ಈ ಪುಟವನ್ನು ಪರಿಶೀಲಿಸಲಾಗಿಲ್ಲ.

-- 317 -- ಆ XVII

      ಗಾಗಿಯೂ,  ರಕ್ತಪ್ರಕೋಪದಲ್ಲಿ  ರಕ್ತಮಿಶ್ರ  ಮತ್ತು  ನೀರಾಗಿಯೂ,  ದ್ವಂದ್ವದೋಷಗಳಲ್ಲಿ     
      ಎರಡು  ದೋಷಗಳ ಲಕ್ಷಣಗಳುಳ್ಳದ್ದಾಗಿಯೂ, ಸರ್ವದೋಷಗಳಲ್ಲಿ  ಸರ್ವ ಲಕ್ಷಣಗಳಿಂದ  
      ಮಿಲಿತವಾಗಿಯೂ ಕಾಣುವದು  ರೋಗಿಯ ಮಲದಲ್ಲಿ ದುರ್ಗಂಧ, ಶ್ಯಾಮವರ್ಣ, ಅರುಣ    
      ವರ್ಣದ ಹೋಲುವೆ,  ಅರಸಿನ ಒತ್ತಿದ ಬಿಳುಪು,  ವಿಚಿತ್ರವರ್ಣ,  ಮಾಂಸದ  ಹೋಲುವೆ,         
      ಕಪ್ಪು ಒತ್ತಿದ ನೀಲವರ್ಣ, ಈ ಲಕ್ಷಣಗಳು ರೋಗಿಯ ಮರಣಕ್ಕಾಗಿಯೇ  ಉಂಟಾಗುತ್ತವೆ. 
      ಅಜೀರ್ಣದಿಂದ ಮಲವು ಸಡಿಲಾಗಿ, ಮಾಂಸದ ವಾಸನೆಯುಳ್ಳದ್ದಾಗಿ, ಅತಿಯಾಗಿ, ಪದೇ    
      ಪದೇ ಹೋಗುವದು.   ಹೀಗೆ ಮಲದ   ಲಕ್ಷಣಗಳನ್ನು ವೈದ್ಯರು ದಿಕ್ಕು ಸೂಚಿಸುವದಕ್ಕಾಗಿ   
      ಮಾತ್ರ ಹೇಳಿರುತ್ತಾರೆ.

ಷರಾ ಮೇಲಿನ ಮಲಲಕ್ಷಣವರ್ಣನದಲ್ಲಿ ಸ್ವಲ್ಪ ಪುನರುಕ್ತಿ ಕಾಣುತ್ತದೆ. ಆ ಅಂಶಗಳು ಬೇರೆ ಬೇರೆ ಗ್ರಂಥ ಗಳಿಂದ ಸಂಗ್ರಹಿಸಲ್ಪಟ್ಟವಾಗಿರಬೇಕು.

