದು. ತ್ರಿದೋಷದಿಂದ ಮಲವು ಒಡೆದು, ಬದ್ಧವಾಗಿ, ವರ್ಣದಲ್ಲಿ ಶ್ಯಾಮ, ಸ್ವಲ್ಪ ಅರಸಿನ ಮತ್ತು ಬೆಳ್ಳಗಾಗಿರುವದು. ಮಲವು ಸಡಿಲಾಗಿ, ದುರ್ಗಂಧವುಳ್ಳದ್ದಾದರೆ, ಅದು ಅಜೀರ್ಣದಿಂದೆಂತ ದೋಷಜ್ಞರಾದ ವೈದ್ಯರು ಹೇಳುತ್ತಾರೆ. ಮಲವು ಅತಿಯಾಗಿ ಕ್ಷೀಣವಾದ ದೋಷದಿಂದ ಅದು ಕಪಿಲವರ್ಣವಾಗಿಯೂ, ಗಂಟುಗಳುಳ್ಳದ್ದಾಗಿಯೂ ಕಾಣುವದು ಜಲೋದರದಲ್ಲಿ ಮಲ ಬಹಳ ದುರ್ವಾಸನೆಯುಳ್ಳದ್ದಾಗಿಯೂ, ಬೆಳ್ಳಗಾಗಿಯೂ ಇರುತ್ತದೆ. ಕ್ಷಯದಲ್ಲಿ ಮಲ ಕಪ್ಪಾಗಿರುವದು. ಆಮವಾತದಲ್ಲಿ ಅರಸಿನ ವರ್ಣದ ಮಲ ಮತ್ತು ಸೊಂಟದ ನೋವು ಕಾಣುವವು, ಅತಿಕಪು, ಅತಿಬೆಳ್ಳಗೆ, ಅತಿಅರಸಿನ ಅಧವಾ ಅತಿಅರುಣ (ಕೆಂಪು ಕಪ್ಪುಮಿಶ್ರ) ವರ್ಣದ ಮಲವು ಮರಣ ಸೂಚಕವೆಂತ ಎಣಿಸಲ್ಪಡುತ್ತದೆ; ಆದರೆ ಅತಿಬಿಸಿಯಾದ ಮಲ ಕಂಡಲ್ಲಿ ಮರಣವುಂಟಾಗುತ್ತದೆಂಬುವದಕ್ಕೆ ಸಂದೇಹವಿಲ್ಲ. ವಾತದ ಮಲವು ಕಪ್ಪು, ಪಿತ್ತದ ಮಲವು ಅರಸಿನ ಮತ್ತು ಸ್ವಲ್ಪ ಕೆಂಪು, ಕಫದ ಮಲ ಬೆಳ್ಳಗೆ, ಆಮದಲ್ಲಿಯೂ ಮಲದ ವರ್ಣ ಬಿಳುಪು, ದ್ವಂದ್ವದೋಷಗಳಲ್ಲಿ ಮಲವು ಮಿಶ್ರವರ್ಣವಾಗುತ್ತದೆ. ಅಜೀರ್ಣದಲ್ಲಿ ಮಲವು ಅಪಕ್ವವಾಗಿಯೂ, ಸ್ವಸ್ಥವಾದವನ ಮಲವು ಪಕ್ವವಾಗಿಯೂ ಇರುತ್ತದೆ. ಅತ್ಯಗ್ನಿ ಯಲ್ಲಿ ಮಲವು ಒಣಗಿ ಬಿಕ್ಕಿ ಬರುವದು. ಮಂದಾಗ್ನಿಯಲ್ಲಿ ಮಲವು ತೆಳ್ಳಗಾಗಿರುತ್ತದೆ. ದುರ್ಗಂಧವಿದ್ದು, ಮಿಂಚುವ ಮಲವು ಅಸಾಧ್ಯ ರೋಗದ ಮಲಲಕ್ಷಣವೆಂದು ತಿಳಿಯ ಬೇಕು. ಮಲವು ವಾತಪ್ರಕೋಪದಲ್ಲಿ ಬದ್ಧ, ಮತ್ತು ಕಪ್ಪಾಗಿಯೂ, ಪಿತ್ತಪ್ರಕೋಪದಲ್ಲಿ ಅರಸಿನ, ನೀಲ ಮತ್ತು ನೊರೆಯುಕ್ತವಾಗಿಯೂ, ಕಫಪ್ರಕೋಪದಲ್ಲಿ ದಪ್ಪ ಮತ್ತು ಬೆಳ್ಳ