                19   (a)   ಪುಂಸೋ ದಕ್ಷಿಣಹಸ್ತಸ್ಯ ಸ್ತ್ರೀಯೋ ವಾಮಕರಸ್ಯ ತು |
                           ಅಂಗುಷ್ಠ ಮೂಲಗಾಂ ನಾಡೀಂ ಪರೀಕ್ಷೇತ ಭಿಷಗ್ವರಃ ||                         
                           ಅಂಗುಲೀಭಿಸ್ತು  ತಿಸೃಭಿರ್ನಾಡೀಮವಹಿತಃ ಸ್ಪೃಶೇತ್  |                         
                           ತಚ್ಚೇಷ್ಟಯಾ ಸುಖಂ ದುಃಖಂ ಜಾನೀಯಾತ್ಕುಶಲೋSಖಿಲಂ ||
                           ಸದ್ಯಃಯಸ್ನಾತಸ್ಯ ಭುಕ್ತಸ್ಯ ಕ್ಷುತ್ತೃಷ್ಣಾತಪಶೀಲಿನಃ |                            
  (ನಾಡಿಯ ಪರೀಕ್ಷೆ      ವ್ಯಾಯಾಮಶ್ರಾಂತದೇಹಸ್ಯ ಸಮ್ಯಗ್ ನಾಡೀ ನ ಬುಧ್ಯತೇ ||                          
   ಮತ್ತು ಗತಿಭೇದ      ವಾತಾಧಿಕೇ ಭವೇನ್ನಾಡೀ ಪ್ರವ್ಯಕ್ತಾ ತರ್ಜನೀತಲೇ |
   ಗಳು (ಭಾ  ಪ್ರ )      ಪಿತ್ತೇ ವ್ಯಕ್ತಾ ಮಧ್ಯಮಾಯಾಂ ತೃತೀಯಾಂಗುಲಿಗಾ ಕಫೇ ||'                     
                           ತರ್ಜನೀಮಧ್ಯಮಾಮಧ್ಯೇ ವಾತಪಿತ್ತಾಧಿಕೇ  ಸ್ಫುಟಾ |   
                           ಅನಾಮಿಕಾಯಾಂ ತರ್ಜನ್ಯಾಂ ವ್ಯಕ್ತಾ ವಾತಕಫೇ ಭವೇತ್ ||  
                          ಮಧ್ಯಮಾನಾಮಿಕಾಮಧ್ಯೇ  ಸ್ಫುಟಾ ಪಿತ್ತಕಫೇSಧಿಕೇ |   
                           ಅಂಗುಲಿತ್ರಿತಯೇಪಿ ಸ್ಯಾತ್ಪ್ರವ್ಯಕ್ತಾ ಸನ್ನಿಪಾತತಃ ||
                                                                                  (ಭಾ. ಪ್ರ. 239.)                                                                                     
          ವೈದ್ಯಶ್ರೇಷ್ಠನು ಗಂಡಸಿನ ಬಲಕೈಯ, ಹೆಂಗಸಾದರೆ ಎಡಕೈಯ, ಹೆಬ್ಬೆಟ್ಟಿನ ಬುಡದಲ್ಲಿ  
      ನಡೆಯುವ  ನಾಡಿಯನ್ನು ಪರೀಕ್ಷಿಸತಕ್ಕದ್ದು. ತನ್ನ ಮೂರು ಬೆರಳುಗಳಿಂದ ಆ ನಾಡಿಯನ್ನು 
      ಜಾಗ್ರತೆಯಿಂದ ಮುಟ್ಟಿ ನೋಡಿ, ಅದರ ನಡಿಕೆಯಿಂದ ಅನುಭವಶಾಲಿಯಾದವನು  ಎಲ್ಲಾ   
      ಸುಖದುಃಖಗಳನ್ನು  ತಿಳಿಯಬಹುದು.    *ಆಗಲೇ  ಸ್ನಾನ  ಮಾಡಿದ,  ಅಧವಾ   ಉಂಡ,                   
      ಅಧವಾ ಹಸಿವು-ಬಾಯಾರಿಕೆಗಳಿಂದ ಪೀಡಿತನಾದ,ಅಧವಾ ಬಿಸಿಲಿನಲ್ಲಿದ್ದು ಬಂದ,ಅಥವಾ  
      ವ್ಯಾಯಾಮದಿಂದ ಬಳಲಿದ ದೇಹವುಳ್ಳ ಮನುಷ್ಯನ ನಾಡಿಯು ಸರಿಯಾಗಿ ತಿಳಿಯಬರುವ  
      ದಿಲ್ಲ.*   ವಾತವು ಅಧಿಕವಾದಾಗ್ಗೆ, ತರ್ಜನೀ (ಹೆಬ್ಬೆಟ್ಟಿನ ಒತ್ತಿನ) ಬೆರಳಿನ ಅಡಿ  ಬಲವಾಗಿ    
      ಯೂ,  ಪಿತ್ತವು  ಅಧಿಕವಾದಾಗ್ಗೆ ಮಧ್ಯ ಬೆರಳಿನ ಅಡಿ ಬಲವಾಗಿಯೂ,  ಕಫವು  ಅಧಿಕವಾ            
      ದಾಗ್ಗೆ  ಅನಾಮಿಕ (ಉಂಗುರದ) ಬೆರಳಿನ  ಅಡಿ  ಬಲವಾಗಿಯೂ, ನಾಡಿಯು  ಕಾಣುವದು.  
      ವಾತಪಿತ್ತ ಅಧಿಕವಾದಾಗ್ಗೆ  ನಾಡಿಯು ತರ್ಜನೀ  ಮಧ್ಯಮಾ  ಬೆರಳುಗಳ  ನಡುವೆಯೂ,